ಹಣದುಬ್ಬರ, ನಿರುದ್ಯೋಗ ವಿರುದ್ಧ ಹೋರಾಟ ಮುಂದುವರಿಕೆ: ಬಿಜೆಪಿ ಸಂಸದ ವರುಣ್ ಗಾಂಧಿ
ಹಣದುಬ್ಬರ ಹಾಗೂ ನಿರುದ್ಯೋಗ ವಿರುದ್ಧ ಹೋರಾಟ ಮುಂದುವರೆಸುವುದಾಗಿ ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ.

ಪಿಲಿಭಿತ್: ಹಣದುಬ್ಬರ ಹಾಗೂ ನಿರುದ್ಯೋಗ ವಿರುದ್ಧ ಹೋರಾಟ ಮುಂದುವರೆಸುವುದಾಗಿ ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ. ಭಾರತದಲ್ಲಿನ ಮಕ್ಕಳು ಹಾಗೂ ಯುವ ಜನತೆ ಗೌರವ ಪಡೆಯಲು ಕೆಲಸ ಮಾಡುತ್ತೇನೆ. ಇಲ್ಲಿ ಯಾರೂ ಕೂಡಾ ಸಹಾಯಕ್ಕಾಗಿ ಬೇರೆಯವರ ಮುಂದೆ ತಲೆ ತಗ್ಗಿಸಬಾರದು ಎಂದು ಹೇಳುವ ಮೂಲಕ ತನ್ನದೇ ಪಕ್ಷದ ವಿರುದ್ಧ ವರುಣ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ನಿರುದ್ಯೋಗ ದೇಶದಲ್ಲಿ ನಿರ್ಮೂಲನೆಯಾಗುವವರೆಗೂ, ನಿಮ್ಮ ಮಕ್ಕಳು ಉದ್ಯೋಗ ಪಡೆಯುವುದಿಲ್ಲ, ನನ್ನ ಸಂಘರ್ಷ ಮುಂದುವರೆಯಲಿದೆ. ಭ್ರಷ್ಟಾಚಾರದ ವಿರುದ್ಧವೂ ನಾವು ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದರು.
ನಮ್ಮ ಪೂರ್ವಿಕರ ತ್ಯಾಗ, ಬಲಿದಾನ ವ್ಯರ್ಥವಾಗಲು ಅವಕಾಶ ನೀಡುವಿಲ್ಲ, ಮೂಲ ಸಮಸ್ಯೆಗಳು, ಅನ್ಯಾಯ ಮತ್ತು ಭ್ರಷ್ಟಾಚಾರ ವಿರುದ್ಧ ಜನರು ಧ್ವನಿ ಎತ್ತುವ ಕಾಲ ಬರಲಿದೆ ಎಂದು ಅವರು ಗುಡುಗಿದರು. ಪಿಲಿಭಿತ್ ಪ್ರವಾಸದ ವೇಳೆಯಲ್ಲಿ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಒಳಾಂಗಣ ಕ್ರೀಡಾಂಗಣವನ್ನು ಉದ್ಘಾಟಿಸಿದ ವರುಣ್ ಗಾಂಧಿ, ನಗರ ಸ್ಥಳೀಯ ಸಂಸ್ಥೆ ಸದಸ್ಯರೊಂದಿಗೆ ಸಂವಾದ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


