ಜಾರ್ಖಂಡ್ ನಟಿ ರಿಯಾ ಕುಮಾರಿ ಹತ್ಯೆ: ದರೋಡೆಕಾರರ ದಾಳಿ ಎಂದಿದ್ದ ಪತಿಯನ್ನೇ ಬಂಧಿಸಿದ ಪೊಲೀಸರು!
ನಿನ್ನೆ ಗುಂಡೇಟಿಗೆ ಬಲಿಯಾಗಿದ್ದ ಜಾರ್ಖಂಡ್ ನಟಿ ರಿಯಾ ಕುಮಾರಿ ಹತ್ಯೆ ಪ್ರಕರಣಕ್ಕೆ ಕೋಲ್ಕತಾ ಪೊಲೀಸರು ಸ್ಫೋಟಕ ತಿರುವು ನೀಡಿದ್ದು, ದರೋಡೆಕಾರರ ದಾಳಿ ಆರೋಪ ಮಾಡಿದ್ದ ಪತಿಯನ್ನೇ ಬಂಧಿಸಿದ್ದಾರೆ.

ರಾಂಚಿ: ನಿನ್ನೆ ಗುಂಡೇಟಿಗೆ ಬಲಿಯಾಗಿದ್ದ ಜಾರ್ಖಂಡ್ ನಟಿ ರಿಯಾ ಕುಮಾರಿ ಹತ್ಯೆ ಪ್ರಕರಣಕ್ಕೆ ಕೋಲ್ಕತಾ ಪೊಲೀಸರು ಸ್ಫೋಟಕ ತಿರುವು ನೀಡಿದ್ದು, ದರೋಡೆಕಾರರ ದಾಳಿ ಆರೋಪ ಮಾಡಿದ್ದ ಪತಿಯನ್ನೇ ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ಹೌರಾದಲ್ಲಿ ಬುಧವಾರ ಗುಂಡಿನ ದಾಳಿಯಲ್ಲಿ ಮೃತಪಟ್ಟ ಜಾರ್ಖಂಡ್ ಮೂಲದ ನಟಿ ರಿಯಾ ಕುಮಾರಿ ಅವರ ಗಂಡ ಪ್ರಕಾಶ್ ಕುಮಾರ್ ಅವರನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ರಾಂಚಿಯಿಂದ ಕೋಲ್ಕತ್ತಗೆ ತೆರಳುವ ಮಾರ್ಗಮಧ್ಯೆ ಹೆದ್ದಾರಿ ದರೋಡೆಕೋರರು ಗುಂಡು ಹಾರಿಸಿ ರಿಯಾಳನ್ನು ಕೊಂದರು ಎಂದು ಅವರ ಪತಿ ಪ್ರಕಾಶ್ ಕುಮಾರ್ ಹೇಳಿಕೊಂಡಿದ್ದರು.
ಪತ್ನಿ ರಿಯಾ ಕುಮಾರಿ ಹತ್ಯೆ ಸಂಬಂಧ ದೂರು ನೀಡಿದ್ದ ಪತಿ ಪ್ರಕಾಶ್, 'ಬೆಳಿಗ್ಗೆ 6 ಗಂಟೆ ಸುಮಾರಿಗೆ ಶೌಚಕ್ಕೆಂದು ಕಾರು ನಿಲ್ಲಿಸಿದಾಗ ಮೂವರು ತಮ್ಮನ್ನು ದರೋಡೆ ಮಾಡಲು ಯತ್ನಿಸಿದರು ಎಂದು ಪ್ರಕಾಶ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು.
‘ರಿಯಾ ದರೋಡೆಕೋರರಿಗೆ ಪ್ರತಿರೋಧ ಒಡ್ಡಿದಾಗ ಅತ್ಯಂತ ಸಮೀಪದಿಂದ ಗುಂಡಿಕ್ಕಿ ಕೊಂದಿದ್ದಾರೆ’ಎಂದು ದೂರಿನಲ್ಲಿ ಪ್ರಕಾಶ್ ತಿಳಿಸಿರುವುದಾಗಿ ಪೊಲೀಸರು ಹೇಳಿದ್ಧಾರೆ.
ಪ್ರಕಾಶ್ ದೂರನ್ನು ಆಧರಿಸಿಯೇ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತನನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಅಪರಾಧ ಘಟನೆಯ ಮರುನಿರ್ಮಾಣ ಮಾಡುವ ಮೂಲಕ ತನಿಖೆ ನಡೆಸಿದ್ಧಾರೆ. ಇಂದೇ ಪ್ರಕಾಶ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


