ದೇಶ

ಸೀತಾದೇವಿಯಿಲ್ಲದೇ ರಾಮ ಅಪೂರ್ಣ; ಬಿಹಾರದಲ್ಲಿ ಭವ್ಯ ಸೀತಾಮಂದಿರ ನಿರ್ಮಾಣ: ಚಿರಾಗ್ ಪಾಸ್ವಾನ್ ಭರವಸೆ

ಬಿಹಾರದ ಸೀತಾಮಹ್ರಿಯಲ್ಲಿ ಭವ್ಯವಾದ ಸೀತಾ ಮಂದಿರ ನಿರ್ಮಾಣ ಮಾಡಬೇಕೆನ್ನುವುದು ನನ್ನ ಕನಸಾಗಿದೆ ಎಂದು ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

ಸೀತಾದೇವಿಯಿಲ್ಲದೇ ರಾಮ ಅಪೂರ್ಣ; ಬಿಹಾರದಲ್ಲಿ ಭವ್ಯ ಸೀತಾಮಂದಿರ ನಿರ್ಮಾಣ: ಚಿರಾಗ್ ಪಾಸ್ವಾನ್ ಭರವಸೆ
ಚಿರಾಗ್ ಪಾಸ್ವಾನ್
Published On :

ಪಾಟ್ನಾ: ಬಿಹಾರದ ಸೀತಾಮಹ್ರಿಯಲ್ಲಿ ಭವ್ಯವಾದ ಸೀತಾ ಮಂದಿರ ನಿರ್ಮಾಣ ಮಾಡಬೇಕೆನ್ನುವುದು ನನ್ನ ಕನಸಾಗಿದೆ ಎಂದು ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

ಪಾಟ್ನಾದಲ್ಲಿನ  ಸೀತಾ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಚಿರಾಗ್ ಪಾಸ್ವಾನ್, ಅಯೋಧ್ಯೆಯ ರಾಮ ಮಂದಿರಕ್ಕೂ ಭವ್ಯವಾದ ಸೀತಾ ಮಂದಿರನ್ನು ನಿರ್ಮಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.

ಭಗವಾನ್ ರಾಮ್ ಸೀತಾ ದೇವಿಯಿಲ್ಲದೆ ಅಪೂರ್ಣ ಮತ್ತು ಬಿಹಾರದ ಸೀತಮಾರ್ಹಿಯಲ್ಲಿ ಸೀತೆಗಾಗಿ ದೇವಾಲಯವನ್ನು ನಿರ್ಮಿಸಲಾಗುವುದು ಎಂದು ಲೋಕ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್ ಎಂದು ಹೇಳಿದರು.

ದೇವಾಲಯವು ಬಾಗ್ ಮೂಲಸೌಕರ್ಯ ಯೋಜನೆಯೊಂದಿಗೆ ಬರಲಿದೆ. ಅಯೋಧ್ಯೆಯ ರಾಮ ದೇವಾಲಯ ಮತ್ತು ಸೀತಾಮರ್ಹಿಯನ್ನು ಸಂಪರ್ಕಿಸುವ ಕಾರಿಡಾರ್ ಅನ್ನು ಸಹ ನಿರ್ಮಿಸಲಾಗುವುದು" ಎಂದು ಪಾಸ್ವಾನ್ ಹೇಳಿದರು, ಈ ಭರವಸೆ ತನ್ನ ಚುನಾವಣಾ ಪ್ರಣಾಳಿಕೆಯ ಭಾಗವಾಗಿದೆ ಎಂದು ಹೇಳಿದರು.

ಎರಡೂ ದೇವಾಲಯಗಳ ಮಧ್ಯೆ ಸಂಪರ್ಕ ಕಲ್ಪಿಸಿ, ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡುವ ಭಕ್ತಾದಿಗಳು ಸೀತಾಮಹ್ರಿಗೂ ಭೇಟಿ ನೀಡಿ ಸೀತಾಮಾತೆಯ ದರ್ಶನ ಪಡೆಯುವಂತೆ ಅವಕಾಶ ಕಲ್ಪಿಸಲಾಗುವುದು ಎಂದು ಚಿರಾಗ್ ತಮ್ಮ ಯೋಜನೆಯನ್ನು ಬಿಚ್ಚಿಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.