oxygen plants

50 ಹಾಸಿಗೆಗಳ ಆಸ್ಪತ್ರೆಗೆ ಆಕ್ಸಿಜನ್ ಪ್ಲಾಂಟ್ ಕಡ್ಡಾಯಪಡಿಸಿ ರಾಷ್ಟ್ರೀಯ ಸಮಿತಿ ಶಿಫಾರಸು
50 ಅಥವಾ ಅದಕ್ಕೂ ಹೆಚ್ಚಿನ ಹಾಸಿಗೆ ಹೊಂದಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳು ಕನಿಷ್ಠ ಮಟ್ಟದ ಮಿನಿ ಆಕ್ಸಿಜನ್ ಪ್ಲಾಂಟ್ ನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಆಸ್ಪತ್ರೆಗಳಲ್ಲಿ ಕನಿಷ್ಠ ಮಾನದಂಡಗಳ ಅನುಷ್ಠಾನಕ್ಕಾಗಿ ರಾಷ್ಟ್ರೀಯ ಸಮಿತಿಯ ಅಡಿಯಲ್ಲಿರುವ ಸರ್ಕಾರಿ ಸಮಿತಿ ಶಿಫಾರಸು ಮಾಡಿದೆ.

ಸಮರೋಪಾದಿಯಲ್ಲಿ 1,500 ಆಮ್ಲಜನಕ ಘಟಕ ನಿರ್ಮಾಣ, ಪ್ರತಿ ಜಿಲ್ಲೆಗೂ ಆಕ್ಸಿಜನ್ ತಲುಪುವಂತೆ ಕ್ರಮ: ಪ್ರಧಾನಿ ಮೋದಿ
ಕೋವಿಡ್-19 ಸಾಂಕ್ರಾಮಿಕ ಎದುರಿಸಲು ದೇಶಾದ್ಯಂತ ಸಮರೋಪಾದಿ ಕಾರ್ಯಗಳು ನಡೆಯುತ್ತಿದ್ದು, ದೇಶದ ಪ್ರತೀ ಜಿಲ್ಲೆಗೂ ಆಮ್ಲಜನಕ ತಲುಪುವಂತೆ ದೇಶಾದ್ಯಂತ 1500 ಆಮ್ಲಜನಕ ಘಟಕ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

50ಕ್ಕೂ ಹೆಚ್ಚು ಹಾಸಿಗೆಗಳನ್ನು ಹೊಂದಿರುವ ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕ ಅಳವಡಿಕೆ ಕಡ್ಡಾಯ: ಸರ್ಕಾರ
ರಾಜ್ಯದಲ್ಲಿನ 50ಕ್ಕಿಂತ ಹೆಚ್ಚು ಹಾಸಿಗೆಗಳನ್ನು ಹೊಂದಿರುವ ಎಲ್ಲ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ವೈದ್ಯಕೀಯ ಆಮ್ಲಜನಕದ ಘಟಕಗಳನ್ನು ಅಳವಡಿಸಿಕೊಳ್ಳಬೇಕು ಎಂದು ಆರೊಗ್ಯ ಇಲಾಖೆ ಸೂಚಿಸಿದೆ.

ಪಿಎಂ ಕೇರ್ಸ್ ನಿಧಿಯಡಿ ದೇಶಾದ್ಯಂತ 1,500 ಆಮ್ಲಜನಕ ಘಟಕಗಳ ಸ್ಥಾಪನೆ: ಕೇಂದ್ರ ಸಚಿವ ಅನುರಾಗ್ ಠಾಕೂರ್
ಕೋವಿಡ್ ನಿಂದ ಬಳಲುತ್ತಿರುವ ಜನರ ಜೀವ ಉಳಿಸಲು ಅಗತ್ಯ ಆಮ್ಲಜನಕ ಪೂರೈಸಲು ಪಿಎಂ ಕೇರ್ಸ್ ಮತ್ತು ಪಿಎಸ್‌ಯು ನಿಧಿಗಳ ಮೂಲಕ ದೇಶಾದ್ಯಂತ 1,500 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಆಕ್ಸಿಜನ್ ಘಟಕ ಸ್ಥಾಪಿಸುವ ಕೈಗಾರಿಕೋದ್ಯಮಿಗಳ ಪ್ರೋತ್ಸಾಹಿಸಲು ಉತ್ತೇಜಕ ಯೋಜನೆ: ಸಚಿವ ಜಗದೀಶ್ ಶೆಟ್ಟರ್
ನೂತನ ಆಮ್ಲಜನಕ ಘಟಕಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲು ಕೈಗಾರಿಕಾ ಇಲಾಖೆಯಿಂದ ಉತ್ತೇಜಕ ಯೋಜನೆ ಜಾರಿಗೆ ತರಲು ಚಿಂತನೆ ನಡೆದಿದೆ ಎಂದು ರಾಜ್ಯದ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಉಸ್ತುವಾರಿ ಮತ್ತು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರು ಹೇಳಿದ್ದಾರೆ.

