ದೇಶದೇಶದ್ರೋಹ ಕಾನೂನು ಪುರಾತನವಾದದ್ದು, ತನ್ನ ಉದ್ದೇಶವನ್ನು ಮೀರಿದೆ: ಮಾಜಿ ಎಜಿ ಮುಕುಲ್ ರೋಹಟಗಿ
ಪುರಾತನವಾಗಿರುವ ದೇಶದ್ರೋಹ ಕಾನೂನು ತನ್ನ ಉದ್ದೇಶವನ್ನು ಮೀರಿದೆ. ಇನ್ನು ಮುಂದೆ ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಮಾಜಿ ಅಟಾರ್ನಿ ಜನರಲ್ ಮತ್ತು ಹಿರಿಯ ವಕೀಲ ಮುಕಲ್ ರೋಹಟಗಿ ಶುಕ್ರವಾರ ಹೇಳಿದ್ದು, ಈ ಕಾನೂನಿನ ಸಾಂವಿಧಾನಿಕ ಮಾನ್ಯತೆ ಕುರಿತ ಸುಪ್ರೀಂಕೋರ್ಟ್ ಹೇಳಿಕೆಯನ್ನು ಬೆಂಬಲಿಸಿದ್ದಾರೆ.