ದೇಶ

ದೇಶದ್ರೋಹ ಕಾನೂನು ಪುರಾತನವಾದದ್ದು, ತನ್ನ ಉದ್ದೇಶವನ್ನು ಮೀರಿದೆ: ಮಾಜಿ ಎಜಿ ಮುಕುಲ್ ರೋಹಟಗಿ

ಪುರಾತನವಾಗಿರುವ ದೇಶದ್ರೋಹ ಕಾನೂನು ತನ್ನ ಉದ್ದೇಶವನ್ನು ಮೀರಿದೆ. ಇನ್ನು ಮುಂದೆ ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಮಾಜಿ ಅಟಾರ್ನಿ ಜನರಲ್ ಮತ್ತು ಹಿರಿಯ ವಕೀಲ ಮುಕಲ್ ರೋಹಟಗಿ ಶುಕ್ರವಾರ ಹೇಳಿದ್ದು, ಈ ಕಾನೂನಿನ ಸಾಂವಿಧಾನಿಕ ಮಾನ್ಯತೆ ಕುರಿತ ಸುಪ್ರೀಂಕೋರ್ಟ್ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

ದೇಶದ್ರೋಹ ಕಾನೂನು ಪುರಾತನವಾದದ್ದು, ತನ್ನ ಉದ್ದೇಶವನ್ನು ಮೀರಿದೆ: ಮಾಜಿ ಎಜಿ ಮುಕುಲ್ ರೋಹಟಗಿ
ಮಾಜಿ ಎಜಿ ಮುಕುಲ್ ರೋಹಟಗಿ
Published On :

ನವದೆಹಲಿ: ಪುರಾತನವಾಗಿರುವ ದೇಶದ್ರೋಹ ಕಾನೂನು ತನ್ನ ಉದ್ದೇಶವನ್ನು ಮೀರಿದೆ. ಇನ್ನು ಮುಂದೆ ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಮಾಜಿ ಅಟಾರ್ನಿ ಜನರಲ್ ಮತ್ತು ಹಿರಿಯ ವಕೀಲ ಮುಕಲ್ ರೋಹಟಗಿ ಶುಕ್ರವಾರ ಹೇಳಿದ್ದು, ಈ ಕಾನೂನಿನ ಸಾಂವಿಧಾನಿಕ ಮಾನ್ಯತೆ ಕುರಿತ ಸುಪ್ರೀಂಕೋರ್ಟ್ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

ಎಎನ್ ಐ ಸುದ್ಧಿಸಂಸ್ಥೆಯೊಂದಿಗೆ ಮಾತನಾಡಿದ ರೋಹಟಗಿ, ಹಿಂಸಾತ್ಮಾಕವಾಗಿ ಸರ್ಕಾರವನ್ನು ಪತನಗೊಳಿಸುವ ಭೀತಿಯಿಂದ ಸ್ಥಳೀಯರಲ್ಲಿನ ಭಿನ್ನಾಭಿಪ್ರಾಯವನ್ನು ಹತ್ತಿಕರಲು ಬ್ರಿಟಿಷರು ಈ ಕಾನೂನನ್ನು ಜಾರಿಗೊಳಿಸಿದ್ದಾಗಿ ತಿಳಿಸಿದರು. 

ದೇಶ ಸ್ವಾತಂತ್ರಗೊಂಡು 75 ವರ್ಷ ಕಳೆದರೂ ಐಪಿಸಿ ಸೆಕ್ಷನ್ 124 ಎ ಅಗತ್ಯವಿದೆಯೇ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಬೆನ್ನಲ್ಲೇ, ರೋಹಟಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಸುಪ್ರೀಂಕೋರ್ಟ್ ಅಬ್ಸರ್ ವೇಷನ್ ನ್ನು ಹೃದಯಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ. ಈ ಕಾನೂನು ಸಂಪೂರ್ಣವಾಗಿ ಹಳೆಯದಾಗಿದೆ. ವಾಕ್ ಸ್ವಾತಂತ್ರ್ಯ ಮತ್ತು ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ದೃಷ್ಟಿಯಿಂದ ಈ ಕಾನೂನನ್ನು ಜಾರಿಗೆ ತರಲಾಗಿತ್ತು ಎಂದು ಅವರು ಹೇಳಿದರು.

ಇಂಗ್ಲೆಂಡ್ ನಲ್ಲಿಯೂ ದೇಶದ್ರೋಹ ಅಪರಾಧ ಇಲ್ಲ. ಕಳೆದ 75 ವರ್ಷಗಳಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರವನ್ನು ಉರುಳಿಸಲು ಯಾವುದೇ ಹಿಂಸಾತ್ಮಾಕ ಘಟನೆಗಳಾಗಿಲ್ಲ. ಈ ಪುರಾತನ ಕಾಲದ ಕಾನೂನಿನ ಅಗತ್ಯವಿಲ್ಲ ಎಂದಿರುವ ಅವರು, ಸಂವಿಧಾನದ ವಿಧಿ 377ನ್ನು ರದ್ದುಪಡಿಸಿದಂತೆ, ಮತ್ತೊಂದು ಪುರಾತನವಾದ ದೇಶದ್ರೋಹದ ಕಾನೂನನ್ನು ರದ್ದುಪಡಿಸಬೇಕಾಗಿದೆ ಎಂದು ರೋಹಟಗಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.