ಜಮ್ಮು ಕಾಶ್ಮೀರ ಉಗ್ರ ಸಂಘಟನೆಗಳಿಂದ ಹಿಟ್ ಅಂಡ್ ರನ್ ತಂತ್ರ: ಸೈನಿಕರಿಗೆ ಸವಾಲು
ತಾಲಿಬಾನ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕಾಶ್ಮೀರದಲ್ಲಿ ಉಗ್ರರ ಚಟುವಟಿಕೆಗಳು ಹೆಚ್ಚಾಗಿರುವುದು ಸೇನೆಯ ಗಮನಕ್ಕೆ ಬಂದಿದೆ. ಅಫ್ಘಾನಿಸ್ತಾನದಿಂದ ಕಾಶ್ಮೀರ ಉಗ್ರರಿಗೆ ಶಸ್ತ್ರಾಸ್ರ ಸರಬರಾಜು ಆಗುತ್ತಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿದ್ದವು.

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿನ ಉಗ್ರಸಂಘಟನೆಗಳು ಭಾರತೀಯ ಭದ್ರತಾ ಪಡೆಗಳ ವಿರುದ್ಧ ಹೋರಾಟದಲ್ಲಿ ಹೊಸ ತಂತ್ರವನ್ನು ಅಳವಡಿಸಿಕೊಳ್ಳುತ್ತಿರುವ ಕಳವಳಕಾರಿ ಮಾಹಿತಿ ಹೊರಬಂದಿದೆ. ಇದುವರೆಗೂ ಉಗ್ರರು ಮತ್ತು ಸೈನಿಕರ ನಡುವೆ ಗುಂಡಿನ ಚಕಮಕಿ ಎನ್ನುವ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಓದುತ್ತಿದ್ದೆವು. ಅದಕ್ಕೆ ಫುಲ್ ಸ್ಟಾಪ್ ಹಾಕಲು ಉಗ್ರಸಂಘಟನೆಗಳು ನೂತನ ತಂತ್ರಕ್ಕೆ ಮೊರೆ ಹೋಗಿವೆ.
ಉಗ್ರಸಂಘಟನೆಗಳು ಹಿಟ್ ಅಂಡ್ ರನ್ ತಂತ್ರವನ್ನು ಬಳಸುತ್ತಿರುವ ಬಗ್ಗೆ ಈ ಹಿಂದೆ ಸೇನೆಗೆ ಸುಳಿವು ದೊರೆತಿತ್ತು. ಆದರೀಗ ಅದು ಖಚಿತಗೊಂಡಿದೆ. ಭಾರತೀಯ ಭದ್ರತಾಪಡೆಗಳ ಮೇಲೆ ಗ್ರೆನೇಡ್ ಮತ್ತು ಐಇಡಿ ದಾಳಿ ಪ್ರಕರಣಗಳು ಹೆಚ್ಚುತ್ತಿದ್ದು, ಉಗ್ರರ ಪತ್ತೆಗೂ ಮುನ್ನವೇ ಅವರು ಪರಾರಿಯಾಗುತ್ತಿದ್ದಾರೆ. ಅಫ್ಘಾನಿಸ್ತಾನದಿಂದ ಕಾಶ್ಮೀರ ಉಗ್ರರಿಗೆ ಶಸ್ತ್ರಾಸ್ರ ಸರಬರಾಜು ಆಗುತ್ತಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿದ್ದವು.
ತಾಲಿಬಾನ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕಾಶ್ಮೀರದಲ್ಲಿ ಉಗ್ರರ ಚಟುವಟಿಕೆಗಳು ಹೆಚ್ಚಾಗಿರುವುದು ಸೇನೆಯ ಗಮನಕ್ಕೆ ಬಂದಿದೆ. ತಾವು ತೀವ್ರ ಕಟ್ಟೆಚ್ಚರದಿಂದ ಉಗ್ರ ಚಟುವಟಿಕೆಗಳ ಮೇಲೆ ನಿಗಾ ಇರಿಸಿರುವುದಾಗಿ ಭದ್ರತಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.
Related Article
ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಎನ್ ಕೌಂಟರ್: ಓರ್ವ ಉಗ್ರನ ಹತ್ಯೆ
ಕಾಶ್ಮೀರದ ಉಧಂಪುರದಲ್ಲಿ ಸೇನಾ ಹೆಲಿಕಾಪ್ಟರ್ ಪತನ, ಇಬ್ಬರು ಪೈಲಟ್ ಸಾವು
ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಚೀತಾ ಹೆಲಿಕಾಪ್ಟರ್ ಅಪಘಾತ: ಇಬ್ಬರು ಪೈಲಟ್‌ಗಳಿಗೆ ಗಾಯ
ಕಾಶ್ಮೀರದ ಎಲ್ಲಾ ಹಿಂದೂಗಳೂ ಕಾಶ್ಮೀರಿ ಪಂಡಿತರಲ್ಲ: ಲಡಾಖ್ ಹೈಕೋರ್ಟ್ ತೀರ್ಪು
ಕಾಶ್ಮೀರದ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥರ 'ಅನಗತ್ಯ ಟೀಕೆ'ಗೆ ಭಾರತ ಅಸಮಾಧಾನ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


