ಹರಿದ್ವಾರ ಕುಂಭಮೇಳವನ್ನು ಕೋವಿಡ್-19 ಸೂಪರ್ ಸ್ಪ್ರೆಡರ್ ಎನ್ನುವುದು ಸೂಕ್ತವಲ್ಲ: ಭದ್ರತಾ ಉಸ್ತುವಾರಿ
ಹರಿದ್ವಾರ ಕುಂಭಮೇಳವನ್ನು ಕೋವಿಡ್-19 ಸೂಪರ್ ಸ್ಪ್ರೆಡರ್ ಎನ್ನುವುದು ಸೂಕ್ತವಲ್ಲ ಎಂದು ಕುಂಭ ಮೇಳದ ಭದ್ರತಾ ಉಸ್ತುವಾರಿ ಅಧಿಕಾರಿ ಹೇಳಿದ್ದಾರೆ.

ಡೆಹ್ರಾಡೂನ್: ಹರಿದ್ವಾರ ಕುಂಭಮೇಳವನ್ನು ಕೋವಿಡ್-19 ಸೂಪರ್ ಸ್ಪ್ರೆಡರ್ ಎನ್ನುವುದು ಸೂಕ್ತವಲ್ಲ ಎಂದು ಕುಂಭ ಮೇಳದ ಭದ್ರತಾ ಉಸ್ತುವಾರಿ ಅಧಿಕಾರಿ ಹೇಳಿದ್ದಾರೆ.
ಒಟ್ಟಾರೆ ಆರ್ ಟಿ-ಪಿಸಿಆರ್ ಪರೀಕ್ಷೆ ಪೈಕಿ ಶೇ.೦.2 ರಷ್ಟು ಮಾತ್ರ ಕೋವಿಡ್-19 ಸೋಂಕು ದೃಢಪಟ್ಟಿದೆ. ಪರೀಕ್ಷೆಗೆ ಒಳಪಟ್ಟ ಪೊಲೀಸ್ ಸಿಬ್ಬಂದಿಗಳ ಪೈಕಿ ಶೇ.೦5 ರಷ್ಟು ಮಂದಿಗೆ ಮಾತ್ರ ಸೋಂಕು ದೃಢಪಟ್ಟಿದೆ ಆದ್ದರಿಂದ ಕೋವಿಡ್-19 ನ್ನು ಸೂಪರ್ ಸ್ಪ್ರೆಡರ್ ಎನ್ನುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಮೇಳ ಐಜಿ ಸಂಜಯ್ ಗುಂಜ್ಯಾಲ್ ಈ ಬಗ್ಗೆ ಮಾತನಾಡಿದ್ದು ಏ.01 ರಿಂದ ಕುಂಭ ಮೇಳ ಅಧಿಕೃತವಾಗಿ ಪ್ರಾರಂಭವಾಯಿತು, ಆ ವೇಳೆಗೆ ಆಗಲೇ ಎರಡನೇ ಅಲೆ ಮಹಾರಾಷ್ಟ್ರ, ಹರ್ಯಾಣಗಳಲ್ಲಿ ತೀವ್ರವಾಗಿ ಪ್ರಾರಂಭವಾಗಿತ್ತು. ಜನವರಿ 1-ಏಪ್ರಿಲ್ 30 ವರೆಗಿನ ಹರಿದ್ವಾರ ಜಿಲ್ಲೆಯ ಕೋವಿಡ್-19 ಕೋವಿಡ್ ಡೇಟಾವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದರೆ, ಕುಂಭಮೇಳವನ್ನು ಸೂಪರ್ ಸ್ಪ್ರೆಡರ್ ಎಂದು ಹೇಳುವುದು ಸರಿಯಲ್ಲ ಎಂದು ಗುಂಜ್ಯಾಲ್ ಹೇಳಿದ್ದಾರೆ.
ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಜ.1 ರಿಂದ ಏಪ್ರಿಲ್.30 8.91 ಆರ್ ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗಿತ್ತು. ಈ ಪೈಕಿ 1,945 ಪ್ರಕರಾಣಗಳಲ್ಲಿ ಸೋಂಕು ದೃಢಪಟ್ಟಿವೆ.
ಕುಂಭಮೇಳದ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ 16,000 ಪೊಲೀಸ್ ಸಿಬ್ಬಂದಿಗಳ ಪೈಕಿ ಕೇವಲ 88 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಸಿಬ್ಬಂದಿಗಳು ಜನಸಂದಣಿಯೊಂದಿಗೆ ನೇರವಾಗಿ ವ್ಯವಹರಿಸುತ್ತಿದ್ದರು ಎಂಬುದು ಮತ್ತೊಂದು ಗಮಾರ್ಹ ಅಂಶ ಹೀಗಿದ್ದರೂ ಸಹ ಅತ್ಯಂತ ಕಡಿಮೆ ಮಂದಿ ಸಿಬ್ಬಂದಿ ಎಂದು ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


