ದೇಶ

ದ್ವಿಚಕ್ರವಾಹನದಲ್ಲಿ ಹಿಂದುಗಡೆ ಮಕ್ಕಳಿದ್ದಾರೆಯೇ? ಹಾಗಾದರೆ ಸರ್ಕಾರದ ಈ ನಿಯಮ ಪಾಲಿಸಲೇ ಬೇಕು

ಮಕ್ಕಳನ್ನು ಹಿಂದುಗಡೆ ಸೀಟಿನಲ್ಲಿ ಕೂರಿಸಿಕೊಂಡು ವಾಹನ ಚಲಾಯಿಸುವ ಪಾಲಕರು ನಿರ್ಲಕ್ಷ್ಯದಿಂದ, ವೇಗವಾಗಿ ವಾಹನ ಚಲಾಯಿಸಿ ಅಪಾಯಕ್ಕೆ ಗುರಿಯಾದ ಹಲವು ನಿದರ್ಶನಗಳು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ದ್ವಿಚಕ್ರವಾಹನದಲ್ಲಿ ಹಿಂದುಗಡೆ ಮಕ್ಕಳಿದ್ದಾರೆಯೇ? ಹಾಗಾದರೆ ಸರ್ಕಾರದ ಈ ನಿಯಮ ಪಾಲಿಸಲೇ ಬೇಕು
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಮಕ್ಕಳು ಪಿಲಿಯನ್ ರೈಡರ್ ಆಗಿದ್ದ ಸಮಯದಲ್ಲಿ ಸವಾರರು ಇನ್ನುಮುಂದೆ ಹಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ವಾಹನವನ್ನು ಗಂಟೆಗೆ 40 ಕಿ.ಮೀ ಗಿಂತ ಹೆಚ್ಚಿನ ವೇಗದಲ್ಲಿ ಓಡಿಸುವಂತಿಲ್ಲ. ಈ ಕುರಿತಾಗಿ ರಸ್ತೆ ಸಾರಿಗೆ ಮತ್ತ ಹೆದ್ದಾರಿ ಸಚಿವಾಲಯದಿಂದ ಎಲ್ಲಾ ರಾಜ್ಯಗಳಿಗೆ ಸೂಚನೆ ಹೊರಡಿಸಲಾಗಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಚ್ಚುವರಿ ಸಾರಿಗೆ ಆಯುಕ್ತರಾದ ನರೇಂದ್ರ ಹೊಲ್ಕರ್, ಮಕ್ಕಳನ್ನು ಹಿಂದುಗಡೆ ಸೀಟಿನಲ್ಲಿ ಕೂರಿಸಿಕೊಂಡು ವಾಹನ ಚಲಾಯಿಸುವ ಪಾಲಕರು ನಿರ್ಲಕ್ಷ್ಯದಿಂದ, ವೇಗವಾಗಿ ವಾಹನ ಚಲಾಯಿಸಿ ಅಪಾಯಕ್ಕೆ ಗುರಿಯಾದ ಹಲವು ನಿದರ್ಶನಗಳು ಗಮನಕ್ಕೆ ಬಂದಿವೆ. ಇದನ್ನು ನಿಯಂತ್ರಿಸಲು ಸರ್ಕಾರ ನೂತನ ನಿಯಮ ಜಾರಿಗೊಳಿಸಿರುವುದಾಗಿ ಅವರು ತಿಳಿಸಿದ್ದಾರೆ. 

ಇದುವರೆಗೂ ಮಕ್ಕಳು ಪಿಲಿಯನ್ ರೈಡರ್ ಗಳಾಗಿದ್ದಾಗ ಸವಾರರು ಮಾತ್ರವಲ್ಲದೆ ಅವರಿಗೂ ಹೆಲ್ಮೆಟ್ ಕಡ್ಡಾಯ ನಿಯಮವನ್ನು ಹೇರಲಾಗಿತ್ತು. ಈಗ ಅದರ ಜೊತೆಗೆ ಗಂಟೆಗೆ 40 ಕಿ.ಮೀ ವೇಗಮಿತಿ ಚಾಲನೆ ನಿಯಮ ಜಾರಿಗೆ ತರಲಾಗಿದೆ. ಕೇಂದ್ರ ಸರ್ಕಾರದ ಸೂಚನೆಯಲ್ಲಿ ಈ ನೂತನ ನಿಯಮ 4 ವರ್ಷದೊಳಗಿನ ಮಕ್ಕಳಿಗೆ ಅನ್ವಯ ಎಂದು ಹೇಳಲಾಗಿದೆ. 

Related Article

ಆಹಾರ ವಿತರಣೆ ಸೋಗಿನಲ್ಲಿ, ದ್ವಿಚಕ್ರ ವಾಹನಗಳಲ್ಲಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಜಾಲ ಬೇಧಿಸಿದ ಸಿಸಿಬಿ

ಕಲಬುರಗಿ: ಇಬ್ಬರು ಬೈಕ್ ಕಳ್ಳರ ಬಂಧನ, 16 ದ್ವಿಚಕ್ರ ವಾಹನ ವಶ

ಚಲಿಸುತ್ತಿದ್ದ ದ್ವಿಚಕ್ರ ವಾಹನ ಅಡ್ಡಗಟ್ಟಿದ ಪೊಲೀಸ್; ತಪ್ಪಿಸಿಕೊಳ್ಳುವ ಭರದಲ್ಲಿ ಬೈಕ್ ಸವಾರ ಸಾವು; ಪೊಲೀಸರಿಗೆ ಥಳಿಸಿದ ಗ್ರಾಮಸ್ಥರು

ರೈಲ್ವೆ ನಿಲ್ದಾಣದ ಪಾರ್ಸಲ್ ಆಫೀಸ್ ನಲ್ಲಿ ಪಾರ್ಸಲ್ ಬಂದಿದ್ದ ದ್ವಿಚಕ್ರ ವಾಹನ ಕದ್ದಿದ್ದ ವ್ಯಕ್ತಿಯ ಬಂಧನ

ದ್ವಿಚಕ್ರ ವಾಹನ ಕಳ್ಳರ ಬಂಧನ: 10 ಲಕ್ಷ ರೂ. ಮೌಲ್ಯದ 19 ವಾಹನ ವಶ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.