ದೇಶ

ಕೋತಿ ಮರಿ ಕೊಂದಿದ್ದಕ್ಕೆ ಪ್ರತಿಕಾರ: 250 ನಾಯಿ ಮರಿಗಳನ್ನು ಕೊಂದ ಕೋತಿಗಳು!

ಮಹಾರಾಷ್ಟ್ರದ ಬೀಡ್‌ನಿಂದ ನಾಯಿ ಮತ್ತು ಕೋತಿಗಳ ನಡುವೆ ರಕ್ತಸಿಕ್ತ ಯುದ್ಧ ನಡೆಯುತ್ತಿದೆ. ಕೋತಿ ಮರಿಯನ್ನು ನಾಯಿಗಳು ಕೊಂದಿದ್ದರಿಂದ ಇದಕ್ಕೆ ಪ್ರತಿಕಾರವಾಗಿ ಬರೋಬ್ಬರಿ 250 ನಾಯಿಮರಿಗಳನ್ನು ಕೋತಿಗಳು ಕೊಂದಿವೆ.

ಕೋತಿ ಮರಿ ಕೊಂದಿದ್ದಕ್ಕೆ ಪ್ರತಿಕಾರ: 250 ನಾಯಿ ಮರಿಗಳನ್ನು ಕೊಂದ ಕೋತಿಗಳು!
ಪ್ರತ್ಯಕ್ಷ ದೃಶ್ಯ
Published On :

ನವದೆಹಲಿ: ಮಹಾರಾಷ್ಟ್ರದ ಬೀಡ್‌ನಿಂದ ನಾಯಿ ಮತ್ತು ಕೋತಿಗಳ ನಡುವೆ ರಕ್ತಸಿಕ್ತ ಯುದ್ಧ ನಡೆಯುತ್ತಿದೆ. ಕೋತಿ ಮರಿಯನ್ನು ನಾಯಿಗಳು ಕೊಂದಿದ್ದರಿಂದ ಇದಕ್ಕೆ ಪ್ರತಿಕಾರವಾಗಿ ಬರೋಬ್ಬರಿ 250 ನಾಯಿಮರಿಗಳನ್ನು ಕೋತಿಗಳು ಕೊಂದಿವೆ.

ಈ ಘಟನೆ ಬೀಡ್ ಜಿಲ್ಲೆಯ ಮಜಲಗಾಂವ್‌ನಲ್ಲಿ ನಡೆದಿದ್ದು, ಒಂದು ತಿಂಗಳ ಹಿಂದೆ ನಾಯಿಗಳ ಹಿಂಡು ಕೋತಿ ಮರಿಯನ್ನು ನಿರ್ದಯವಾಗಿ ಕೊಂದಿತ್ತು. ಇದರಿಂದ ಆಕ್ರೋಶಗೊಂಡ ಮಂಗಗಳು ಅಲ್ಲಿನ ನಾಯಿಮರಿಗಳನ್ನು ಕೊಲ್ಲುತ್ತಾ ಬಂದಿವೆ.

ಮಂಗಗಳು ನಾಯಿ ಮರಿಗಳನ್ನು ಎತ್ತರದ ಕಟ್ಟಡದ ಮೇಲೆ ಹೊತ್ತೊಯ್ದು ಅಲ್ಲಿಂದ ಕೆಳಗೆ ಎಸೆಯುತ್ತಿದ್ದು ಕೆಳಗೆ ಬಿದ್ದ ನಾಯಿಮರಿಗಳು ಮೃತಪಟ್ಟಿದ್ದಾವೆ.

ಮಂಗಗಳು ಮನುಷ್ಯರ ಮೇಲೂ ದಾಳಿ ಮಾಡತೊಡಗಿದವು
ಅಲ್ಲಿದ್ದವರು ಈ ನಾಯಿಗಳನ್ನು ರಕ್ಷಿಸಲು ಮುಂದಾದಾಗ ಮಂಗಗಳು ಮನುಷ್ಯರ ಮೇಲೂ ದಾಳಿ ಮಾಡತೊಡಗಿವೆ. ಮನುಷ್ಯರ ಮಕ್ಕಳು ಮಂಗಗಳ ದಾಳಿಗೆ ಬಲಿಯಾಗುತ್ತಿದ್ದಾರೆ. ಲಾವೂಲ್ ಗ್ರಾಮವು ಮಜಲಗಾಂವ್‌ನಿಂದ ಸುಮಾರು 10 ಕಿ.ಮೀ ದೂರದಲ್ಲಿದೆ. ಸುಮಾರು 5 ಸಾವಿರ ಜನಸಂಖ್ಯೆಯ ಈ ಗ್ರಾಮದಲ್ಲಿ ಈಗ ನಾಯಿಮರಿಗಳು ಕಾಣುತ್ತಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.