ಸ್ವತಂತ್ರ ಶಾಸಕ ಲಾಲ್ಡುಹೋಮಾ ಅನರ್ಹಗೊಳಿಸಿದ ಮಿಜೋರಾಂ ಅಸ್ಲೆಂಬಿ!
ಮಿಜೋರಾಂನ ಸ್ವತಂತ್ರ ಶಾಸಕ ಲಾಲ್ಡುಹೋಮಾ ಅವರನ್ನು ವಿಧಾನಸಭೆ ಸ್ಪೀಕರ್ ಲಾಲ್ರಿನ್ಲಿಯಾನಾ ಸೈಲೊ ಅವರನ್ನು ಅನರ್ಹಗೊಳಿಸಿದ್ದಾರೆ.

ಗುವಾಹಟಿ: ಮಿಜೋರಾಂನ ಸ್ವತಂತ್ರ ಶಾಸಕ ಲಾಲ್ಡುಹೋಮಾ ಅವರನ್ನು ವಿಧಾನಸಭೆ ಸ್ಪೀಕರ್ ಲಾಲ್ರಿನ್ಲಿಯಾನಾ ಸೈಲೊ ಅವರನ್ನು ಅನರ್ಹಗೊಳಿಸಿದ್ದಾರೆ.
ರಾಜಕೀಯ ಪಕ್ಷದ ಜೋರಾಮ್ ಪೀಪಲ್ಸ್ ಮೂವ್‌ಮೆಂಟ್(ಝಡ್‌ಪಿಎಂ)ನ ಪ್ರತಿನಿಧಿಯಾಗಿ ತಮ್ಮನ್ನು ತಾವು ಘೋಷಿಸಿಕೊಂಡಿದ್ದರಿಂದ 71 ವರ್ಷದ ಅವರನ್ನು ಶಾಸಕರಾಗಿ ಅನರ್ಹಗೊಳಿಸಲಾಯಿತು. 2018ರ ಚುನಾವಣೆಯಲ್ಲಿ ಲಾಲ್ಡುಹೋಮಾ ಸರ್ಚಿಪ್ ಕ್ಷೇತ್ರದಿಂದ ಸ್ವತಂತ್ರರಾಗಿ ಗೆಲುವು ಸಾಧಿಸಿದ್ದರು.
ಸ್ವತಂತ್ರ ಶಾಸಕರಾಗಿ ಆಯ್ಕೆಯಾಗಿದ್ದರೂ ಅವರು ಝಡ್ ಪಿಎಂ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದರಿಂದ ಅವರು ಶಾಸಕ ಸ್ಥಾನವನ್ನು ಕಳೆದುಕೊಂಡರು ಎಂದು ಸ್ಪೀಕರ್ ಹೇಳಿದರು.
ವಿಶೇಷವೆಂದರೆ, ಲಾಲ್ಡುಹೋಮಾ 32 ವರ್ಷಗಳ ಹಿಂದೆ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದಾಗ ಇದೇ ರೀತಿ ಘಟನೆ ನಡೆದಿತ್ತು. ಐಪಿಎಸ್ ಅಧಿಕಾರಿಯಾಗಿದ್ದ ಲಾಲ್ಡುಹೋಮಾ ಅವರು 1988ರಲ್ಲಿ ತನ್ನ ಮಾತೃ ಪಕ್ಷ ಕಾಂಗ್ರೆಸ್(ಐ) ಸದಸ್ಯತ್ವವನ್ನು ತ್ಯಜಿಸಿದ್ದಕ್ಕಾಗಿ ಅನರ್ಹಗೊಳಿಸಲಾಯಿತು. ಸಂಸದರಾಗಿ ಮತ್ತು ಶಾಸಕರಾಗಿ ಅನರ್ಹತೆಯನ್ನು ಅನುಭವಿಸಿದ ಏಕೈಕ ರಾಜಕಾರಣಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


