ದೇಶ

ಸರ್ವಿಸ್ ರೈಫಲ್ ನಿಂದ ಆಕಸ್ಮಿಕವಾಗಿ ಸಿಡಿದ ಗುಂಡು: ಸಿ ಆರ್ ಪಿ ಎಫ್ ಹೆಡ್ ಕಾನ್ ಸ್ಟೇಬಲ್ ಸಾವು

ಬಂದೂಕಿನಿಂದ ಸಿಡಿದ ಗುಂಡು ತ್ರಿಲೋಕ್ ಸಿಂಗ್ ಅವರ ತಲೆಯನ್ನು ಭೇಧಿಸಿ, ಬಸ್ಸಿನ ಛಾವಣಿಯನ್ನೂ ಭೇದಿಸಿ ಬಸ್ ನ ಟಾಪ್ ನಲ್ಲಿ ಕುಳಿತಿದ್ದ ಸಹೋದ್ಯೋಗಿ ಮಹಿಳಾ ಪೇದೆಯನ್ನು ಗಾಯಗೊಳಿಸಿದೆ.

ಸರ್ವಿಸ್ ರೈಫಲ್ ನಿಂದ ಆಕಸ್ಮಿಕವಾಗಿ ಸಿಡಿದ ಗುಂಡು: ಸಿ ಆರ್ ಪಿ ಎಫ್ ಹೆಡ್ ಕಾನ್ ಸ್ಟೇಬಲ್ ಸಾವು
ಸಾಂದರ್ಭಿಕ ಚಿತ್ರ
Published On :

ರಾಯ್ ಪುರ: ಪ್ಯಾಸೆಂಜರ್ ಬಸ್ ನಲ್ಲಿ ಕುಳಿತಿದ್ದ ಸಿ ಆರ್ ಪಿ ಎಫ್ ಹೆಡ್ ಕಾನ್ ಸ್ಟೇಬಲ್ ಬಂದೂಕಿನಿಂದ  ಸಿಡಿದ ಗುಂಡು ಆತನ ಸಾವಿಗೆ ಕಾರಣವಾದ ಘಟನೆ ಛತ್ತೀಸ್ ಗಡ ರಾಜ್ಯದ ಬಸ್ತರ್ ಎಂಬಲ್ಲಿ ನಡೆದಿದೆ. 

ಮೃತಪಟ್ಟ ಜವಾನ ಹೆಸರು ತ್ರಿಲೋಕ್ ಸಿಂಗ್ ಎಂದು ತಿಳಿದುಬಂದಿದೆ. ಬಸ್ ನಲ್ಲಿ ಮೃತರ ಜೊತೆ ಸಹೋದ್ಯೋಗಿ ಮಹಿಳಾ ಪೇದೆಯೂ ಇದ್ದರು. ಬಂದೂಕಿನಿಂದ ಸಿಡಿದ ಗುಂಡು ತ್ರಿಲೋಕ್ ಸಿಂಗ್ ಅವರ ತಲೆಯನ್ನು ಭೇಧಿಸಿ, ಬಸ್ಸಿನ ಛಾವಣಿಯನ್ನೂ ಭೇದಿಸಿ ಬಸ್ ನ ಟಾಪ್ ನಲ್ಲಿ ಕುಳಿತಿದ್ದ ಸಹೋದ್ಯೋಗಿ ಮಹಿಳಾ ಪೇದೆಯನ್ನು ಗಾಯಗೊಳಿಸಿದೆ.

ಗುಂಡೇಟಿನಿಂದ ಗಾಯಗೊಂಡ ಜವಾನನನ್ನು ಆಸ್ಪತ್ರೆಗೆ ದಾಖಲಿಸಿಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಘಟನೆಯ ತನಿಖೆಗಾಗಿ ಆದೇಶಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. 

Related Article

ಬೆಂಗಳೂರು: ತಲೆಗೆ ಗುಂಡು ಹಾರಿಸಿಕೊಂಡ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ; ಆತ್ಮಹತ್ಯೆಯೋ, ಕೊಲೆಯೋ ಎನ್ನುವ ಶಂಕೆ?

ನವ ವಿವಾಹಿತೆಯ ಹುಚ್ಚು ಸಾಹಸ: ಬಂದೂಕಿನ ಜೊತೆ ಸೆಲ್ಫಿ ತೆಗೆದುಕೊಳ್ಳುವ ವೇಳೆ ಗುಂಡು ಸಿಡಿದು ಸಾವು!

ತಪ್ಪಿಸಿಕೊಳ್ಳಲು ಯತ್ನಿಸುವ ಅಪರಾಧಿಗಳ ಮೇಲೆ ಗುಂಡು ಹಾರಿಸುವುದು ಒಂದು ಮಾದರಿಯಾಗಬೇಕು: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಯುಪಿ: ಮಾಸ್ಕ್ ಧರಿಸದಿದ್ದಕ್ಕೆ ಮಾತಿನ ಚಕಮಕಿ, ಬ್ಯಾಂಕಿನ ಒಳಗಡೆ ಗುಂಡು ಹಾರಿಸಿದ ಭದ್ರತಾ ಸಿಬ್ಬಂದಿ!

ಪಾಕಿಸ್ತಾನ: ವಿಡಿಯೋ ಮಾಡುವಾಗ ಆಕಸ್ಮಿಕವಾಗಿ ಗುಂಡು ಸಿಡಿದು 'ಟಿಕ್ ಟಾಕರ್' ಬಲಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.