ಕಂಸನ ವಂಶ ನಿರ್ಮೂಲನೆಗೆ ದೇವರು ನನ್ನನ್ನು ಕಳುಹಿಸಿದ್ದಾನೆ- ಕೇಜ್ರಿವಾಲ್
ರಾಕ್ಷಸ ಕಂಸನ ವಂಶಸ್ಥರನ್ನು ಮುಗಿಸಲು ದೇವರು ನನ್ನನ್ನು ಕಳುಹಿಸಿದ್ದಾನೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ನವದೆಹಲಿ: ರಾಕ್ಷಸ ಕಂಸನ ವಂಶಸ್ಥರನ್ನು ಮುಗಿಸಲು ದೇವರು ನನ್ನನ್ನು ಕಳುಹಿಸಿದ್ದಾನೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಕೇಜ್ರಿವಾಲ್ ಮುಸ್ಲಿಂ ಟೋಪಿ ಧರಿಸಿರುವ ಹಾಗೂ ಅವರು 'ಹಿಂದೂ ವಿರೋಧಿ' ಎಂದು ಬಿಂಬಿಸುವ ಬ್ಯಾನರ್‌ಗಳು ಗುಜರಾತ್‌ನ ಹಲವು ಪ್ರಮುಖ ನಗರಗಳಲ್ಲಿ ಕಾಣಿಸಿಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಜನ್ಮಾಷ್ಟಮಿ ದಿನ ಹುಟ್ಟಿದ್ದು, ರಾಕ್ಷಸ ಕಂಸನ ವಂಶಸ್ಥರನ್ನು ನಾಶಪಡಿಸುವ ವಿಶೇಷ ಕೆಲಸವೊಂದನ್ನು ದೇವರು ತನಗೆ ನೀಡಿರುವುದಾಗಿ ಹೇಳಿದರು.
ಫೋಸ್ಟರ್ ಮತ್ತು ಬ್ಯಾನರ್ ಗಳಲ್ಲಿ ಬಳಿಸಿರುವ ಪದಗಳು ದೇವರನ್ನು ಅಪಮಾನಿಸುವಂತಿವೆ, ಇಂತಹ ಪದಗಳನ್ನು ಬಳಸಿದವರನ್ನು ಗುಜರಾತಿನ ಜನರು ಕ್ಷಮಿಸಲ್ಲ. ಅಂತಹವರಿಗೆ ಹೇಳಲು ಬಯಸುತ್ತೇನೆ. ಕೃಷ್ಣಾ ಜನ್ಮಾಷ್ಟಮಿ ದಿನ ತಾನು ಜನಿಸಿದ್ದು, ಜನರನ್ನು ಭ್ರಷ್ಟಾಚಾರ ಮತ್ತು ಗೂಂಡಾಗಿರಿಯಿಂದ ಮುಕ್ತಗೊಳಿಸಲು ಕಂಸನ ವಂಶ ನಿರ್ಮೂಲನೆಯ ಕೆಲಸವನ್ನು ದೇವರು ತನಗೆ ನೀಡಿರುವುದಾಗಿ ತಿಳಿಸಿದರು.
"ದೇವರ ಆಶಯ ಈಡೇರಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ದೇವರು ನನ್ನೊಂದಿಗಿದ್ದಾನೆ. ಜನರು ನನ್ನೊಂದಿಗಿದ್ದಾರೆ. ಜನರು ಬದಲಾವಣೆಯನ್ನು ಬಯಸುತ್ತಾರೆ, ಅದಕ್ಕಾಗಿಯೇ ಅವರು ಅಸಮಾಧಾನಗೊಂಡಿದ್ದಾರೆ ಎಂದು ಅವರು ತಮ್ಮ ಗುಜರಾತ್ ಭೇಟಿಯ ಮೊದಲ ದಿನದಲ್ಲಿ ಹೇಳಿದರು.
ಈ ಮಧ್ಯೆ ಟ್ವೀಟ್ ಮಾಡಿರುವ ಕೇಜ್ರಿವಾಲ್, ಲೆಫ್ಟಿನೆಂಟ್ ಗೌರ್ವನರ್ ವಿ.ಕೆ. ಸಕ್ಸೇನಾ ಮೂಲಕ ಬಿಜೆಪಿ ರಾಷ್ಟ್ರ ರಾಜಧಾನಿಯ ಬದುಕನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