ಆಮ್ಲಜನಕ ಸ್ಥಾವರಗಳಿಗೆ ದಿನದ 24 ತಾಸು ನಿರಂತರ ವಿದ್ಯುತ್ ಪೂರೈಕೆ
ದೇಶಾದ್ಯಂತ ಆಮ್ಲಜನಕ ಸ್ಥಾವರಗಳಿಗೆ ಅಡೆತಡೆಯಿಲ್ಲದೆ ನಿರಂತರ ವಿದ್ಯುತ್ ಪೂರೈಕೆ ಮಾಡುವ ಗುರಿಯೊಂದಿಗೆ ದೆಹಲಿಯ 13 ಸ್ಥಾವರ ಸೇರಿದಂತೆ ದೇಶದ 73 ಪ್ರಮುಖ ಆಮ್ಲಜನಕ ಸ್ಥಾವರಗಳಿಗೆ ವಿದ್ಯುತ್ ಸರಬರಾಜು ಮಾಡಲು ಕೇಂದ್ರ ಇಂಧನ ಸಚಿವಾಲಯ ಮೇಲ್ವಿಚಾರಣೆ ಕೇಂದ್ರವನ್ನು ಸ್ಥಾಪಿಸಿದೆ.

ಸಾರಜನಕ ಸ್ಥಾವರಗಳನ್ನು ಆಮ್ಲಜನಕ ಸ್ಥಾವರಗಳಾಗಿ ಪರಿವರ್ತಿಸುವ ಕಾರ್ಯದ ಪರಿಶೀಲನೆ ನಡೆಸಿದ ಪ್ರಧಾನಿ ಮೋದಿ
ದೇಶದಲ್ಲಿ ಕೋವಿಡ್ ನ ಎರಡನೇ ಅಲೆ ವ್ಯಾಪಿಸಿರುವುದು ಮತ್ತು ಆಮ್ಲಜನಕಕ್ಕೆ ಬೇಡಿಕೆ ಹೆಚ್ಚಾಗಿರುವ ಸಾರಜನಕ ಸ್ಥಾವರಗಳನ್ನು ಆಮ್ಲಜನಕ ಸ್ಥಾವರಗಳಾಗಿ ಪರಿವರ್ತಿಸುವ ಕಾರ್ಯದ ಪ್ರಗತಿಯನ್ನು ಪ್ರಧಾನಿ ನರೇಂದ್ರಮೋದಿ ಭಾನುವಾರ ಪರಿಶೀಲಿಸಿದರು.

ರಾಜ್ಯದಲ್ಲಿನ ಹಳೆಯ ಆಮ್ಲಜನಕ ಸ್ಥಾವರಗಳ ಪುನಾರಂಭಕ್ಕೆ ಎಂಜಿನಿಯರ್ ಗಳ ಸಾಥ್!
ರಾಜ್ಯದಲ್ಲಿನ ಆಮ್ಲಜನಕ ಬಿಕ್ಕಟ್ಟನ್ನು ನೋಡಿರುವ ಹಾಗೂ ಆಮ್ಲಜನಕ ಸಿಲಿಂಡರ್‌ಗಳನ್ನು ಕಳ್ಳತನದಲ್ಲಿ ಮಾರಾಟ ಮಾಡಲಾಗುತ್ತಿರುವ ದೆಹಲಿಯ ಹಾದಿಯಲ್ಲಿ ಬೆಂಗಳೂರು ಸಾಗದಂತೆ ನೋಡಿಕೊಳ್ಳಲು, ಇಲ್ಲಿನ ಎಂಜಿನಿಯರ್ ಗಳು ಕಂಪೆನಿಗಳು ತಮ್ಮ ನಿಷ್ಕ್ರಿಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಮರುಪ್ರಾರಂಭಿಸಲು ನೆರವಾಗುತ್ತಿದ್ದಾರೆ.

ಮೈಸೂರು, ಚಾಮರಾಜನಗರದಲ್ಲಿ ಆಮ್ಲಜನಕ ಸ್ಥಾವರ ಸ್ಥಾಪಿಸಲಿರುವ ಗೇಲ್ ಇಂಡಿಯಾ
ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಆಮ್ಲಜನಕ ಕೊರತೆ ನೀಗಿಸಲು ಗೇಲ್ ಇಂಡಿಯಾ ಲಿಮಿಟೆಡ್ ಕಂಪನಿ ಮೈಸೂರು ಮತ್ತು ಚಾಮರಾಜನಗರಗಳಲ್ಲಿ ಆಮ್ಲಜನಕ ಸ್ಥಾವರ ಸ್ಥಾಪಿಸಲಿದೆ.

