ಆಮ್ಲಜನಕ ಸ್ಥಾವರಗಳಿಗೆ ದಿನದ 24 ತಾಸು ನಿರಂತರ ವಿದ್ಯುತ್ ಪೂರೈಕೆ
ದೇಶಾದ್ಯಂತ ಆಮ್ಲಜನಕ ಸ್ಥಾವರಗಳಿಗೆ ಅಡೆತಡೆಯಿಲ್ಲದೆ ನಿರಂತರ ವಿದ್ಯುತ್ ಪೂರೈಕೆ ಮಾಡುವ ಗುರಿಯೊಂದಿಗೆ ದೆಹಲಿಯ 13 ಸ್ಥಾವರ ಸೇರಿದಂತೆ ದೇಶದ 73 ಪ್ರಮುಖ ಆಮ್ಲಜನಕ ಸ್ಥಾವರಗಳಿಗೆ ವಿದ್ಯುತ್ ಸರಬರಾಜು ಮಾಡಲು ಕೇಂದ್ರ ಇಂಧನ ಸಚಿವಾಲಯ ಮೇಲ್ವಿಚಾರಣೆ ಕೇಂದ್ರವನ್ನು ಸ್ಥಾಪಿಸಿದೆ.

ನವದೆಹಲಿ: ದೇಶಾದ್ಯಂತ ಆಮ್ಲಜನಕ ಸ್ಥಾವರಗಳಿಗೆ ಅಡೆತಡೆಯಿಲ್ಲದೆ ನಿರಂತರ ವಿದ್ಯುತ್ ಪೂರೈಕೆ ಮಾಡುವ ಗುರಿಯೊಂದಿಗೆ ದೆಹಲಿಯ 13 ಸ್ಥಾವರ ಸೇರಿದಂತೆ ದೇಶದ 73 ಪ್ರಮುಖ ಆಮ್ಲಜನಕ ಸ್ಥಾವರಗಳಿಗೆ ವಿದ್ಯುತ್ ಸರಬರಾಜು ಮಾಡಲು ಕೇಂದ್ರ ಇಂಧನ ಸಚಿವಾಲಯ ಮೇಲ್ವಿಚಾರಣೆ ಕೇಂದ್ರವನ್ನು ಸ್ಥಾಪಿಸಿದೆ.
ದಿನದ 24 ತಾಸು ವಿದ್ಯುತ್ ಪೂರೈಸುವ ಕ್ರಿಯಾಪರ ಉಪಕ್ರಮಗಳ ಭಾಗವಾಗಿ, ಆಮ್ಲಜನಕ ಸ್ಥಾವರಗಳಿಗೆ ವಿದ್ಯುತ್ ಪೂರೈಕೆಯ ವಸ್ತುಸ್ಥಿತಿಯನ್ನು ಇಂಧನ ಕಾರ್ಯದರ್ಶಿಯವರು ಪರಿಶೀಲಿಸಿದ್ದು, ರಾಜ್ಯಗಳ ಇಂಧನ ಕಾರ್ಯದರ್ಶಿಗಳು ಮತ್ತು ವಿದ್ಯುತ್ ವ್ಯವಸ್ಥೆ ಕಾರ್ಯಾಚರಣೆ ನಿಗಮದ ಸಿಎಂಡಿಯವರೊಂದಿಗೂ ಪ್ರತಿದಿನ ಸಮಾಲೋಚಿಸುತ್ತಿದ್ದಾರೆ.
24 ತಾಸು ಕಾರ್ಯನಿರ್ವಹಿಸುವ ಆಮ್ಲಜನಕ ನಿಯಂತ್ರಣಾ ಕೊಠಡಿ ಮತ್ತು ಆಂತರಿಕ ನಿಯಂತ್ರಣ ತಂಡವನ್ನು ಆರ್ ಇಸಿ ಲಿಮಿಟೆಡ್ ಸಂಸ್ಥೆಯಲ್ಲಿ ತೆರೆಯಲಾಗಿದ್ದು, ಆಮ್ಲಜನಕ ಸ್ಥಾವರಗಳಿಗೆ ದಿನದ 24 ತಾಸು ವಿದ್ಯುತ್ ನಿರಂತರ ಪೂರೈಕೆಯಾಗುವಂತೆ ನೋಡಲ್ ಅಧಿಕಾರಿಗಳನ್ನು ಇವುಗಳಿಗೆ ನಿಯೋಜಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


