ಭಾರತೀಯ ನೌಕಾಪಡೆಯ ದೊಡ್ಡ ಬೇಟೆ: ಅರಬ್ಬೀ ಸಮುದ್ರದಲ್ಲಿ 3,000 ಕೋಟಿ ರೂ. ಮೌಲ್ಯದ ಮಾದಕವಸ್ತು ವಶ
ಅರಬ್ಬೀ ಸಮುದ್ರದ ಪಶ್ಚಿಮ ಕರಾವಳಿಯಲ್ಲಿ 300 ಕೆಜಿಯಷ್ಟು ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಮೀನುಗಾರಿಕಾ ಹಡಗನ್ನು ಭಾರತೀಯ ನೌಕಾಪಡೆ ವಶಪಡಿಸಿಕೊಂಡಿದೆ.

ನವದೆಹಲಿ: ಅರಬ್ಬೀ ಸಮುದ್ರದ ಪಶ್ಚಿಮ ಕರಾವಳಿಯಲ್ಲಿ 300 ಕೆಜಿಯಷ್ಟು ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಮೀನುಗಾರಿಕಾ ಹಡಗನ್ನು ಭಾರತೀಯ ನೌಕಾಪಡೆ ವಶಪಡಿಸಿಕೊಂಡಿದೆ.
ಇತ್ತೀಚಿನ ತಿಂಗಳುಗಳಲ್ಲಿ ಭದ್ರತಾ ಪಡೆಗಳು ಮಾದಕವಸ್ತುಗಳ ಸಾಗಣೆಯನ್ನು ಪತ್ತೆ ಹಚ್ಚಿ, ವಶಪಡಿಸಿಕೊಳ್ಳುವ ಮೂಲಕ ಯಶಸ್ವಿ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.
ಅರೇಬಿಯನ್ ಸಮುದ್ರದಲ್ಲಿ ಕಣ್ಗಾವಲು ಗಸ್ತು ತಿರುಗುತ್ತಿದ್ದ ಸುವರ್ಣ ಹೆಸರಿನ ನೌಕಾ ಹಡಗು ಸಿಬ್ಬಂದಿ ಮೀನುಗಾರಿಕಾ ಹಡಗೊಂದಿನ ಅನುಮಾನಾಸ್ಪ ಚಲನವಲಯವನ್ನು ಗುರುತಿಸಿದ್ದಾರೆ. ಕೂಡಲೇ ಹಡಗನ್ನು ನಿಲ್ಲಿಸಿದ ನೌಕಾಪಡೆಯ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದು ಈ ವೇಳೆ 300 ಕೆಜಿಗಿಂತ ಹೆಚ್ಚು ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈಗ ವಶಪಡಿಸಿಕೊಳ್ಳಲಾಗಿರುವ ಮಾದಕವಸ್ತುವಿನ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು ವೆಚ್ಚ 3,000 ಕೋಟಿ ರೂಪಾಯಿ ಎಂದು ಹೇಳಿದ್ದಾರೆ.
ನೌಕಾಪಡೆಯ ಪ್ರಕಾರ, ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಹೆಚ್ಚಿನ ತನಿಖೆಗಾಗಿ ನೌಕಾಪಡೆ ಸಿಬ್ಬಂದಿ ಹಡಗನ್ನು ಕೇರಳದ ಕೊಚ್ಚಿ ಬಂದರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ವರ್ಷದಲ್ಲಿ, ಭಾರತೀಯ ಕೋಸ್ಟ್ ಗಾರ್ಡ್ ಸುಮಾರು 5,200 ಕೋಟಿ ರೂ.ಗಳ 1.6 ಟನ್ಗಳಷ್ಟು ಮಾದಕವಸ್ತುಗಳನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


