ಭಾರತದ ಮೊದಲ ಸ್ಥಳೀಯ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಸಮುದ್ರ ಪ್ರಯೋಗ ಪ್ರಾರಂಭ
ಭಾರತದ ಮೊದಲ ದೇಶೀಯ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಸಮುದ್ರ ಪ್ರಯೋಗವನ್ನು ಪ್ರಾರಂಭಿಸಿದೆ.

ಕೊಚ್ಚಿ: ಭಾರತದ ಮೊದಲ ದೇಶೀಯ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಸಮುದ್ರ ಪ್ರಯೋಗವನ್ನು ಪ್ರಾರಂಭಿಸಿದೆ.
ಭಾರತದ ನೌಕಾಪಡೆಗೆ ಐಎನ್ಎಸ್ ವಿಕ್ರಾಂತ್ 2022 ಕ್ಕೆ ಸೇರ್ಪಡೆಗೊಳ್ಳಲು ಸಜ್ಜಾಗಿದೆ. ಇದರ ಭಾಗವಾಗಿ ಕೊಚ್ಚಿಯ ಸಮುದ್ರದಲ್ಲಿ ಅಭ್ಯಾಸದಲ್ಲಿ ತೊಡಗಿದೆ.
ನೌಕಾ ಪಡೆ ಈ ಬಗ್ಗೆ ಟ್ವೀಟ್ ಮಾಡಿದ್ದು, ದೇಶದ ಇತಿಹಾಸದಲ್ಲಿ ಪ್ರಮುಖವಾದ ದಿನ ಎಂದು ಬಣ್ಣಿಸಿದೆ. ಭಾರತದಲ್ಲಿ ವಿನ್ಯಾಸಗೊಂಡು ನಿರ್ಮಾಣವಾಗಿರುವ ದೇಶದ ಅತ್ಯಂತ ದೊಡ್ಡ, ಸಂಕೀರ್ಣ ಯುದ್ಧನೌಕೆ ಎಂದು ಇದನ್ನು ಬಣ್ಣಿಸಿದೆ. ಈ ಯುದ್ಧನೌಕೆಗೆ 1999 ರಲ್ಲಿ ವಿನ್ಯಾಸ ಪ್ರಾರಂಭಿಸಲಾಗಿತ್ತು. 2009 ರ ಫೆಬ್ರವರಿಯಲ್ಲಿ ನಿರ್ಮಾಣ ಪ್ರಾರಂಭವಾಗಿತ್ತು.
2013 ರ ಆಗಸ್ಟ್ 12 ರಂದು ಯುದ್ಧನೌಕೆಯನ್ನು ಉದ್ಘಾಟಿಸಲಾಗಿತ್ತು. ಬೇಸಿನ್ ಟ್ರಯಲ್ ನ್ನು ಡಿಸೆಂಬರ್ 2020 ರಲ್ಲಿ ಪೂರ್ಣಗೊಳಿಸಲಾಗಿದ್ದು, ಪ್ರಾದೇಶಿಕವಾಗಿ ಭಾರತದ ಕಡಲತೀರದ ಹಿತಾಸಕ್ತಿಗಳನ್ನು ಕಾಪಾಡಲು ಈ ಯುದ್ಧನೌಕೆ ಸಹಕಾರಿಯಾಗಿದೆ. ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ 23,000 ಕೋಟಿ ರೂಪಾಯಿ ವೆಚ್ಚದಲ್ಲಿ ವಿಕ್ರಾಂತ್ ನ್ನು ನಿರ್ಮಾಣ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


