ಆಗಸ್ಟ್ 18 ರವರೆಗೆ ಚಾರ್ ಧಾಮ್ ಯಾತ್ರೆಯನ್ನು ನಿರ್ಬಂಧಿಸಿದ ನೈನಿತಾಲ್ ಹೈಕೋರ್ಟ್
ಕೋವಿಡ್-19 ಸಾಂಕ್ರಾಮಿಕದ ಪರಿಸ್ಥಿತಿಯಿಂದಾಗಿ ಆಗಸ್ಟ್ 18ರವರಗೆ ಚಾರ್ ಧಾಮ್ ಯಾತ್ರೆಯನ್ನು ನೈನಿತಾಲ್ ಹೈಕೋರ್ಟ್ ಬುಧವಾರ ನಿರ್ಬಂಧಿಸಿದೆ.

ನೈನಿತಾಲ್: ಕೋವಿಡ್-19 ಸಾಂಕ್ರಾಮಿಕದ ಪರಿಸ್ಥಿತಿಯಿಂದಾಗಿ ಆಗಸ್ಟ್ 18ರವರಗೆ ಚಾರ್ ಧಾಮ್ ಯಾತ್ರೆಯನ್ನು ನೈನಿತಾಲ್ ಹೈಕೋರ್ಟ್ ಬುಧವಾರ ನಿರ್ಬಂಧಿಸಿದೆ.
ರಾಜ್ಯದ ಪ್ರವಾಸಿ ಸ್ಥಳಗಳಲ್ಲಿ ಕೋವಿಡ್ ಸಂಬಂಧಿತ ನಿಯಮಾವಳಿಗಳನ್ನು ಅನುಸರಿಸದಿದ್ದಕ್ಕಾಗಿ ನ್ಯಾಯಾಲಯವು ಉತ್ತರಾಖಂಡ ಸರ್ಕಾರವನ್ನು ತೀವ್ರವಾಗಿ ಖಂಡಿಸಿದೆ.
ಮೇ.14ರಿಂದ ಆರಂಭವಾಗಬೇಕಿದ್ದ ಚಾರ್ ಧಾಮ್ ಯಾತ್ರೆಯನ್ನು ಈ ಮುಂಚೆ ಕೋವಿಡ್ ಕಾರಣಕ್ಕಾಗಿ ರದ್ದುಗೊಳಿಸಲಾಗಿತ್ತು. ಆದರೆ, ರುದ್ರಪ್ರಯಾಗ ಜಿಲ್ಲೆಯಲ್ಲಿ ಕೇದಾರನಾಥ ದೇಗುಲ, ಚಮೋಲಿಯಲ್ಲಿ ಬದ್ರಿನಾಥ್ ಹಾಗೂ ಉತ್ತರಕಾಶಿಯಲ್ಲಿನ ಯಮುನೋತ್ರಿ, ಗಂಗೋತ್ರಿ ದೇಗುಲಗಳಿಗೆ ತೆರಳಲು ಸರ್ಕಾರ ಅನುಮತಿ ನೀಡಿತ್ತು.
ಬದ್ರಿನಾಥ್, ಕೇದಾರ್ ನಾಥ್ ಮತ್ತು ಗಂಗೋತ್ರಿ ಉತ್ತರಾಖಂಡದ ನಾಲ್ಕು ಪ್ರಮುಖ ಯಾತ್ರಾ ತಾಣಗಳಾಗಿದ್ದು, ಜುಲೈ 28 ರವರೆಗೂ ಚಾರ್ ಧಾಮ್ ಯಾತ್ರೆಗೆ ತಡೆಯನ್ನು ಹೈಕೋರ್ಟ್ ನೀಡಿತ್ತು. ಇಂದು ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ಮತ್ತೆ ಆಗಸ್ಟ್ 18ರವರೆಗೆ ಚಾರ್ ಧಾಮ್ ಯಾತ್ರೆಯನ್ನು ನಿರ್ಬಂಧಿಸಿ ಆದೇಶ ಹೊರಡಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


