ದೇಶದಲ್ಲಿ ಕೊರೋನಾ ರೌದ್ರನರ್ತನ: ಒಂದೇ ದಿನ 90,802 ಕೇಸ್ ಪತ್ತೆ, ಸೋಂಕಿನಲ್ಲಿ ಬ್ರೆಜಿಲ್ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಭಾರತ
ಜನಸಂಖ್ಯೆಯಲ್ಲಿ ವಿಶ್ವದ ಎರಡನೇ ಸ್ಥಾನದಲ್ಲಿರುವ ಭಾರತದ ಇದೀಗ ಒಟ್ಟಾರೆ ಕೊರೋನಾ ಸೋಂಕಿತರ ಪಟ್ಟಿಯಲ್ಲಿಯೂ ಎರಡನೇ ಸ್ಥಾನಕ್ಕೇರಿದೆ. ಸೋಮವಾರ ಭಾರತದಲ್ಲಿ ಮತ್ತೆ ದಾಖಲೆಯ 90,802 ಹೊಸ ಪ್ರಕರಣಗಳು ದೃಢಪಡುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 42 ಲಕ್ಷ ಗಡಿ ದಾಟಿದೆ.

ನವದೆಹಲಿ: ಜನಸಂಖ್ಯೆಯಲ್ಲಿ ವಿಶ್ವದ ಎರಡನೇ ಸ್ಥಾನದಲ್ಲಿರುವ ಭಾರತದ ಇದೀಗ ಒಟ್ಟಾರೆ ಕೊರೋನಾ ಸೋಂಕಿತರ ಪಟ್ಟಿಯಲ್ಲಿಯೂ ಎರಡನೇ ಸ್ಥಾನಕ್ಕೇರಿದೆ. ಸೋಮವಾರ ಭಾರತದಲ್ಲಿ ಮತ್ತೆ ದಾಖಲೆಯ 90,802 ಹೊಸ ಪ್ರಕರಣಗಳು ದೃಢಪಡುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 42 ಲಕ್ಷ ಗಡಿ ದಾಟಿದೆ.
ಒಂದೇ ದಿನ 90,802 ಕೇಸ್ ಪತ್ತೆಯಾಗುವುದರೊಂದಿಗೆ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 42,04,614ಕ್ಕೆ ಏರಿಕೆಯಾಗಿದೆ. ಈ ಮೂಲಕ 42.04ಲಕ್ಷ ಸೋಂಕಿತರೊಂದಿಗೆ 2ನೇ ಸ್ಥಾನದಲ್ಲಿದ್ದ ಬ್ರೆಜಿಲ್'ನ್ನು 3ನೇ ಸ್ಥಾನಕ್ಕೆ ತಳ್ಳಿದೆ. ಇನ್ನು 64.34 ಕೇಸುಗಳೊಂದಿಗೆ ಅಮೆರಿಕಾ ಈಗಲೂ ಮೊದಲ ಸ್ಥಾನದಲ್ಲಿ ಮುಂದುವರೆದಿದೆ.
ಈ ನಡುವೆ ಸೋಮವಾರ ಒಂದೇ ದಿನ 1,016 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಈ ವರೆಗೆ ಕೊರೋನಾಗೆ ಬಲಿಯಾದವರ ಸಂಖ್ಯೆ 71,642ಕ್ಕೇರಿದೆ. ಇನ್ನು ಸಾವಿನ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲೇ ಮುಂದುವರೆದಿದೆ.
42,04,614 ಮಂದಿ ಸೋಂಕಿತರ ಪೈಕಿ 32,50,429 ಜನರು ಸೋಂಕಿನಿಂದ ಗುಣಮುಖರಾಗಿ ಆಶ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ದೇಶದಲ್ಲಿನ್ನೂ 8,82,542 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
2020ರ ಜ.30ರಂದು ದೇಶದಲ್ಲಿ ಮೊದಲ ಕೇಸು ದಾಖಲಾಗಿತ್ತು. ಆಗ ವಿಶ್ವದಲ್ಲಿಯೇ ಅತೀ ಹೆಚ್ಚು ಸೋಂಕಿತರು ಇರುವ ದೇಶಗಳ ಪಟ್ಟಿಯಲ್ಲಿ ಭಾರತದ ಸ್ಥಾನ 50ಕ್ಕಿಂತ ಮೇಲಕ್ಕಿತ್ತು. ಆದರೆ, ನಂತರದಲ್ಲಿ ವಿದೇಶದಿಂದ ಬಂದವರ ಮೂಲಕ ಮತ್ತು ಸ್ಥಳೀಯವಾಗಿ ಹಬ್ಬಿದ ಪ್ರಕರಣಗಳು, ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಲು ಕಾರಣವಾಯಿತು. ಜೊತೆಗೆ ಪ್ರಸಕ್ತ ನಿತ್ಯವೂ 11ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂತು ಪತ್ತೆ ನಡೆಸುತ್ತಿರುವುದು ಕೂಡ ದಾಖಲೆ ಪ್ರಮಾಣದಲ್ಲಿ ಹೊಸ ಸೋಂಕಿತರು ಪತ್ತೆಯಾಗಲು ಕಾರಣವಾಗಿದೆ.
ಮಹಾರಾಷ್ಟ್ರದಲ್ಲಿ ಕೊರೋನಾ ರೌದ್ರನರ್ತನ ಹೆಚ್ಚಾಗಿದ್ದು, ನಿನ್ನೆ ಒಂದೇ ದಿನ ದಾಖಲೆಯ 23,350 ಸೋಂಕು ದಾಖಲಾಗಿದೆ. ಅಲ್ಲದೆ, 328 ಮಂದಿ ಸಾವನ್ನಪ್ಪಿದ್ದಾರೆ. ಉಳಿದಂತೆ ಆಂಧ್ರಪ್ರದೇಶದಲ್ಲಿ 10,794 (70 ಸಾವು), ಕರ್ನಾಟಕ 9319 (95 ಸಾವು) ಉತ್ತರಪ್ರದೇಶದಲ್ಲಿ 6518 (77 ಸಾವು), ತಮಿಳುನಾಡಿನಲ್ಲಿ 5783 (88 ಸಾವು) ಕೇಸು ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


