ಬಾಲಿವುಡ್ ತಾರೆ ನೋರಾ ಫತೇಹಿಗೆ ಲಕ್ಷುರಿ ಕಾರ್ ಉಡುಗೊರೆ ನೀಡಿದ್ದ ವಂಚಕ ಸುಕೇಶ್: ಇ.ಡಿ ವಿಚಾರಣೆಯಲ್ಲಿ ಬಹಿರಂಗ
ಉದ್ಯಮಿಯ ಪತ್ನಿಗೆ 200 ಕೋಟಿ ರೂ. ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿದ ಆರೋಪದ ಮೇಲೆ ಸುಕೇಶ್ ಮತ್ತು ಆತನ ತಾರಾ ಪತ್ನಿ ಕೇರಳ ಮೂಲದ ಲೀನಾ ಮರಿಯಾರನ್ನು ಪೊಲೀಸರು ಬಂಧಿಸಿದ್ದರು.

ನವದೆಹಲಿ: ವಂಚನೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಸುಕೇಶ್ ಚಂದ್ರಶೇಖರ್ ತಾನು ಬಾಲಿವುಡ್ ನ ಖ್ಯಾತ ಸಿನಿಮಾ ನಟಿ ನೋರಾ ಫತೇಹಿ ಅವರಿಗೆ ಕಾರೊಂದನ್ನು ಉಡುಗೊರೆ ನೀಡಿದ್ದಾಗಿ ಪೊಲೀಸ್ ವಿಚಾರಣೆ ಸಂದರ್ಭ ಬಾಯಿಬಿಟ್ಟಿದ್ದಾನೆ. ಈ ಕಾರು ದುಬಾರಿ ಬೆಲೆಯ ಐಷಾರಾಮಿ ಕಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತಿತರ ಕ್ವಾಡ್ ನಾಯಕರಿಗೆ 'ವಿಶಿಷ್ಠ ಗಿಫ್ಟ್' ನೀಡಿದ ಪ್ರಧಾನಿ ಮೋದಿ
ಉದ್ಯಮಿಯ ಪತ್ನಿಗೆ 200 ಕೋಟಿ ರೂ. ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿದ ಆರೋಪದ ಮೇಲೆ ಸುಕೇಶ್ ಮತ್ತು ಆತನ ತಾರಾ ಪತ್ನಿ ಕೇರಳ ಮೂಲದ ಲೀನಾ ಮರಿಯಾರನ್ನು ಪೊಲೀಸರು ಬಂಧಿಸಿದ್ದರು. ನಂತರ ಅವರಿಬ್ಬರೂ ಎಸಗಿದ ಹಲವು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಲೀನಾ ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಿಲ್ಲಿ ನಟಿಸಿದ್ದರು.
ಹಣವಂಚನೆ ಪ್ರಕರಣವನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಬಾಲಿವುಡ್ ತಾರೆ ನೋರಾ ಫತೇಹಿ ಅವರಿಗೆ ಕಾರ್ ಉಡುಗೊರೆಯಾಗಿ ನೀಡಿದ್ದರ ಕುರಿತು ಪತ್ರಕರ್ತರು ಹೆಚ್ಚಿನ ವಿವರಣೆ ಕೇಳಿದಾಗ ಬೇಕಿದ್ದರೆ ನೋರಾ ಅವರನ್ನೇ ಕೇಳಿ ಎಂಡು ಆರೋಪಿ ಸುಕೇಶ್ ಹೇಳಿದ್ದಾನೆ.
Related Article
ಸ'ಫಲ' ರಾಜತಂತ್ರ: ಬಾಂಗ್ಲಾ ಪ್ರಧಾನಿಗೆ ಪ್ರತಿ ಉಡುಗೊರೆಯಾಗಿ ಪೈನ್ ಆಪಲ್ ಕಳಿಸಲು ತ್ರಿಪುರಾ ಮುಖ್ಯಮಂತ್ರಿ ಮುಂದು!
ಲಸಿಕೆ ಹಾಕಿಸಿಕೊಂಡರೆ ಉಡುಗೊರೆ: ಗ್ರಾಮಸ್ಥರನ್ನು ಪ್ರೋತ್ಸಾಹಿಸಲು ಸಾಮಾಜಿಕ ಕಾರ್ಯಕರ್ತನ ಐಡಿಯಾ!
'ಕ್ರಿಕೆಟ್ ರೂಲ್ಸ್ ಕಲಿಯುವ ಸಮಯ'; ವಿಶೇಷ ಉಡುಗೊರೆಗಾಗಿ ಕೊಹ್ಲಿಗೆ ಮ್ಯಾಂಚೆಸ್ಟರ್ ಸಿಟಿ ಮ್ಯಾನೇಜರ್ ಧನ್ಯವಾದ!
ಒಡಿಶಾ: ಮಗನ ಜನ್ಮ ದಿನಕ್ಕೆ ಉಡುಗೊರೆಯಾಗಿ ಚಂದ್ರನ ಮೇಲೆ ಒಂದು ಎಕರೆ ಭೂಮಿ ಖರೀದಿಸಿದ ಯೋಧ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


