ದೇಶ

ಉದ್ಯಮಗಳ ಜಿಎಸ್ ಟಿ ರಿಟರ್ನ್ಸ್ ಗೆ ಕಡ್ಡಾಯ ಸಿಎ ಆಡಿಟ್ ಬದಲು ಸ್ವಯಂ ಪ್ರಮಾಣೀಕರಿಸಿ ಸಲ್ಲಿಸಲು ಅವಕಾಶ 

ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆಯನ್ನು ಈಗ ಮತ್ತಷ್ಟು ಸರಳೀಕರಣಗೊಳಿಸಲಾಗಿದ್ದು, 5 ಕೋಟಿಗಿಂತಲೂ ಹೆಚ್ಚಿನ ವಹಿವಾಟು ಹೊಂದಿರುವ ತೆರಿಗೆ ಪಾವತಿದಾರರಿಗೆ ರಿಟರ್ನ್ಸ್ ಸಲ್ಲಿಕೆಯ ವಿಧಾನದಲ್ಲಿ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ.

ಉದ್ಯಮಗಳ ಜಿಎಸ್ ಟಿ ರಿಟರ್ನ್ಸ್ ಗೆ ಕಡ್ಡಾಯ ಸಿಎ ಆಡಿಟ್ ಬದಲು ಸ್ವಯಂ ಪ್ರಮಾಣೀಕರಿಸಿ ಸಲ್ಲಿಸಲು ಅವಕಾಶ 
ಜಿಎಸ್ ಟಿ
Published On :

ನವದೆಹಲಿ: ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆಯನ್ನು ಈಗ ಮತ್ತಷ್ಟು ಸರಳೀಕರಣಗೊಳಿಸಲಾಗಿದ್ದು, 5 ಕೋಟಿಗಿಂತಲೂ ಹೆಚ್ಚಿನ ವಹಿವಾಟು ಹೊಂದಿರುವ ತೆರಿಗೆ ಪಾವತಿದಾರರಿಗೆ ರಿಟರ್ನ್ಸ್ ಸಲ್ಲಿಕೆಯ ವಿಧಾನದಲ್ಲಿ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ. 

ಈ ವಿಭಾಗಕ್ಕೆ ಈ ವರೆಗೂ ಇದ್ದ ಕಡ್ಡಾಯ ಆಡಿಟ್ ಪ್ರಮಾಣಪತ್ರದ ಬದಲಾಗಿ ಸ್ವಯಂ ಪ್ರಮಾಣೀಕರಿಸಿ ರಿಟರ್ನ್ಸ್ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ ಎಂದು ಸಿಬಿಐಸಿ ಹೇಳಿದೆ. 

2 ಕೋಟಿಗಿಂತ ಹೆಚ್ಚಿನ ವಹಿವಾಟು ನಡೆಸುವ ಉದ್ಯಮಗಳನ್ನು ಹೊರತುಪಡಿಸಿ ವಾರ್ಷಿಕ ಜಿಎಸ್ ಟಿ ಸಲ್ಲಿಕೆ- 2020-21 ನೇ ಸಾಲಿನ ಜಿಎಸ್ ಟಿಆರ್ 9/9A ಅಡಿಯಲ್ಲಿ ನೋಂದಾಯಿತ ಉದ್ಯಮಗಳಿಗೆ ಜಿಎಸ್ ಟಿ ರಿಟರ್ನ್ಸ್ ಸಲ್ಲಿಸುವುದು ಕಡ್ಡಾಯವಾಗಿದ್ದು  

ಇದರ ಹೊರತಾಗಿ 5 ಕೋಟಿಗಿಂತಲೂ ಹೆಚ್ಚು ವಹಿವಾಟು ನಡೆಸುವ ತೆರಿಗೆ ಪಾವತಿದಾರರಿಗೆ ಜಿಎಸ್ ಟಿಆರ್-9ಸಿ ಫಾರ್ಮ್ ನಲ್ಲಿ ರಿಕನ್ಸಿಲಿಯೇಷನ್ ಸ್ಟೇಟ್ಮೆಂಟ್ ಸಲ್ಲಿಸುವುದು ಕಡ್ಡಾಯವಾಗಿದೆ. 

ರಿಕನ್ಸಿಲಿಯೇಷನ್ ಸ್ಟೇಟ್ಮೆಂಟ್ ಈ ವರೆಗೂ ಲೆಕ್ಕಪರಿಶೋಧಕರಿಂದ ಪ್ರಮಾಣಪತ್ರ ಪಡೆಯಬೇಕಿತ್ತು. ಆದರೆ ಈಗ ಅದಕ್ಕೆ ವಿನಾಯಿತಿ ನೀಡಲಾಗಿದ್ದು, ಸ್ವಯಂ ಪ್ರಮಾಣೀಕರಿಸಿ ಸಲ್ಲಿಸಲು ಅವಕಾಶ ನೀಡಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.