ಮೆಟ್ರೊ ನಗರಗಳಲ್ಲಿ ಹೆಚ್ಚಿದ ಉದ್ಯೋಗ ನೇಮಕಾತಿ: ಗ್ರಾಮೀಣ ಭಾರತದಲ್ಲಿ ನಿರುದ್ಯೋಗ ಹೆಚ್ಚಳ
ನಾಲ್ಕು ತಿಂಗಳ ಹಿಂದೆ ನಗರ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣ ಶೇ.7.75ರಷ್ಟಿತ್ತು. ಈಗ ಆ ಪ್ರಮಾಣ ಶೇ.7.38ಕ್ಕೆ ಕುಸಿದಿದೆ.

ನವದೆಹಲಿ: ಕೊರೊನಾ ನಂತರ ಲಾಕ್ ಡೌನ್ ಹಿಂಪಡೆಕೊಂಡಿರುವುದರಿಂದ ಹಾಗೂ ಸಾಲು ಸಾಲು ಹಬ್ಬಗಳಿಂದಾಗಿ ನಗರಪ್ರದೇಶಗಳಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ಉದ್ಯೋಗಾವಕಾಶಗಳು ಮತ್ತೆ ಏರುಗತಿಯಲ್ಲಿ ಸಾಗಿದೆ. ಅದರ ಪರಿಣಾಮವಾಗಿ ದೇಶಾದ್ಯಂತ ನೇಮಕಾತಿ ಪ್ರಮಾಣವೂ ಹೆಚ್ಚುತ್ತಿರುವ ಬೆಳವಣಿಗೆ ಅಧ್ಯಯನದಿಂದ ಬೆಳಕಿಗೆ ಬಂದಿದೆ.
ಇದೇ ವೇಳೆ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿರುವುದು ಕಳವಳ ಹುಟ್ಟಿಸಿದೆ. ನಾಲ್ಕು ತಿಂಗಳ ಹಿಂದೆ ನಗರ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣ ಶೇ.7.75ರಷ್ಟಿತ್ತು. ಈಗ ಆ ಪ್ರಮಾಣ ಶೇ.7.38ಕ್ಕೆ ಕುಸಿದಿದೆ.
ನಾಲ್ಕು ತಿಂಗಳ ಕೆಳಗೆ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ.6.86ರಷ್ಟಿತ್ತು. ಈಗ ಈ ಪ್ರಮಾಣ ಶೇ.7.91ಕ್ಕೆ ಏರಿಕೆಯಾಗಿದೆ. ನಗರಪ್ರದೇಶಗಳಲ್ಲಿ ಉದ್ಯೋಗಾವಕಾಶ ಹೆಚ್ಚಳಕ್ಕೆ ಐಟಿ ಕ್ಷೇತ್ರದಲ್ಲಿನ ಪ್ರಗತಿ ಕಾರಣ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
Related Article
ರಾಜ್ಯದಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚಳ: ಕೊರೊನಾ ಹಿನ್ನೆಲೆಯ ಬಡತನ ಮತ್ತು ನಿರುದ್ಯೋಗ ಕಾರಣ
ದೇಶವನ್ನು ನಿರುದ್ಯೋಗ ಕೊಂಪೆ ಮಾಡುವತ್ತ ಪ್ರಧಾನಿ ಮೋದಿ ಆಡಳಿತ: ಡಿಕೆ ಶಿವಕುಮಾರ್ ಕಿಡಿ
ಕೇಂದ್ರದ ಎನ್ಎಂಪಿ ನೀತಿಯಿಂದ ನಿರುದ್ಯೋಗ ಸೃಷ್ಟಿ: ಮಲ್ಲಿಕಾರ್ಜುನ ಖರ್ಗೆ
ಜಪಾನ್ ನಲ್ಲಿ ನಿರುದ್ಯೋಗಿ ಸ್ಮಾರ್ಟ್ ಮಡದಿಯರ ಸಂಖ್ಯಾ ಸ್ಫೋಟ
ಮಹಾರಾಷ್ಟ್ರ: ಅನಾರೋಗ್ಯ ಪೀಡಿತ ಪತ್ನಿಯ ಆರೈಕೆ ಮಾಡಿ ಬೇಸತ್ತ ನಿರುದ್ಯೋಗಿ ವ್ಯಕ್ತಿಯಿಂದ ಆಕೆಯ ಹತ್ಯೆ!
ಯುವ ಜನತೆ ಉದ್ಯೋಗಕ್ಕಾಗಿ ಆಗ್ರಹಿಸುತ್ತಿದ್ದು, ಸರ್ಕಾರ ನಿರುದ್ಯೋಗ ನೀಡಿದೆ: ರಾಹುಲ್, ಪ್ರಿಯಾಂಕಾ ಕಿಡಿ
ನೋಟ್ ಬ್ಯಾನ್ ನಿಂದಾಗಿ ನಿರುದ್ಯೋಗ ಸಿಕ್ಕಾಪಟ್ಟೆ ಹೆಚ್ಚಾಗಿದೆ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


