Arabian Sea

11 ದಿನಗಳಿಂದ ಅರಬ್ಬಿ ಸಮುದ್ರದಲ್ಲಿ ಸಿಲುಕಿದ್ದ 31 ಮೀನುಗಾರರು; ಭಾರತೀಯ ಕರಾವಳಿ ರಕ್ಷಣಾ ಪಡೆ ರಕ್ಷಣೆ
'ರಿಯಲ್ ಟೈಂ ಹವಾಮಾನ ದತ್ತಾಂಶ ಮತ್ತು ಸಮಗ್ರ ಕಾರ್ಯಾಚರಣೆ ಕೇಂದ್ರದ ದತ್ತಾಂಶವನ್ನು ಬಳಸಿಕೊಂಡು ನಾವು ಹಡಗು ಸಿಲುಕಿಕೊಂಡಿದ್ದ ಸಂಭವನೀಯ ಸ್ಥಳವನ್ನು ಲೆಕ್ಕ ಹಾಕಿದ್ದೇವೆ' ಎಂದು ಪ್ರಕಟಣೆ ತಿಳಿಸಿದೆ.

Anytime Anywhere: ಶತ್ರು ರಾಷ್ಟ್ರಗಳ ಹಡಗುಗಳನ್ನು ಉಡಾಯಿಸಬಲ್ಲ ಕ್ಷಿಪಣಿ ಪರೀಕ್ಷೆ ಯಶಸ್ವಿ!
ಭಾರತೀಯ ನೌಕಾಪಡೆಯು ಯಾವುದೇ ಕ್ಷಣ, ಎಲ್ಲಿಯೇ ಆದರೂ ರಾಷ್ಟ್ರದ ಕಡಲ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ, ಭವಿಷ್ಯಕ್ಕೆ ಸಿದ್ಧವಾಗಿದೆ ಎಂದು ಹೇಳಿದೆ.

Pakistan boat seized in Gujarat coast: 600 ಕೋಟಿ ರೂ ಮೌಲ್ಯದ ಡ್ರಗ್ಸ್ ಸಹಿತ ಪಾಕ್ ದೋಣಿ ವಶಕ್ಕೆ, 14 ಮಂದಿ ಬಂಧನ
ಭಾರತೀಯ ಕರಾವಳಿ ಭದ್ರತಾ ಪಡೆಗಳು ಭಾನುವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸುಮಾರು 600 ಕೋಟಿ ರೂ ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನ ಮೂಲದ ಬೋಟ್ ಅನ್ನು ಸೀಜ್ ಮಾಡಿ 14 ಜನರನ್ನು ಬಂಧಿಸಿದೆ.

ಭಾರತೀಯ ನೌಕಪಡೆಯಿಂದ ಅರಬ್ಬಿ ಸಮುದ್ರದಲ್ಲಿ 940 ಕೆಜಿ ಡ್ರಗ್ಸ್ ವಶ!
ಭಾರತೀಯ ನೌಕಾಪಡೆಯು ಪಶ್ಚಿಮ ಅರೇಬಿಯನ್ ಸಮುದ್ರದಲ್ಲಿ 940 ಕೆಜಿ ನಿಷೇಧಿತ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಮತ್ತೆ ಸೊಮಾಲಿಯ ಕಡಲ್ಗಳ್ಳರ ಹೆಡೆಮುರಿ ಕಟ್ಟಿದ ಭಾರತೀಯ ಸೇನೆ: 23 ಪಾಕಿಸ್ತಾನಿ ಪ್ರಜೆಗಳ ರಕ್ಷಣೆ, ಇರಾನ್ ಹಡಗು ಬಂಧಮುಕ್ತ!
ಅರೇಬಿಯನ್ ಸಮುದ್ರದಲ್ಲಿ ಮತ್ತೆ ಬಾಲ ಬಿಚ್ಚಿದ್ದ ಸೊಮಾಲಿಯಾ ಕಡಲ್ಗಳ್ಳರನ್ನು ಭಾರತೀಯ ಸೇನೆ ಹೆಡೆಮುರಿ ಕಟ್ಟಿದ್ದು, ಸತತ ಕಾರ್ಯಾಚರಣೆ ನಡೆಸಿ 23 ಪಾಕಿಸ್ತಾನಿ ಪ್ರಜೆಗಳ ರಕ್ಷಣೆ ಮಾಡಿದ್ದಲ್ಲದೇ ಇರಾನ್ ಮೂಲದ ಸರಕ ಸಾಗಾಣಿಕಾ ಹಡಗನ್ನು ಬಂಧಮುಕ್ತಗೊಳಿಸಿದೆ.

