ಎಲ್‌ಎಸಿಯಲ್ಲಿ ಸಿಲುಕಿದ್ದ ಮೂವರು ಚೀನೀಯರನ್ನು ರಕ್ಷಿಸಿ, ಆಹಾರ, ವೈದ್ಯಕೀಯ ನೆರವು ನೀಡಿದ ಭಾರತೀಯ ಸೇನೆ
ಕಳೆದ ನಾಲ್ಕು ತಿಂಗಳುಗಳಿಂದ ಕೆಟ್ಟ ಕಾರಣಗಳಿಗಾಗಿ ಸುದ್ದಿಯಾಗುತ್ತಿದ್ದ ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಈಗ ಒಂದು ಉತ್ತಮ ಕಾರಣಕ್ಕಾಗಿ ಸುದ್ದಿಯಾಗಿದ್ದು, ಭಾರತೀಯ ಸೇನೆಯ ಯೋಧರು, ದಾರಿ ತಪ್ಪಿ ಸಿಕ್ಕಿಂನ ಎಲ್‌ಎಸಿ ಬಳಿ ಸಿಲುಕಿದ್ದ ಮೂವರು ಚೀನಿಯರನ್ನು ರಕ್ಷಿಸಿ, ಅವರು ಸುರಕ್ಷಿತವಾಗಿ ಮರಳಲು ಸಹಾಯ ಮಾಡಿದ್ದಾರೆ.

ನವದೆಹಲಿ: ಕಳೆದ ನಾಲ್ಕು ತಿಂಗಳುಗಳಿಂದ ಕೆಟ್ಟ ಕಾರಣಗಳಿಗಾಗಿ ಸುದ್ದಿಯಾಗುತ್ತಿದ್ದ ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಈಗ ಒಂದು ಉತ್ತಮ ಕಾರಣಕ್ಕಾಗಿ ಸುದ್ದಿಯಾಗಿದ್ದು, ಭಾರತೀಯ ಸೇನೆಯ ಯೋಧರು, ದಾರಿ ತಪ್ಪಿ ಸಿಕ್ಕಿಂನ ಎಲ್‌ಎಸಿ ಬಳಿ ಸಿಲುಕಿದ್ದ ಮೂವರು ಚೀನಿಯರನ್ನು ರಕ್ಷಿಸಿ, ಅವರು ಸುರಕ್ಷಿತವಾಗಿ ಮರಳಲು ಸಹಾಯ ಮಾಡಿದ್ದಾರೆ.
ಸೆಪ್ಟೆಂಬರ್ 3 ರಂದು ಉತ್ತರ ಸಿಕ್ಕಿಂನ ಪ್ರಸ್ಥಭೂಮಿ ಪ್ರದೇಶದಲ್ಲಿ ದಾರಿ ತಪ್ಪಿದ ಮೂವರು ಚೀನಾ ನಾಗರಿಕರಿಗೆ ಭಾರತೀಯ ಸೈನಿಕರು ಸಹಾಯ ಹಸ್ತ ಚಾಚಿದರು.
ವಿಪರೀತ ಎತ್ತರ ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳಿಂದ ಚೀನಿಯರನ್ನು ರಕ್ಷಿಸಿದ ಭಾರತೀಯ ಯೇಧರು, ಶೂನ್ಯ ತಾಪಮಾನದಲ್ಲಿ ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆಯನ್ನು ಒಳಗೊಂಡ ಚೀನಾದ ನಾಗರಿಕರ ಜೀವಕ್ಕೆ ಅಪಾಯ ಇರುವುದನ್ನು ಅರಿತುಕೊಂಡ ತಕ್ಷಣವೇ ಆಮ್ಲಜನಕ, ಆಹಾರ ಮತ್ತು ಬೆಚ್ಚಗಿನ ಬಟ್ಟೆಗಳು ಸೇರಿದಂತೆ ವೈದ್ಯಕೀಯ ನೆರವು ನೀಡಿದರು.
ಸಿಕ್ಕಿಂನ 220 ಕಿ.ಮೀ ಉದ್ದದ ಅಂತರರಾಷ್ಟ್ರೀಯ ಗಡಿಯ ಬಳಿ ಕೆಲವೇ ಜನರು ವಾಸಿಸುತ್ತಿದ್ದಾರೆ. ಆದ್ದರಿಂದ ಯಾರಾದರೂ ದಾರಿ ತಪ್ಪಿದರೆ ಅವರು ಇತರರ ಸಹಾಯ ಪಡೆಯುವುದು ಕಷ್ಟ ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


