ದೇಶ

ಉಪ ಅಡ್ಮಿರಲ್ ಆರ್ ಹರಿಕುಮಾರ್ ನೌಕಾಪಡೆಯ ಮುಂದಿನ ಮುಖ್ಯಸ್ಥ

ನೌಕಾಪಡೆಯ ಹಾಲಿ ಮುಖ್ಯಸ್ಥರಾದ ಅಡ್ಮಿರಲ್ ಕರಮ್ಬಿರ್ ಸಿಂಗ್ ನ.30 ರಂದು ನಿವೃತ್ತರಾಗಲಿದ್ದು, ಉಪ ಅಡ್ಮಿರಲ್ ಆರ್ ಹರಿ ಕುಮಾರ್ ನೌಕಾಪಡೆಯ ಸಾರಥ್ಯವನ್ನು ವಹಿಸಿಕೊಳ್ಳಲಿದ್ದಾರೆ.

ಉಪ ಅಡ್ಮಿರಲ್ ಆರ್ ಹರಿಕುಮಾರ್ ನೌಕಾಪಡೆಯ ಮುಂದಿನ ಮುಖ್ಯಸ್ಥ
ನೌಕಾ ಪಡೆಯ ಮುಂದಿನ ಮುಖ್ಯಸ್ಥರಾಗಲಿರುವ ಉಪ ಅಡ್ಮಿರಲ್ ಆರ್ ಹರಿಕುಮಾರ್
Published On :

ನವದೆಹಲಿ: ನೌಕಾಪಡೆಯ ಹಾಲಿ ಮುಖ್ಯಸ್ಥರಾದ ಅಡ್ಮಿರಲ್ ಕರಮ್ಬಿರ್ ಸಿಂಗ್ ನ.30 ರಂದು ನಿವೃತ್ತರಾಗಲಿದ್ದು, ಉಪ ಅಡ್ಮಿರಲ್ ಆರ್ ಹರಿ ಕುಮಾರ್ ನೌಕಾಪಡೆಯ ಸಾರಥ್ಯವನ್ನು ವಹಿಸಿಕೊಳ್ಳಲಿದ್ದಾರೆ.

ಉಪಅಡ್ಮಿರಲ್ ಕುಮಾರ್ ಅವರು ಈಗ ವೆಸ್ಟ್ರನ್ ನೌಕಾ ಕಮಾಂಡ್ ನ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

"ಸರ್ಕಾರ ಅಡ್ಮಿರಲ್ ಆರ್ ಹರಿ ಕುಮಾರ್ ಅವರನ್ನು ಮುಂದಿನ ನೌಕಾಪಡೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದು, ನ.30 ರ ಮಧ್ಯಾಹ್ನದಿಂದ ಈ ಆದೇಶ ಜಾರಿಗೆ ಬರಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ದಕ್ಷಿಣ ಕಮಾಂಡ್ ನ ಕಮಾಂಡಿಂಗ್-ಇನ್-ಚೀಫ್ ಆಗಿರುವ ಉಪ ಅಡ್ಮಿರಲ್ ಅನಿಲ್ ಕುಮಾರ್ ಚಾವ್ಲಾ ಅಡ್ಮಿರಲ್ ಸಿಂಗ್ ಅವರ ಬಳಿಕ ಸೇವಾ ಹಿರಿತನ ಹೊಂದಿರುವ ಅಧಿಕಾರಿಯಾಗಿದ್ದಾರೆ. ಆದರೆ ಅವರೂ ನ.30 ಕ್ಕೆ ನಿವೃತ್ತರಾಗುತ್ತಿರುವ ಕಾರಣದಿಂದಾಗಿ ಹರಿ ಕುಮಾರ್ ಅವರನ್ನು ಆ ಹುದ್ದೆಗೆ ನೇಮಕ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

1962 ರ ಏಪ್ರಿಲ್ 12 ರಂದು ಜನಿಸಿದ ಉಪ ಅಡ್ಮಿರಲ್ ಕುಮಾರ್ ಅವರು 1983 ರ ಜ.1 ರಂದು ಸೇವೆಗೆ ಸೇರ್ಪಡೆಯಾಗಿದ್ದರು.  ಐಎನ್ ಎಸ್ ನಿಶಾಂಕ್, ಮಿಸೈಲ್ ಕಾರ್ವೆಟ್, ಐಎನ್ಎಸ್ ಕೋರಾ, ಗುರಿ ನಿರ್ದೇಶಿತ ಕ್ಷಿಪಣಿ ವಿಧ್ವಂಸಕ INS ರಣವೀರ್ ಗಳಲ್ಲಿ ಕಾರ್ಯನಿರ್ವಹಿಸಿರುವ ಕುಮಾರ್ ಅವರು ಅಪಾರ ಅನುಭವ ಹಾಗೂ ಹಿಡಿತವನ್ನು ಹೊಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.