ದೇಶದೇಶಗಳ ಸಾಮೂಹಿಕ ಪ್ರಯತ್ನದಿಂದ ಕೋವಿಡ್-19 ಸಮಸ್ಯೆಗಳಿಂದ ಹೊರಬರಬಹುದು: ಪ್ರಧಾನಿ ನರೇಂದ್ರ ಮೋದಿ
ಈಗಷ್ಟೇ ಜಿ20 ರಾಷ್ಟ್ರಗಳ ನಾಯಕರೊಂದಿಗೆ ಫಲಪ್ರದ ಮಾತುಕತೆ ನಡೆಸಿದ್ದೇನೆ. ಕೋವಿಡ್-19 ನಂತರ ಉಂಟಾಗಿರುವ ಆರ್ಥಿಕ ಕುಸಿತದಿಂದ ಹೊರಬರಲು ವಿಶ್ವದ ಬೃಹತ್ ಆರ್ಥಿಕ ರಾಷ್ಟ್ರಗಳು ಸಾಮೂಹಿಕ ಪ್ರಯತ್ನ ನಡೆಸಿದರೆ ಖಂಡಿತಾ ಸಾಧ್ಯವಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.