ಮಾದಕವಸ್ತು

Delhi: Snack packet ಗಳಲ್ಲಿ ಅಡಗಿಸಿಟ್ಟಿದ್ದ 2 ಸಾವಿರ ಕೋಟಿ ರೂ ಮೌಲ್ಯದ ಡ್ರಗ್ಸ್ ವಶಕ್ಕೆ!
ದೆಹಲಿ ಪೊಲೀಸ್ ವಿಶೇಷ ಘಟಕವು ಗುರುವಾರ ಮತ್ತೊಂದು ಬೃಹತ್ ಮಾದಕವಸ್ತು ಕಳ್ಳಸಾಗಣೆ ಜಾಲ ಭೇದಿಸಿದ್ದು, ದೆಹಲಿಯ ರಮೇಶ್ ನಗರ ಪ್ರದೇಶದಲ್ಲಿರುವ ಗೋದಾಮಿನಿಂದ 2000 ಕೋಟಿ ರೂ. ಮೌಲ್ಯದ ಸುಮಾರು 200 ಕೆಜಿಗಳಷ್ಟು ಕೊಕೇನ್ ಅನ್ನು ವಶಪಡಿಸಿಕೊಂಡಿದೆ.

ರಾಜ್ಯದಲ್ಲಿನ ಡ್ರಗ್ಸ್ ಹಾವಳಿಯನ್ನು ನಿಲ್ಲಿಸಲಾಗುವುದು: ಗೃಹ ಸಚಿವ ಜಿ. ಪರಮೇಶ್ವರ
ನಗರ ಪ್ರದೇಶಗಳಿಂದ ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿದ್ದು, ರಾಜ್ಯದಲ್ಲಿ ಡ್ರಗ್ಸ್ ಹಾವಳಿಯನ್ನು ನಿಲ್ಲಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಭಾನುವಾರ ತಿಳಿಸಿದ್ದಾರೆ.

ಪಂಜಾಬ್: ಎರಡು ಪ್ಯಾಕೆಟ್ ಮಾದಕವಸ್ತು ಸಮೇತ ಪಾಕ್ ಡ್ರೋನ್ ವಶಪಡಿಸಿಕೊಂಡ ಬಿಎಸ್‌ಎಫ್
ಪುನಾಜ್‌ಬ್‌ನ ಫಾಜಿಲ್ಕಾದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪಾಕಿಸ್ತಾನದ ಕಡೆಯಿಂದ ಬಂದ ಡ್ರೋನ್ ಮತ್ತು ಅಬೋಹರ್ ಗಡಿಯ ಬಳಿ ಎರಡು ಶಂಕಿತ ಮಾದಕವಸ್ತು ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದೆ ಎಂದು ಗುರುವಾರ ಅಧಿಕೃತ ಹೇಳಿಕೆ ತಿಳಿಸಿದೆ.

ಮಾದಕವಸ್ತು ಸಾಗಿಸುತ್ತಿದ್ದ ಪಾಕಿಸ್ತಾನದ ಮತ್ತೊಂದು ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್!
ಪಂಜಾಬ್‌ನ ಅಮೃತಸರದ ವಾಘಾ-ಅಟ್ಟಾರಿ ಅಂತರರಾಷ್ಟ್ರೀಯ ಗಡಿ ಬಳಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಪಾಕಿಸ್ತಾನದ ಮತ್ತೊಂದು ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೊಡೆದುರುಳಿಸಿದೆ.

ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್, ಓರ್ವನ ಬಂಧನ
ಪಂಜಾಬ್‌ನ ಅಮೃತಸರದಲ್ಲಿ ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿ (ಐಬಿ) ಬಳಿ ಮತ್ತೊಂದು ಡ್ರೋನ್ ಅನ್ನು ಹೊಡೆದುರುಳಿಸಿರುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಮಾದಕವಸ್ತುಗಳೊಂದಿಗೆ ಕಳ್ಳಸಾಗಣೆದಾರನನ್ನು ಶನಿವಾರ ಸಂಜೆ ಬಂಧಿಸಿದೆ ಎಂದು ಪಡೆ ಭಾನುವಾರ ತಿಳಿಸಿದೆ.

