ಫೇಸ್‌ಬುಕ್ ನನ್ನನ್ನು ಮತ್ತೇ ನಿರ್ಬಂಧಿಸಿದೆ: ಲೇಖಕಿ ತಸ್ಲೀಮಾ ನಸ್ರೀನ್ ಅಳಲು
ಸಾಮಾಜಿಕ ಮಾಧ್ಯಮ ದೈತ್ಯನಾದ ಫೇಸ್‌ಬುಕ್ ನನ್ನನ್ನು ಏಳು ದಿನಗಳ ಕಾಲ ಮತ್ತೊಮ್ಮೆ ಬ್ಯಾನ್ ಮಾಡಿದೆ ಎಂದು ಬಾಂಗ್ಲಾದೇಶದ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ಹೇಳಿಕೊಂಡಿದ್ದಾರೆ.

ನವದೆಹಲಿ: ಸಾಮಾಜಿಕ ಮಾಧ್ಯಮ ದೈತ್ಯನಾದ ಫೇಸ್‌ಬುಕ್ ನನ್ನನ್ನು ಏಳು ದಿನಗಳ ಕಾಲ ಮತ್ತೊಮ್ಮೆ ಬ್ಯಾನ್ ಮಾಡಿದೆ ಎಂದು ಬಾಂಗ್ಲಾದೇಶದ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಅವರು, ಸತ್ಯವನ್ನು ಹೇಳಿದ್ದಕ್ಕಾಗಿ ಫೇಸ್ ಬುಕ್ ಮತ್ತೆ 7 ದಿನಗಳವರೆಗೆ ನನ್ನನ್ನು ನಿಷೇಧಿಸಿದೆ ಎಂದು ಬೇಸರ ಹೊರಹಾಕಿದ್ದಾರೆ.
ಈ ವರ್ಷ ಮಾರ್ಚ್ 16 ರಂದು ಫೇಸ್ ಬುಕ್ 24 ಗಂಟೆಗಳ ಕಾಲ ತನ್ನ ವೇದಿಕೆ ಬಳಸದಂತೆ ನಿರ್ಬಂಧಿಸಿತ್ತು. ಕಾರಣ ಬಾಂಗ್ಲಾದೇಶದ ಕರಕುಶಲ ಅಂಗಡಿಯ ಆರೋಂಗ್ ನ ನಿರ್ಧಾರವನ್ನು ನಾನು ಇಷ್ಟಪಟ್ಟಿದ್ದಕ್ಕೆ. ನಾನು ಫೇಸ್ ಬುಕ್ ನಲ್ಲಿ ಮುಕ್ತವಾಗಿ ಬರೆಯಲು ನನ್ನ ಸ್ವಾತಂತ್ರ್ಯವನ್ನು ಬಳಸಿದಾಗ ಫೇಸ್ ಬುಕ್ ನನ್ನನ್ನು ನಿಷೇಧಿಸುತ್ತದೆ. ಸ್ವತಂತ್ರ ಚಿಂತಕರಿಗೆ ಯಾವುದೇ ಸ್ವತಂತ್ರ ಭಾಷಣವಿಲ್ಲ ಎಂದು ಟ್ವೀಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ.
ನಸ್ರೀನ್ 1994 ರಲ್ಲಿ ಬಾಂಗ್ಲಾದೇಶವನ್ನು ತೊರೆದಿದ್ದು, ಆಪಾದಿತ ಇಸ್ಲಾಂ ವಿರೋಧಿ ದೃಷ್ಟಿಕೋನಗಳಿಗಾಗಿ ಮೂಲಭೂತವಾದಿ ಸಂಘಟನೆಗಳಿಂದ ಜೀವ ಬೆದರಿಕೆಯ ಹಿನ್ನೆಲೆ ಅವರು ಅಜ್ಞಾತವಾಸಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


