ಉತ್ತರಪ್ರದೇಶ ಯೋಗಿ ಅಭಿವೃದ್ಧಿ ಜಾಹೀರಾತಿನಲ್ಲಿ ಪ. ಬಂಗಾಳ ಫ್ಲೈ ಓವರ್ ಅವಾಂತರ: ಟಿಎಂಸಿ ಲೇವಡಿ
ಯೋಗಿ ಜಾಹೀರಾತೊಂದರಲ್ಲಿ ಪ.ಬಂಗಾಳದ ಫ್ಲೈ ಓವರ್ ಚಿತ್ರವನ್ನು ಬಳಸಿಕೊಳ್ಳಲಾಗಿರುವುದನ್ನು ಟಿ ಎಂ ಸಿ ಪಕ್ಷ ಪತ್ತೆ ಹಚ್ಚಿದ್ದು, ಪ್ರಕರಣ ವಿವಾದದ ರೂಪ ಪಡೆದುಕೊಂಡಿದೆ.

ಲಕನೌ: ಮುಂದಿನ ಚುನಾವಣೆಗೆ ಸಿದ್ಧವಾಗುತ್ತಿರುವ ಯೋಗಿ ಆದಿತ್ಯನಾಥರ ಬಿಜೆಪಿ ಸರ್ಕಾರ ರಾಜ್ಯದಲ್ಲಿ ತಾನು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಜಾಹೀರಾತನ್ನು ಪ್ರಕಟಿಸಿತ್ತು. ಆ ಜಾಹೀರಾತುಗಳಲ್ಲಿ ಯೋಗಿ ಸರ್ಕಾರ ರಾಜ್ಯದ ರಸ್ತೆಗಳು, ಮೂಲ ಸೌಕರ್ಯಗಳ ಚಿತ್ರಗಳ ಜೊತೆಗೆ ಯೋಗಿ ಭಾವಚಿತ್ರವನ್ನು ಬಳಸಿಕೊಳ್ಳಲಾಗಿತ್ತು.
ಯೋಗಿ ಜಾಹೀರಾತೊಂದರಲ್ಲಿ ಪ.ಬಂಗಾಳದ ಕೋಲ್ಕತಾ ಫ್ಲೈ ಓವರ್ ಚಿತ್ರವನ್ನು ಬಳಸಿಕೊಳ್ಳಲಾಗಿರುವುದನ್ನು ಟಿ ಎಂ ಸಿ ಪಕ್ಷ ಪತ್ತೆ ಹಚ್ಚಿದ್ದು, ಪ್ರಕರಣ ವಿವಾದದ ರೂಪ ಪಡೆದುಕೊಂಡಿದೆ.
ಯೋಗಿಯವರ ಅಭಿವೃದ್ಧಿ ಕೆಲಸಗಳ ಜಾಹೀರಾತಿನಲ್ಲಿ ಪ.ಬಂಗಾಳದ ಫ್ಲೈ ಓವರ್ ಇರುವುದರಿಂದ ಬಿಜೆಪಿ ಸರ್ಕಾರ ಟಿ.ಎಂ.ಸಿ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ ಎನ್ನುವುದನ್ನು ಒಪ್ಪಿಕೊಂಡಂತಾಗಿದೆ ಎಂದು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಲೇವಡಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


