ದೇಶ

ಕಣ್ಣೂರು ವಿಮಾನ ನಿಲ್ದಾಣದಲ್ಲಿ 47 ಲಕ್ಷ ಮೌಲ್ಯದ ಚಿನ್ನ ವಶ, ಕಾಸರಗೋಡಿನ ವ್ಯಕ್ತಿ ಅರೆಸ್ಟ್

ವಂದೇ ಭಾರತ್ ಮಿಷನ್ ಅಡಿಯಲ್ಲಿ ನಿಗದಿಯಾಗಿದ್ದ 'ಏರ್ ಅರೇಬಿಯಾ' ಚಾರ್ಟರ್ಡ್ ವಿಮಾನದಲ್ಲಿ ಶಾರ್ಜಾದಿಂದ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರಿಂದ ಸುಮಾರು 47 ಲಕ್ಷ ರೂಪಾಯಿ ಮೌಲ್ಯದ 937 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆಇದ್ದಾರೆ.

ಕಣ್ಣೂರು ವಿಮಾನ ನಿಲ್ದಾಣದಲ್ಲಿ 47 ಲಕ್ಷ ಮೌಲ್ಯದ ಚಿನ್ನ ವಶ, ಕಾಸರಗೋಡಿನ ವ್ಯಕ್ತಿ ಅರೆಸ್ಟ್
ವಶಕ್ಕೆ ಪಡೆಯಲಾದ ಚಿನ್ನ
Published On :

ಕಣ್ನೂರು: ವಂದೇ ಭಾರತ್ ಮಿಷನ್ ಅಡಿಯಲ್ಲಿ ನಿಗದಿಯಾಗಿದ್ದ 'ಏರ್ ಅರೇಬಿಯಾ' ಚಾರ್ಟರ್ಡ್ ವಿಮಾನದಲ್ಲಿ ಶಾರ್ಜಾದಿಂದ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರಿಂದ ಸುಮಾರು 47 ಲಕ್ಷ ರೂಪಾಯಿ ಮೌಲ್ಯದ 937 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆಇದ್ದಾರೆ.

ಏರ್ ಇಂಟೆಲಿಜೆನ್ಸ್  ಘಟಕದ ಮೂಲಗಳ ಪ್ರಕಾರ, ಕಸ್ಟಮ್ಸ್ ಸಹಾಯಕ ಆಯುಕ್ತ ಎಸ್ ಮಧುಸೂದನ ಭಟ್ ನೇತೃತ್ವದ ತಂಡವು ಚಿನ್ನವನ್ನು ವಶಪಡಿಸಿಕೊಂಡಿದೆ.

ಘಟನೆಗೆ ಸಂಬಂಧಿಸಿ ಸೋಮವಾರ ರಾತ್ರಿ ವಿಮಾನದಲ್ಲಿ ಆಗಮಿಸಿದ ಕಾಸರಗೋಡಿನ ಒಬ್ಬ ವ್ಯಕ್ತಿಯನ್ನು ಸಹ ವಶಕ್ಕೆ ಪಡೆದಿದೆ.

ವ್ಯಕ್ತಿಯು ಚಿನ್ನವನ್ನು ತನ್ನ ಒಳೌಡುಪಿನಲ್ಲಿ  ಕ್ಯಾಪ್ಸುಲ್ ರೂಪದಲ್ಲಿ ಇಟ್ಟು ಸಾಗಿಸುತ್ತಿದ್ದನೆಂದು ಅಧಿಕಾರಿಗಳು ವಿವರಿಸಿದ್ದಾರೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.