ದೇಶ

ಚತ್ತೀಸ್ ಗಢ ಕ್ರೈಸ್ತ ಪಾದ್ರಿ ಮೇಲೆ ಬಲಪಂಥೀಯರ ದಾಳಿ: ಮತಾಂತರ ನಡೆಸುತ್ತಿದ್ದ ಆರೋಪ

ಮತಾಂತರ ಆರೋಪ ಸಂಬಂಧ ಪೊಲಿಸರು ಹರೀಶ್ ಅವರನ್ನು ಠಾಣೆಗೆ ಕರೆಸಿಕೊಂಡಿದ್ದರು. ಪೊಲೀಸ್ ಠಾಣೆಯಲ್ಲಿ ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ಪಾದ್ರಿ ಮೇಲೆ ದಾಳಿ ನಡೆಸಿದ್ದರು.

ಚತ್ತೀಸ್ ಗಢ ಕ್ರೈಸ್ತ ಪಾದ್ರಿ ಮೇಲೆ ಬಲಪಂಥೀಯರ ದಾಳಿ: ಮತಾಂತರ ನಡೆಸುತ್ತಿದ್ದ ಆರೋಪ
ಸಾಂದರ್ಭಿಕ ಚಿತ್ರ
Published On :

ರಾಯ್ಪುರ: ಮತಾಂತರ ನಡೆಸುತ್ತಿದ್ದ ಅನುಮಾನದ ಮೇರೆಗೆ ಬಲಪಂಥೀಯರ ಗುಂಪೊಂದು ಕ್ರೈಸ್ತ ಪಾದ್ರಿ ಮೇಲೆ ದಾಳಿ ನಡೆಸಿರುವ ಘಟನೆ ರಾಯ್ಪುರದಲ್ಲಿ ನಡೆದಿದೆ. ಪೊಲೀಸ್ ಠಾಣೆಯಲ್ಲಿ ಈ ದಾಳಿ ನಡೆದಿರುವುದು ಅಚ್ಚರಿ. 

ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ಹರೀಶ್ ಸಾಹು ಎಂಬ ಪಾದ್ರಿಯ ಮೇಲೆ ಮತಾಂತರ ಆರೋಪ ಹೊರಿಸಿ ಪೊಲೀಸ್ ದೂರು ನೀಡಿದ್ದರು. ಈ ಸಂಬಂಧ ಪೊಲಿಸರು ಹರೀಶ್ ಅವರನ್ನು ಠಾಣೆಗೆ ಕರೆಸಿಕೊಂಡಿದ್ದರು. 

ಈ ಸಂದರ್ಭ ಅಲ್ಲಿಯೇ ಇದ್ದ ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ಪಾದ್ರಿ ಮೇಲೆ ದಾಳಿ ನಡೆಸಿದ್ದರು. ದಾಳಿ ಸಂದರ್ಭ ಪಾದ್ರಿ ಜೊತೆಗಿದ್ದ ಇಬ್ಬರು ವ್ಯಕ್ತಿಗಳು ಗಾಯಗೊಂಡಿರುವುದಾಗಿ ತಿಳಿದುಬಂದಿದೆ.

ಕ್ರೈಸ್ತ ಪಾದ್ರಿ ಮೇಲೆ ದಾಳಿ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.