ಬ್ಲಾಕ್ ಫಂಗಸ್: ಕರ್ನಾಟಕಕ್ಕೆ 9,400 ವೈಯಲ್ಸ್ ಸೇರಿದಂತೆ ದೇಶಾದ್ಯಂತ 1.06 ಲಕ್ಷ ಆಂಫೊಟೆರಿಸಿನ್-ಬಿ ಪೂರೈಕೆ
ಕೋವಿಡ್ ಸಾಂಕ್ರಾಮಿಕದ ನಡುವೆಯೇ ದೇಶಾದ್ಯಂತ ಉಲ್ಬಣವಾಗಿರುವ ಬ್ಲಾಕ್ ಫಂಗಸ್ ಸೋಂಕು ನಿರ್ವಹಣೆ ನಿಮಿತ್ತ ಇಂದು ದೇಶಾದ್ಯಂತ 1.06 ಲಕ್ಷ ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದೆ.

ಬೆಂಗಳೂರು: ಕೋವಿಡ್ ಸಾಂಕ್ರಾಮಿಕದ ನಡುವೆಯೇ ದೇಶಾದ್ಯಂತ ಉಲ್ಬಣವಾಗಿರುವ ಬ್ಲಾಕ್ ಫಂಗಸ್ ಸೋಂಕು ನಿರ್ವಹಣೆ ನಿಮಿತ್ತ ಇಂದು ದೇಶಾದ್ಯಂತ 1.06 ಲಕ್ಷ ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದೆ.
ಈ ಬಗ್ಗೆ ಕೇಂದ್ರ ಸಚಿವ ಸದಾನಂದಗೌಡ ಅವರು ಮಾಹಿತಿ ನೀಡಿದ್ದು, ಕರ್ನಾಟಕಕ್ಕೆ ಮತ್ತೆ 9,400 ವೈಯಲ್ಸ್ ಸೇರಿದಂತೆ ದೇಶಾದ್ಯಂತ 1.06 ಲಕ್ಷ ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಇಂದು ಕರ್ನಾಟಕಕ್ಕೆ ಹೆಚ್ಚುವರಿ 9,400 ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿಯನ್ನು ಹಂಚಿಕೆ ಮಾಡಲಾಗಿದ್ದು, ಆ ಮೂಲಕ ಈ ವರೆಗೂ ಕರ್ನಾಟಕಕ್ಕೆ 49,870 ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದೆ. ಇದಲ್ಲದೆ ಕರ್ನಾಟಕಕ್ಕೆ ಹೆಚ್ಚುವರಿ 4,680 ವೈಯಲ್ಸ್ ಆಂಫೊಟೆರಿಸಿನ್ ಬಿ ಲಸಿಕೆ ನೀಡಿಕೆಗೆ ಇಂದು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅಂತೆಯೇ ದೇಶಾದ್ಯಂತ ಹೆಚ್ಚುವರಿ 53,000 ವೈಯಲ್ಸ್ ಆಂಫೊಟೆರಿಸಿನ್ ಬಿ ಲಸಿಕೆ ನೀಡಿಕೆಗೆ ಇಂದು ಕ್ರಮ ಕೈಗೊಳ್ಳಲಾಗಿದೆ ಎಂದು ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


