ಆರ್ಯನ್ ಖಾನ್ ಗೆ ಡ್ರಗ್ಸ್ ತೆಗೆದುಕೊಳ್ಳಲು ಸಹಾಯ ಮಾಡಿದ ಆರೋಪ: ಎನ್ ಸಿಬಿ ಎದುರು ಅನನ್ಯ ಪಾಂಡೆ ಹೇಳಿದ್ದಿಷ್ಟು...
ಸತತ ಎರಡನೇ ದಿನವೂ ನಟಿ ಅನನ್ಯ ಪಾಂಡೆ ಡ್ರಗ್ಸ್ ಪ್ರಕರಣದಲ್ಲಿ ಎನ್ ಸಿಬಿ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.

ಮುಂಬೈ: ಸತತ ಎರಡನೇ ದಿನವೂ ನಟಿ ಅನನ್ಯ ಪಾಂಡೆ ಡ್ರಗ್ಸ್ ಪ್ರಕರಣದಲ್ಲಿ ಎನ್ ಸಿಬಿ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.
ಮುಂಬೈ ಕ್ರೂಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಪ್ರಶ್ನೆ ಕೇಳಿದ್ದು, ತಮ್ಮ ವಿರುದ್ಧದ ಡ್ರಗ್ಸ್ ಪೂರೈಕೆ ಅಥವಾ ಸೇವನೆಯ ಆರೋಪವನ್ನು ನಿರಾಕರಿಸಿದ್ದಾರೆ.
ಆರ್ಯನ್ ಖಾನ್ ಅವರ ಮೊಬೈಲ್ ನಲ್ಲಿ ವಾಟ್ಸ್ ಆಪ್ ಚಾಟ್ ನಲ್ಲಿ ಅನನ್ಯ ಪಾಂಡೆ ಹೆಸರು ಉಲ್ಲೇಖಗೊಂಡಿತ್ತು. ಆರ್ಯನ್ ಖಾನ್ ಕ್ರೂಸ್ ಪಾರ್ಟಿ ಪ್ರಕರಣದಲ್ಲಿ ಅ.2 ರಂದು ಬಂಧನಕ್ಕೆ ಒಳಗಾಗಿದ್ದರು ಅ.08 ರಿಂದ ಜೈಲಿನಲ್ಲೇ ಇದ್ದಾರೆ.
ಆರ್ಯನ್ ಖಾನ್ ಚಾಟ್ ತಮಗೆ ಡ್ರಗ್ಸ್ ಪಡೆಯುವುದಕ್ಕೆ ಅನನ್ಯ ಪಾಂಡೆ ನೆರವನ್ನು ಸೂಚಿಸುವಂತಹ ಮೆಸೇಜ್ ಗಳನ್ನು ಕಳಿಸಿದ್ದರು. ಇದಕ್ಕೂ ಮುನ್ನ ಅನನ್ಯ ಪಾಂಡೆ ಎನ್ ಸಿಬಿ ಅಧಿಕಾರಿಗಳ ಎದುರು ತಮ್ಮ ತಂದೆ ಚಂಕಿ ಪಾಂಡೆಯೊಂದಿಗೆ ವಿಚಾರಣೆ ಎದುರಿಸಿದ್ದರು.
ಮುಂಬೈ ಕ್ರೂಸ್ ಪಾರ್ಟಿಯಲ್ಲಿ ಡ್ರಗ್ಸ್ ಜಾಲವನ್ನು ಪತ್ತೆ ಮಾಡಿದ್ದ ಎನ್ ಸಿಬಿ ಅಧಿಕಾರಿಗಳು ಅನನ್ಯ ಪಾಂಡೆಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದ್ದರು. ವಿಚಾರಣೆ ವೇಳೆ ಅನನ್ಯ ಪಾಂಡೆ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದು, ತಾವು ಎಂದಿಗೂ ಡ್ರಗ್ಸ್ ಸೇವನೆಯನ್ನಾಗಲೀ, ಪೂರೈಕೆಯನ್ನಾಗಲೀ ಮಾಡಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


