ದೇಶ

ಕೃಷಿ ಕಾನೂನು ವಿರುದ್ಧ ಪ್ರತಿಭಟನೆ: ದೆಹಲಿಯ ಜಂತರ್ ಮಂತರ್ ನಲ್ಲಿ 200 ಮಹಿಳಾ ರೈತರಿಂದ 'ಕಿಸಾನ್ ಸಂಸದ್'

ಕೇಂದ್ರದ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟಮೆ ಮುಂದುವರೆದಿದ್ದು, ದೆಹಲಿಯ ನೆರೆಯ ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣದ ಸುಮಾರು 200 ಮಹಿಳಾ ರೈತರು ಸೋಮವಾರ...

ಕೃಷಿ ಕಾನೂನು ವಿರುದ್ಧ ಪ್ರತಿಭಟನೆ: ದೆಹಲಿಯ ಜಂತರ್ ಮಂತರ್ ನಲ್ಲಿ 200 ಮಹಿಳಾ ರೈತರಿಂದ 'ಕಿಸಾನ್ ಸಂಸದ್'
ಕಿಸಾನ್ ಸಂಸದ್ ನಲ್ಲಿ ಮೇಧಾ ಪಾಟ್ಕರ್
Published On :

ನವದೆಹಲಿ: ಕೇಂದ್ರದ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟಮೆ ಮುಂದುವರೆದಿದ್ದು, ದೆಹಲಿಯ ನೆರೆಯ ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣದ ಸುಮಾರು 200 ಮಹಿಳಾ ರೈತರು ಸೋಮವಾರ ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ 'ಕಿಸಾನ್ ಸಂಸದ್' ನಡೆಸಿದರು.

ಮಹಿಳಾ ರೈತರು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ(ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, 2020; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ, 2020ರ ಒಪ್ಪಂದ; ಮತ್ತು ಅಗತ್ಯ ಸರಕುಗಳ(ತಿದ್ದುಪಡಿ) ಕಾಯ್ದೆ, 2020 'ಕಿಸಾನ್ ಸಂಸದ್' ಕೇಂದ್ರಬಿಂದುವಾಗಿತ್ತು.

ಮಹಿಳಾ 'ಕಿಸಾನ್ ಸಂಸದ್' ಅನ್ನು ಉದ್ದೇಶಿಸಿ ಮಾತನಾಡಿದ ರಾಜಕಾರಣಿ ಸುಭಾಸಿನಿ ಅಲಿ ಅವರು, "ಇಂದಿನ 'ಸಂಸಾದ್' ಮಹಿಳೆಯರ ಶಕ್ತಿಯನ್ನು ಪ್ರದರ್ಶಿಸುತ್ತದೆ. ಮಹಿಳೆಯರು ಕೃಷಿ ಮಾಡಬಹುದು ಮತ್ತು ದೇಶವನ್ನು ನಡೆಸಬಹುದು ಎಂದು ಅಲಿ ಹೇಳಿದರು.

ಮೂರು "ಕಪ್ಪು ಕೃಷಿ ಕಾನೂನುಗಳ" ವಿರುದ್ಧ ಮತ್ತು ಕನಿಷ್ಠಿ ಬೆಂಬಲ ಬೆಲೆಗೆ ಒತ್ತಾಯಿಸಿ ನಡೆಯುತ್ತಿರುವ ರೈತರ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಅವರು ಪ್ರತಿಪಾದಿಸಿದರು, "ಸರ್ಕಾರವು ನಮ್ಮನ್ನು (ರೈತರನ್ನು) ಭಯೋತ್ಪಾದಕರು, ಖಲಿಸ್ತಾನಿಗಳು ಮುಂತಾದ ವಿವಿಧ ಹೆಸರಿನಿಂದ ಕರೆಯುತ್ತಲೇ ಇದೆ, ಆದರೆ ಅವರಿಗೆ ಶಕ್ತಿ ಇದ್ದರೆ ಈ ಭಯೋತ್ಪಾದಕರು ಮತ್ತು ಖಲಿಸ್ತಾನಿಗಳು ಉತ್ಪಾದಿಸುವ ಆಹಾರವನ್ನು ಅವರು ತಿನ್ನಬಾರದು" ಎಂದು ಸವಾಲು ಹಾಕಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.