ಅರಬ್ಬಿ ಸಮುದ್ರದಲ್ಲಿ ಮಾಲ್ಟಾ ನೌಕೆ ಅಪಹರಣ: ನೆರವಿಗೆ ಭಾರತೀಯ ನೌಕಾಪಡೆಯ ಯುದ್ಧನೌಕೆ ನಿಯೋಜನೆ
ಅರಬ್ಬಿ ಸಮುದ್ರದಲ್ಲಿ ಮಾಲ್ಟಾ ನೌಕೆ ಕಡಲ್ಗಳ್ಳರಿಂದ ಅಪಹರಣವಾಗಿದ್ದು, ಅದರ ನೆರವಿಗೆ ಭಾರತೀಯ ನೌಕಾಪಡೆಯ ಯುದ್ಧನೌಕೆಯೊಂದನ್ನು ನಿಯೋಜನೆ ಮಾಡಲಾಗಿದೆ.

ಸೌಹಾರ್ದತೆ ಸೂಚಕವಾಗಿ 198 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ ಪಾಕಿಸ್ತಾನ
ಪಾಕಿಸ್ತಾನದ ಅಧಿಕಾರಿಗಳು ಅರಬ್ಬಿ ಸಮುದ್ರದಲ್ಲಿ ದೇಶದ ಪ್ರಾದೇಶಿಕ ಗಡಿಯ ನೀರಿನಲ್ಲಿ ಮೀನುಗಾರಿಕೆಗೆ ತೆರಳಿ ಬಂಧಿತರಾಗಿದ್ದ 198 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ್ದಾರೆ.

ಟೌಕ್ಟೇ ಚಂಡಮಾರುತ: ಅರಬ್ಬೀ ಸಮುದ್ರದಲ್ಲಿ ದೋಣಿ ಮಗುಚಿ ನಾಗಪಟ್ಟಿಣಂ ಜಿಲ್ಲೆಯ 9 ಮೀನುಗಾರರು ಕಣ್ಮರೆ
ಕಳೆದೆರಡು ದಿನಗಳಿಂದ ಟೌಕ್ಟೇ ಚಂಡಮಾರುತದ ಪ್ರಭಾವ ಜೋರಾಗಿದೆ. ನಾಗಪಟ್ಟಿಣಂ ಜಿಲ್ಲೆಯ 7 ಮಂದಿ ಸೇರಿದಂತೆ 9 ಮೀನುಗಾರರು ನಾಪತ್ತೆಯಾಗಿದ್ದಾರೆ. ಚಂಡಮಾರುತದ ಜೋರಾದ ಅಲೆಗೆ ಸಿಲುಕಿ ಅರಬ್ಬೀ ಸಮುದ್ರಕ್ಕೆ ಮೀನುಗಾರಿಕೆಗೆ ದೋಣಿಗಳಲ್ಲಿ ಹೋಗಿದ್ದ ಮೀನುಗಾರರು ವಾಪಸ್ ಬರುವ ಹೊತ್ತಿಗೆ ಚಂಡಮಾರುತದ ಗಾಳಿಯ ರಭಸಕ್ಕೆ ಸಿಲುಕಿ ದೋಣಿ ಮಗುಚಿಬಿದ್ದು ಸಮುದ್ರ ಪಾಲಾಗಿದ್ದಾರೆ.

ಅರಬ್ಬೀ ಸಮುದ್ರದಲ್ಲಿ ಟೌಕ್ಟೆ ಚಂಡಮಾರುತ ಸಾಧ್ಯತೆ: ಕರಾವಳಿ ಮೀನುಗಾರರಿಗೆ ಮುನ್ನೆಚ್ಚರಿಕೆ
ಅರಬ್ಬೀ ಸಮುದ್ರದಲ್ಲಿ ಟೌಕ್ಟೆ ಚಂಡಮಾರುತ ಗುರುವಾರ(ಮೇ 13)ದಂದು ಏಳುವ ಸಾಧ್ಯತೆಯಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮತ್ತು ಈಗಾಗಲೇ ಸಮುದ್ರ ತೀರದಲ್ಲಿ ಮೀನುಗಾರಿಕೆಗೆ ಹೋಗಿರುವವರು ದಡ ಸೇರುವಂತೆ ಕರಾವಳಿ ಭದ್ರತಾ ಪಡೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

