ದೇಶ

ಬಾಬಾ ರಾಮದೇವ್​ ಗೆ ದೆಹಲಿ ಹೈಕೋರ್ಟ್ ನಿಂದ ಸಮನ್ಸ್​​

ಅಲೋಪಥಿ ಬಗ್ಗೆ ಸುಳ್ಳು ಮತ್ತು ಆಧಾರರಹಿತ ಮಾಹಿತಿಯನ್ನು ಹರಡಿದಕ್ಕಾಗಿ ಯೋಗ ಗುರು ರಾಮದೇವ್​ ವಿರುದ್ಧ ಭಾರತೀಯ ವೈದ್ಯಕೀಯ ಸಂಘವು ಮೊಕದ್ದಮೆ ಹೂಡಿತ್ತು. ಇದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್​ ಸಮನ್ಸ್​​ ಜಾರಿ ಮಾಡಿದೆ.

ಬಾಬಾ ರಾಮದೇವ್​ ಗೆ ದೆಹಲಿ ಹೈಕೋರ್ಟ್ ನಿಂದ ಸಮನ್ಸ್​​
ಯೋಗ ಗುರು ಬಾಬಾ ರಾಮದೇವ್
Published On :

ನವದೆಹಲಿ: ಅಲೋಪಥಿ ಬಗ್ಗೆ ಸುಳ್ಳು ಮತ್ತು ಆಧಾರರಹಿತ ಮಾಹಿತಿಯನ್ನು ಹರಡಿದಕ್ಕಾಗಿ ಯೋಗ ಗುರು ರಾಮದೇವ್​ ವಿರುದ್ಧ ಭಾರತೀಯ ವೈದ್ಯಕೀಯ ಸಂಘವು ಮೊಕದ್ದಮೆ ಹೂಡಿತ್ತು. ಇದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್​ ಬುಧವಾರ ಸಮನ್ಸ್​​ ಜಾರಿ ಮಾಡಿದೆ.

ಸಂಘದ ಈ ಮನವಿಯೂ ಕ್ಷುಲ್ಲಕವಲ್ಲ, ಇದು ಖಂಡಿತವಾಗಿಯೂ ಪ್ರಕರಣ ದಾಖಲಿಸುವಂತ ವಿಷಯ ಎಂದು ಕೋರ್ಟ್​ ಹೇಳಿದೆ. 

ಈ ಸಮನ್ಸ್​​ಗೆ ರಾಮ್​ದೇವ್​ ಪ್ರತಿಕ್ರಿಯೆ ನೀಡಲು ನ್ಯಾಯಮೂರ್ತಿ ಸಿ ಹರಿ ಶಂಕರ್ ಅವರು ನಾಲ್ಕು ವಾರಗಳ ಕಾಲಾವಕಾಶ ನೀಡಿದ್ದಾರೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ ಮತ್ತು ಯಾವುದೇ ಪರಿಹಾರ, ಮಧ್ಯಂತರ ಅಥವಾ ಇತರವುಗಳನ್ನು ನೀಡುವ ವಿಷಯವನ್ನು ನಂತರ ಪರಿಶೀಲಿಸಲಾಗುವುದು ಎಂದು ನ್ಯಾಯಾಧೀಶರು ಹೇಳಿದ್ದಾರೆ.

ನಾನು ರಾಮದೇವ್ ವಿಡಿಯೋ ತುಣುಕುಗಳನ್ನು ನೋಡಿದ್ದೇನೆ. ವೀಡಿಯೊ ಕ್ಲಿಪ್ ಗಳ ಪರಿಶೀಲನೆಯಿಂದ, ನಿಮ್ಮ ಕ್ಲೈಂಟ್ ಅಲೋಪತಿ ಚಿಕಿತ್ಸಾ ಪ್ರೋಟೋಕಾಲ್ ಅನ್ನು ತಿರಸ್ಕರಿಸುತ್ತಿದ್ದಾರೆ. ಅವರಿಗೆ ತಡೆಯಾಜ್ಞೆ ನೀಡಲು ಏನೂ ಇಲ್ಲದಿರಬಹುದು. ಆದರೆ ಪ್ರಕರಣವು ಕ್ಷುಲ್ಲಕವಲ್ಲ ಎಂದು ನ್ಯಾಯಾಧೀಶರು ರಾಮ್ ದೇವ್ ಪರ ಹಾಜರಾದ ಹಿರಿಯ ವಕೀಲ ರಾಜೀವ್ ನಾಯರ್ ಅವರಿಗೆ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.