ದೇಶಗಳ ಸಾಮೂಹಿಕ ಪ್ರಯತ್ನದಿಂದ ಕೋವಿಡ್-19 ಸಮಸ್ಯೆಗಳಿಂದ ಹೊರಬರಬಹುದು: ಪ್ರಧಾನಿ ನರೇಂದ್ರ ಮೋದಿ
ಈಗಷ್ಟೇ ಜಿ20 ರಾಷ್ಟ್ರಗಳ ನಾಯಕರೊಂದಿಗೆ ಫಲಪ್ರದ ಮಾತುಕತೆ ನಡೆಸಿದ್ದೇನೆ. ಕೋವಿಡ್-19 ನಂತರ ಉಂಟಾಗಿರುವ ಆರ್ಥಿಕ ಕುಸಿತದಿಂದ ಹೊರಬರಲು ವಿಶ್ವದ ಬೃಹತ್ ಆರ್ಥಿಕ ರಾಷ್ಟ್ರಗಳು ಸಾಮೂಹಿಕ ಪ್ರಯತ್ನ ನಡೆಸಿದರೆ ಖಂಡಿತಾ ಸಾಧ್ಯವಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ನವದೆಹಲಿ: ಈಗಷ್ಟೇ ಜಿ20 ರಾಷ್ಟ್ರಗಳ ನಾಯಕರೊಂದಿಗೆ ಫಲಪ್ರದ ಮಾತುಕತೆ ನಡೆಸಿದ್ದೇನೆ. ಕೋವಿಡ್-19 ನಂತರ ಉಂಟಾಗಿರುವ ಆರ್ಥಿಕ ಕುಸಿತದಿಂದ ಹೊರಬರಲು ವಿಶ್ವದ ಬೃಹತ್ ಆರ್ಥಿಕ ರಾಷ್ಟ್ರಗಳು ಸಾಮೂಹಿಕ ಪ್ರಯತ್ನ ನಡೆಸಿದರೆ ಖಂಡಿತಾ ಸಾಧ್ಯವಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಸೌದಿ ಅರೇಬಿಯಾ ಆಯೋಜಿಸಿದ್ದ ಜಿ20 ವರ್ಚುವಲ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಜಿ 20 ಶೃಂಗಸಭೆ ಸುಗಮವಾಗಿ ಸಾಗಲು ನಾವು ಡಿಜಿಟಲ್ ಸೌಲಭ್ಯವನ್ನು ಭಾರತದ ಐಟಿ ತಂತ್ರಜ್ಞಾನಗಳ ಮೂಲಕ ಒದಗಿಸಿದ್ದೇವೆ. ಕೋವಿಡ್-19 ಸಾಂಕ್ರಾಮಿಕ ಸಂಕಷ್ಟದಿಂದ ಹೊರಬರಲು ಆತ್ಮವಿಶ್ವಾಸದಿಂದ ಸಾಮೂಹಿಕ ಪ್ರಯತ್ನ ನಡೆಸಬೇಕು. ಇದರಿಂದ ನಮ್ಮ ಸಮಾಜಕ್ಕೆ ಕೂಡ ಸ್ಫೂರ್ತಿ ದೊರಕುತ್ತದೆ. ಭೂಮಿಯ ಮೇಲೆ ಬಲವಾದ ನಂಬಿಕೆ ಆರೋಗ್ಯಕರ ಮತ್ತು ಸುಖಜೀವನ ನಡೆಸಲು ಸಾಧ್ಯವಿದೆ ಎಂದಿದ್ದಾರೆ.
ಬಹು ಕೌಶಲ್ಯ ಮತ್ತು ಮರು ಕೌಶಲ್ಯ ಪ್ರತಿಭೆಯನ್ನು ಬೆಳೆಸಿ ಮನುಷ್ಯನಲ್ಲಿ ಘನತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ. ಹೊಸ ತಂತ್ರಜ್ಞಾನಗಳು ಮನುಷ್ಯನಿಗೆ ನೆರವಾಗಬೇಕು. ಆಗ ಮಾತ್ರ ಉಪಯೋಗವಾಗುತ್ತದೆ ಎಂದರು.
ಜಿ20 ಶೃಂಗಸಭೆಯ ಆಯೋಜನೆ ಹೊಂದಿದ್ದ ಸೌದಿ ಅರೇಬಿಯಾ ದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ತಮ್ಮ ಆರಂಭಿಕ ಮಾತುಗಳಲ್ಲಿ, ಕೋವಿಡ್-19 ವಿರುದ್ಧ ಹೋರಾಡಲು ಸುಲಭವಾಗಿ ಕೈಗೆಟಕುವ ದರದಲ್ಲಿ ಲಸಿಕೆಗಳು ಸೇರಿದಂತೆ ಔಷಧಗಳು ಸಿಗುವಂತಾಗಬೇಕು.
ಕೋವಿಡ್ -19 ಗಾಗಿ ಲಸಿಕೆಗಳು, ಚಿಕಿತ್ಸಕ ಮತ್ತು ರೋಗನಿರ್ಣಯ ಸಾಧನಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಗತಿಯ ಬಗ್ಗೆ ನಾವು ಆಶಾವಾದಿಗಳಾಗಿದ್ದರೂ, ಎಲ್ಲಾ ಜನರಿಗೆ ಈ ಸಾಧನಗಳು ಕೈಗೆಟುಕುವ ದರದಲ್ಲಿ ಸಿಗುವಂತಾಗಬೇಕು ಎಂದು ಆಶಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


