ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ನಲ್ಲಿ ಕೋವಿಡ್-19; ಕನಿಷ್ಠ 100 ಪ್ರಕರಣಗಳಿವೆ- ಪರ್ವತಾರೋಹಿಗಳ ಮಾರ್ಗದರ್ಶಿ
ಮೌಂಟ್ ಎವರೆಸ್ಟ್ ನಲ್ಲೂ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು 100 ಕೋವಿಡ್-19 ಪ್ರಕರಣಗಳು ವರದಿಯಾಗಿವೆ ಎಂದು ಎವರೆಸ್ಟ್ ಪರ್ವತಾರೋಹಿಗಳ ಮಾರ್ಗದರ್ಶಿಯೊಬ್ಬರು ಹೇಳಿದ್ದಾರೆ.

ಕಠ್ಮಂಡು: ಮೌಂಟ್ ಎವರೆಸ್ಟ್ ನಲ್ಲೂ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು 100 ಕೋವಿಡ್-19 ಪ್ರಕರಣಗಳು ವರದಿಯಾಗಿವೆ ಎಂದು ಎವರೆಸ್ಟ್ ಪರ್ವತಾರೋಹಿಗಳ ಮಾರ್ಗದರ್ಶಿಯೊಬ್ಬರು ಹೇಳಿದ್ದಾರೆ. ಪರ್ವತಾರೋಹಿಗಳು ಹಾಗೂ ಸಿಬ್ಬಂದಿಗಳ ಪೈಕಿ 100 ಮಂದಿಗೆ ಕೋವಿಡ್-19 ಸೋಂಕು ತಗುಲಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ.
ವಿಶ್ವದ ಅತಿ ಎತ್ತರದ ಪರ್ವತದಲ್ಲಿ ಕೋವಿಡ್-19 ಕ್ಲಸ್ಟರ್ ಇಲ್ಲ ಎಂದು ನೇಪಾಳ ವಾದಿಸುತ್ತಿತ್ತು, ಈ ನಡುವೆ ಕೋವಿಡ್-19 ಪ್ರಕರಣಗಳು ಮೌಂಟ್ ಎವರೆಸ್ಟ್ ನಲ್ಲಿ ಪತ್ತೆಯಾಗಿರುವುದನ್ನು ಪರ್ವತಾರೋಹಿಗಳ ಮಾರ್ಗದರ್ಶಿಗಳು ಬಹಿರಂಗಪಡಿಸಿದ್ದಾರೆ.
ಆಸ್ಟ್ರಿಯಾದ ಲುಕಾಸ್ ಫರ್ಟೆನ್‌ಬಾಚ್, ಕೊರೋನಾ ಭೀತಿಯಿಂದ ಎವರೆಸ್ಟ್ ಪರ್ವತಾರೋಹಣವನ್ನು ಸ್ಥಗಿತಗೊಳಿಸಿದ್ದು, ತಮ್ಮ ವಿದೇಶಿ ಮಾರ್ಗದರ್ಶಕರೊಬ್ಬರು 6 ನೇಪಾಳಿ ಶಿರ್ಪಾ ಮಾರ್ಗದರ್ಶಿಗಳು ಕೊರೋನಾ ಸೋಂಕಿಗೆ ಒಳಗಾಗಿದ್ದಾರೆಂದು ಮಾಹಿತಿ ನೀಡಿದ್ದಾರೆ.
ಬೇಸ್ ಕ್ಯಾಂಪ್ ನಲ್ಲಿ 100 ಜನರಿಗೆ ಕೋವಿಡ್-19 ಸೋಂಕು ತಗುಲಿದೆ. ಒಟ್ಟಾರೆ ಇದು 150-200 ಇರಬಹುದು ಎಂದು ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿರುವ ಅಸೋಸಿಯೇಟೆಡ್ ಪ್ರೆಸ್ ಗೆ ಲುಕಾಸ್ ಫರ್ಟೆನ್‌ಬಾಚ್ ಹೇಳಿದ್ದಾರೆ.
ಈ ಋತುವಿನಲ್ಲಿ 408 ವಿದೇಶಿ ಪರ್ವತಾರೋಹಿಗಳಿಗೆ ಎವರೆಸ್ಟ್ ಪರ್ವತ ಆರೋಹಣಕ್ಕೆ ಅನುಮತಿ ನೀಡಲಾಗಿತ್ತು, ಈ ಪೈಕಿ ಕೆಲವು ನೂರು ಮಂದಿ ಮಾರ್ಗದರ್ಶಕರು, ಸಹಾಯಕ ಸಿಬ್ಬಂದಿಗಳಿದ್ದು, ಏಪ್ರಿಲ್ ನಿಂದಲೂ ಬೇಸ್ ಕ್ಯಾಂಪ್ ನಲ್ಲೇ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


