ಚಳಿಗಾಲ ಹಿನ್ನೆಲೆ: ಬಾಗಿಲು ಮುಚ್ಚಿದ ಕೇದಾರನಾಥ ದೇವಾಲಯ
ಚಳಿಗಾಲ ಹಿನ್ನೆಲೆಯಲ್ಲಿ ಹಿಮಪಾತದ ಕಾರಣ ಹಿಮಾಲಯ ತಪ್ಪಲಿನಲ್ಲಿರುವ ಪವಿತ್ರ ಕೇದಾರನಾಥ ದೇವಾಲಯದ ಬಾಗಿಲು ಮುಚ್ಚಲಾಗಿದೆ.

ಗೋಪೇಶ್ವರ್: ಚಳಿಗಾಲ ಹಿನ್ನೆಲೆಯಲ್ಲಿ ಹಿಮಪಾತದ ಕಾರಣ ಹಿಮಾಲಯ ತಪ್ಪಲಿನಲ್ಲಿರುವ ಪವಿತ್ರ ಕೇದಾರನಾಥ ದೇವಾಲಯದ ಬಾಗಿಲು ಮುಚ್ಚಲಾಗಿದೆ.
11 ಜ್ಯೋತಿರ್ಲಿಂಗಗಳುಳ್ಳ ಶಿವನ ದೇವಾಲಯವನ್ನು ಸೋಮವಾರ ಬೆಳಗ್ಗೆ 8.30 ಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದೇವಾಲಯದ ಗೇಟ್ ಗಳನ್ನು ಮುಚ್ಚಲಾಯಿತು.
ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಈ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು.
ಹಿಮಾಲಯದ ದೇವಸ್ಥಾನಗಳಾದ ಕೇದಾರನಾಥ, ಬದ್ರೀನಾಥ, ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳನ್ನು ಪ್ರತಿವರ್ಷ ಚಳಿಗಾಲದಲ್ಲಿ ಮುಚ್ಚಲಾಗುತ್ತದೆ. ಚಳಿಗಾಲದಲ್ಲಿ ಈ ಪ್ರದೇಶಗಳಲ್ಲಿ ಅತಿಯಾದ ಹಿಮ ಸುರಿಯುತ್ತದೆ. ಹೀಗಾಗಿ, ದೇವಾಲಯ ಹಿಮಾವೃತವಾಗಲಿದೆ. ಅಲ್ಲದೆ, ಅಲ್ಲಿಗೆ ತೆರಳುವುದು ಕೂಡ ಅಸಾಧ್ಯ. ಏಪ್ರಿಲ್-ಮೇ ತಿಂಗಳ ವೇಳೆಗೆ ಮತ್ತೆ ದೇವಾಲಯಗಳ ಬಾಗಿಲು ತೆರೆಯಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


