ಸಂಪ್ರದಾಯದ ಹೆಸರಲ್ಲಿ ಪತ್ನಿಯ ಶವವನ್ನು ಮನೆಯೊಳಗೆ ಹೂತ ಮಧ್ಯ ಪ್ರದೇಶದ ಶಿಕ್ಷಕ; ನೆರೆಹೊರೆಯವರಿಂದ ಆಕ್ಷೇಪ
ಮಧ್ಯಪ್ರದೇಶದ ಸರ್ಕಾರಿ ಉದ್ಯೋಗಿಯೊಬ್ಬರು 'ಸಮುದಾಯದ ಸಂಪ್ರದಾಯ'ವನ್ನು ಗೌರವಿಸಲೆಂದು ತನ್ನ ಹೆಂಡತಿಯ ಶವವನ್ನು ತನ್ನ ಮನೆಯೊಳಗೆ ಹೂಳಿದ್ದಾರೆ. ಆದರೆ, ನೆರೆಹೊರೆಯವರು ವಿರೋಧಿಸಿದ ನಂತರ, ಶವವನ್ನು ಹೊರತೆಗೆದು ಸ್ಮಶಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ದಿಂಡೋರಿ: ಮಧ್ಯಪ್ರದೇಶದ ಸರ್ಕಾರಿ ಉದ್ಯೋಗಿಯೊಬ್ಬರು 'ಸಮುದಾಯದ ಸಂಪ್ರದಾಯ'ವನ್ನು ಗೌರವಿಸಲೆಂದು ತನ್ನ ಹೆಂಡತಿಯ ಶವವನ್ನು ತನ್ನ ಮನೆಯೊಳಗೆ ಹೂಳಿದ್ದಾರೆ. ಆದರೆ, ನೆರೆಹೊರೆಯವರು ವಿರೋಧಿಸಿದ ನಂತರ, ಶವವನ್ನು ಹೊರತೆಗೆದು ಸ್ಮಶಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಶಿಕ್ಷಕ ಓಂಕಾರ್ ದಾಸ್ ಮೊಗ್ರೆ (50) ಮಂಗಳವಾರ ತನ್ನ ಪತ್ನಿ ರುಕ್ಮಿಣಿ (45) ಕುಡಗೋಲು ಕಣ ರೋಗದಿಂದ (ಕುಡಗೋಲು ಕಣ ರಕ್ತಹೀನತೆಯಲ್ಲಿ, ಕೆಲವು ಕೆಂಪು ರಕ್ತ ಕಣಗಳು ಗೋಧಿಯನ್ನು ಕತ್ತರಿಸಲು ಬಳಸುವ ಕುಡಗೋಲುಗಳಂತೆ ಕಾಣುತ್ತವೆ) ಮೃತಪಟ್ಟ ನಂತರ ತಮ್ಮ ಮನೆಯ ವರಾಂಡದಲ್ಲಿಯೇ ಹೂಳಿದ್ದಾರೆ.
ಘಟನೆ ಕುರಿತು ಸ್ಥಳೀಯರಿಂದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ದಿಂಡೋರಿ ತಹಸೀಲ್ದಾರ್ ಗೋವಿಂದರಾಮ ಸಲಾಮೆ ತಿಳಿಸಿದ್ದಾರೆ.
ಸರ್ಕಾರಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಮೊಗ್ರೆ ಅವರ ಮನೆಯೊಳಗೆ ಶವವನ್ನು ಹೂಳಲು ಅಲ್ಲಿನ ನಿವಾಸಿಗಳು ಮತ್ತು ಸಂಬಂಧಿಕರು ವಿರೋಧ ವ್ಯಕ್ತಪಡಿಸಿದ್ದರು. ಆದಾಗ್ಯೂ, ಮೊಗ್ರೆ ಅವರು ತಮ್ಮ ಹೆಂಡತಿ ಮೇಲಿನ ಪ್ರೀತಿಯಿಂದ ಹಾಗೆ ಮಾಡಿದ್ದಾಗಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ದಿಂಡೋರಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿನ ಕುಟುಂಬದ ಸದಸ್ಯರ ಶವಗಳನ್ನು ಮನೆಯಲ್ಲಿನ ಆವರಣದಲ್ಲಿಯೇ ಸಮಾಧಿ ಮಾಡುವ 'ಪಣಿಕಾ ಸಮುದಾಯದ ಸಂಪ್ರದಾಯ'ದ ಬಗ್ಗೆ ಮೊಗ್ರೆ ಅವರು ಸ್ಥಳೀಯ ಜನರಿಗೆ ತಿಳಿಸಿದ್ದರು.
ಕೋತ್ವಾಲಿ ಪೊಲೀಸ್ ಠಾಣೆ ಪ್ರಭಾರಿ ಸಿ.ಕೆ. ಸಿರಮೆ ಮಾತನಾಡಿ, ಮೊಗ್ರೆ ಅವರು ಆಗಸ್ಟ್ 23 ರಂದು ಸಮುದಾಯದ ಪದ್ಧತಿಯನ್ನು ಉಲ್ಲೇಖಿಸಿ ಶವವನ್ನು ಹೂಳಿದ್ದಾರೆ. ನೆರೆಹೊರೆಯವರು ವಿರೋಧಿಸಿದ ನಂತರ, ಸ್ಥಳೀಯ ಅಧಿಕಾರಿಗಳು ಶವವನ್ನು ಹೊರತೆಗೆದು ಮರುದಿನ ಗೊತ್ತುಪಡಿಸಿದ ಸ್ಥಳಕ್ಕೆ ಸ್ಥಳಾಂತರಿಸಿದರು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


