ದೇಶ

ವಿಚಲನೆಯ ಬಳಿಕ ಉಪಗ್ರಹಗಳ ಬಳಕೆ ಸಾಧ್ಯವಿಲ್ಲ: ಎಸ್ಎಸ್ಎಲ್ ವಿ ಮಿಷನ್ ಬಳಿಕ ಇಸ್ರೋ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಂದು ಉಡಾವಣೆ ಮಾಡಿರುವ ಎಸ್ಎಸ್ಎಲ್ ವಿ-ಡಿ1 ಉಪಗ್ರಹವನ್ನು ವೃತ್ತಾಕಾರದ ಕಕ್ಷೆಯ ಬದಲಿಗೆ ದೀರ್ಘವೃತ್ತದ ಕಕ್ಷೆಗೆ ಸೇರಿಸಿದ್ದು, ಅದನ್ನು ಬಳಕೆ ಮಾಡಲು ಸಾಧ್ಯವಿಲ್ಲ ಎಂದು ಸಂಸ್ಥೆ ತಿಳಿಸಿದೆ.

ವಿಚಲನೆಯ ಬಳಿಕ ಉಪಗ್ರಹಗಳ ಬಳಕೆ ಸಾಧ್ಯವಿಲ್ಲ: ಎಸ್ಎಸ್ಎಲ್ ವಿ ಮಿಷನ್ ಬಳಿಕ ಇಸ್ರೋ
ಎಸ್ಎಸ್ಎಲ್ ವಿ ಮಿಷನ್
Published On :

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಂದು ಉಡಾವಣೆ ಮಾಡಿರುವ ಎಸ್ಎಸ್ಎಲ್ ವಿ-ಡಿ1 ಉಪಗ್ರಹವನ್ನು ವೃತ್ತಾಕಾರದ ಕಕ್ಷೆಯ ಬದಲಿಗೆ ದೀರ್ಘವೃತ್ತದ ಕಕ್ಷೆಗೆ ಸೇರಿಸಿದ್ದು, ಅದನ್ನು ಬಳಕೆ ಮಾಡಲು ಸಾಧ್ಯವಿಲ್ಲ ಎಂದು ಸಂಸ್ಥೆ ತಿಳಿಸಿದೆ. 

ಇಂದಿನ ಉಡಾವಣೆಗೆ ಸಂಬಂಧಿಸಿದಂತೆ ವಿಶ್ಲೇಷಣೆ ನಡೆಸಿ  ಶಿಫಾರಸುಗಳನ್ನು ನೀಡಲು ಸಮಿತಿಯೊಂದನ್ನು ರಚನೆ ಮಾಡಲಾಗಿದೆ, ಶಿಫಾರಸುಗಳನ್ನು ಆಧರಿಸಿ ಇಸ್ರೋ ಎಸ್ಎಸ್ಎಲ್ ವಿ-ಡಿ2 ಉಪಗ್ರಹದೊಂದಿಗೆ ಶೀಘ್ರವೇ ಬರಲಿದೆ ಎಂದು ಹೇಳಿದೆ.

ಎಸ್ಎಸ್ಎಲ್ ವಿ-ಡಿ1 ಉಪಗ್ರಹಗಳನ್ನು 356ಕಿ.ಮೀx 76 ಕಿ.ಮೀ ನ ದೀರ್ಘ ವೃತ್ತಾಕಾರದ  ಕಕ್ಷೆಯಲ್ಲಿರಿಸಿದೆ. ಆದರೆ ಅದು 356 ಕಿ.ಮೀ ವೃತ್ತಾಕಾರಾದ ಕಕ್ಷೆಗೆ ಸೇರಬೇಕಿತ್ತು. ಈ ಉಪಗ್ರಹಗಳನ್ನು ಬಳಕೆ ಮಾಡಲು ಸಾಧ್ಯವಿಲ್ಲ.  ಸಂವೇದಕ ವೈಫಲ್ಯವನ್ನು ಗುರುತಿಸಲು ಲಾಜಿಕ್ ನ ವಿಫಲತೆಯಿಂದ ಈ ಅವಘಡ ಉಂಟಾಗಿದೆ ಎಂದು ಇಸ್ರೋ ಟ್ವಿಟರ್ ಮೂಲಕ ಪ್ರಕಟಿಸಿದೆ. 

ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರ ವಿವರವಾದ ಹೇಳಿಕೆಯನ್ನು ಶೀಘ್ರವೇ ಅಪ್ಲೋಡ್ ಮಾಡುವುದಾಗಿ ಇಸ್ರೋ ತಿಳಿಸಿದೆ. 
ಎಸ್‌ಎಸ್‌ಎಲ್‌ವಿ-ಡಿ1 ಇಒಎಸ್ -02 ಉಪಗ್ರಹವನ್ನು ಮತ್ತು ವಿದ್ಯಾರ್ಥಿಗಳೇ ತಯಾರಿಸಿರುವ AzadiSAT ಉಪಗ್ರಹವನ್ನು ಉಡಾವಣೆ ಮಾಡಿತ್ತು. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.