ಬಂಗಾಳಿ ವಿರೋಧಿ ಹೇಳಿಕೆ: ಪರೇಶ್ ರಾವಲ್ ವಿರುದ್ಧ ಕೇಸ್ ದಾಖಲು
ಬಂಗಾಳಿ ಸಮುದಾಯ ಮತ್ತಿತರ ಸಮುದಾಯದ ನಡುವಣ ಸೌಹಾರ್ದತೆ ಹಾಳು ಮತ್ತು ಹಿಂಸಾಚಾರ ಪ್ರಚೋದನೆ ಹೇಳಿಕೆ ಆರೋಪದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಪರೇಶ್ ರಾವಲ್ ವಿರುದ್ಧ ಸಿಪಿಐ(ಎಂ) ಪೊಲೀಸ್ ದೂರು ದಾಖಲಿಸಿದೆ. ಸಿಪಿಐ-ಎಂ ಮುಖಂಡ ಎಂಡಿ ಸಲೀಂ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ.

ಕೊಲ್ಕತ್ತಾ: ಬಂಗಾಳಿ ಸಮುದಾಯ ಮತ್ತಿತರ ಸಮುದಾಯದ ನಡುವಣ ಸೌಹಾರ್ದತೆ ಹಾಳು ಮತ್ತು ಹಿಂಸಾಚಾರ ಪ್ರಚೋದನೆ ಹೇಳಿಕೆ ಆರೋಪದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಪರೇಶ್ ರಾವಲ್ ವಿರುದ್ಧ ಸಿಪಿಐ(ಎಂ) ಪೊಲೀಸ್ ದೂರು ದಾಖಲಿಸಿದೆ. ಸಿಪಿಐ-ಎಂ ಮುಖಂಡ ಎಂಡಿ ಸಲೀಂ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ.
ಪರೇಶ್ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಂಗಾಳಿಗರ ವಿರುದ್ಧ ಭಾವನೆಗಳನ್ನು ಪ್ರಚೋದಿಸುವಂತಿವೆ ಎಂದು ಸಲೀಂ ಟಾರಟೊಲಾ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪರೇಶ್ ಹೇಳಿಕೆ ದೇಶದ ಇತರ ಭಾಗಗಳಲ್ಲಿ ವಾಸಿಸುತ್ತಿರುವ ಬಂಗಾಳಿ ಜನರ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕವಾಗಿ ಇಂತಹ ಹೇಳಿಕೆ ಹಿಂಸಾಚಾರವನ್ನು ಪ್ರಚೋದಿಸುತ್ತವೆ ಮತ್ತು ದೇಶಾದ್ಯಂತ ಬಂಗಾಳ ಸಮುದಾಯ ಮತ್ತಿತರ ಸಮುದಾಯಗಳ ನಡುವಿನ ಸೌಹಾರ್ದತೆಯನ್ನು ಹಾಳು ಮಾಡುತ್ತವೆ ಎಂದು ಸಲೀಂ ಹೇಳಿದ್ದಾರೆ.
ಇತ್ತೀಚಿಗೆ ಗುಜರಾತ್ ಚುನಾವಣಾ ಪ್ರಚಾರದ ವೇಳೆ ಪರೇಶ್ ರಾವಲ್ ನೀಡಿದ ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿದೆ. ಗ್ಯಾಸ್ ಸಿಲಿಂಡರ್ ದುಬಾರಿಯಾಗಿದೆ ಆದರೆ, ಅದರ ಬೆಲೆ ಕಡಿಮೆಯಾಗಬಹುದು. ಜನರಿಗೆ ಉದ್ಯೋಗವೂ ಸಿಗಬಹುದು ಆದರೆ, ರೋಹಿಂಗ್ಯಾ ವಲಸೆಗಾರರು ಮತ್ತು ಬಾಂಗ್ಲಾದೇಶಿಗರು ದೆಹಲಿಯಂತೆ ನಿಮ್ಮ ಸುತ್ತ ವಾಸಿಸಲು ಆರಂಭಿಸಿದರೆ ಏನಾಗಲಿದೆ? ಗ್ಯಾಸ್ ಸಿಲಿಂಡರ್ ನಿಂದ ಏನು ಮಾಡ್ತಿರಾ? ಬಂಗಾಳಿಗರಿಗೆ ಮೀನು ಬೇಯಿಸಿಕೊಡುತ್ತೀರಾ ಎಂದು ವಿವಾದಾತಾತ್ಮಕ ಹೇಳಿಕೆ ನೀಡಿದ್ದರು.
ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಪರೇಶ್ ರಾವಲ್ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯ ಮೂಲಕ ಬಂಗಾಳಿಗರ ಕ್ಷಮೆಯಾಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