ಮಾಲಿವುಡ್‌ನಲ್ಲಿ ಡ್ರಗ್ಸ್ ಹಾವಳಿ: ಸೇವನೆ- ಮಾರಾಟ ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ; ಪೊಲೀಸರು
ಬಾಲಿವುಡ್, ಟಾಲಿವುಡ್, ಕಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ಬಳಿಕ ಇದೀಗ ಮಲಯಾಳಂ ಚಿತ್ರರಂಗದಲ್ಲಿ ಡ್ರಗ್ಸ್ ಹಾವಳಿ ಸದ್ದು ಮಾಡುತ್ತಿದೆ. ಮಲಯಾಳಂ ಚಲನಚಿತ್ರೋದ್ಯಮದ ಪ್ರಮುಖರು ಚಿತ್ರರಂಗಕ್ಕೆ ಡ್ರಗ್ಸ್ ಒಳಹರಿವಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ನಂತರ, ಕೇರಳ ಪೊಲೀಸರು ಕಾನೂನು ಉಲ್ಲಂಘಿಸುವವರನ್ನು ಮುಲಾಜಿಲ್ಲದೆ ಮಟ್ಟಹಾಕಲು ನಿರ್ಧರಿಸಿದ್ದಾರೆ.

ಮಾದಕದ್ರವ್ಯದ ವಿರುದ್ಧ ಶೂನ್ಯ ಸಹಿಷ್ಣು ನೀತಿ ಜಾರಿಗೆ ಪ್ರಧಾನಿ ಮೋದಿ ಸರ್ಕಾರ ಬದ್ಧವಾಗಿದೆ: ಕೇಂದ್ರ ಗೃಹ ಸಚಿವ
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಆಡಳಿತಾರೂಢ ಎನ್'ಡಿಎ ಸರ್ಕಾರವು ಎಲ್ಲಾ ರೀತಿಯ ಮಾದಕವಸ್ತುಗಳ ವಿರುದ್ಧ ಶೂನ್ಯ ಸಹಿಷ್ಣು ನೀತಿಯ ಜಾರಿಗೆ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಹೇಳಿದ್ದಾರೆ.

ಭಾರತೀಯ ನೌಕಾಪಡೆಯ ದೊಡ್ಡ ಬೇಟೆ: ಅರಬ್ಬೀ ಸಮುದ್ರದಲ್ಲಿ 3,000 ಕೋಟಿ ರೂ. ಮೌಲ್ಯದ ಮಾದಕವಸ್ತು ವಶ
ಅರಬ್ಬೀ ಸಮುದ್ರದ ಪಶ್ಚಿಮ ಕರಾವಳಿಯಲ್ಲಿ 300 ಕೆಜಿಯಷ್ಟು ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಮೀನುಗಾರಿಕಾ ಹಡಗನ್ನು ಭಾರತೀಯ ನೌಕಾಪಡೆ ವಶಪಡಿಸಿಕೊಂಡಿದೆ.

ಪೊಲೀಸರಿಗೆ ಗೊತ್ತಿಲ್ಲದೆ ಡ್ರಗ್ಸ್ ಹಾಗೂ ಕಳ್ಳತನ ದಂಧೆಗಳು ನಡೆಯುವುದಿಲ್ಲ: ಎಚ್.ವಿಶ್ವನಾಥ್ ಸ್ಪೋಟಕ ಹೇಳಿಕೆ
ಪೊಲೀಸರಿಗೆ ಗೊತ್ತಿಲ್ಲದೆ ಡ್ರಗ್ಸ್ ಹಾಗೂ ಕಳ್ಳತನ ದಂಧೆಗಳು ನಡೆಯುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.

