Kedarnath temple

ಕೇದಾರನಾಥಕ್ಕೆ ಹೋಗ್ತಿದ್ದೀರಾ? ಹಾಗಾದ್ರೆ ದೇವಸ್ಥಾನದ ಸುತ್ತಮುತ್ತ ಇರುವ ಈ ಅದ್ಭುತ ಜಾಗಗಳನ್ನ ಮಿಸ್ ಮಾಡ್ಬೇಡಿ!
ಹಲವರಿಗೆ ಕೇದಾರನಾಥ ಎಂದರೆ ಕೇವಲ ದೇವರ ದರ್ಶನ ಮತ್ತು ಹಿಮಾಚ್ಛಾದಿತ ಪರ್ವತಗಳ ಸೌಂದರ್ಯ ತಾಣವಾಗಿದೆ. ಆದರೆ ದೇವಾಲಯದಾಚೆಗೂ ಹರಡಿರುವ ಕೇದಾರ ಕಣಿವೆ ಅನೇಕ ಅಪರೂಪದ ಪ್ರಕೃತಿ, ಆಧ್ಯಾತ್ಮಿಕ ಮತ್ತು ಸಾಹಸಮಯ ತಾಣಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ.

ನಾಪತ್ತೆಯಾಗಿದ್ದ 1 ವರ್ಷದ ನಂತರ ಕೇದಾರನಾಥ ದೇವಾಲಯ ಬಳಿ ತೆಲಂಗಾಣ ವ್ಯಕ್ತಿಯ ಅಸ್ಥಿಪಂಜರ ಅವಶೇಷ! ಪತ್ತೆಯಾದದ್ದು ಹೇಗೆ?
ಶವದ ಬಳಿ ಪತ್ತೆಯಾದ ಬ್ಯಾಗ್ನಲ್ಲಿದ್ದ ಫೋನ್ ಮತ್ತು ಗುರುತಿನ ಕಾರ್ಡ್ ಮೂಲಕ ಆ ವ್ಯಕ್ತಿಯನ್ನು ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ರಾಜೇಶ್ವರ ರಾವ್ಪೇಟ್ ಗ್ರಾಮದ ನಿವಾಸಿ ನೋಮುಲಾ ರೋಶ್ವಂತ್ ಎಂದು ಗುರುತಿಸಲಾಗಿದೆ.

ಉತ್ತರಾಖಂಡ: ಕೇದಾರನಾಥದ ರಾಂಬರ-ಗರುಡಚಟ್ಟಿ ಪಾದಚಾರಿ ರಸ್ತೆ ಮರುನಿರ್ಮಾಣಕ್ಕೆ ಪರಿಸರ ಸಚಿವಾಲಯ ಅನುಮೋದನೆ!
2013ರ ಕೇದಾರನಾಥ ದುರಂತದಲ್ಲಿ ನಾಶವಾಗಿದ್ದ ರಾಂಬರ-ಗರುಡಚಟ್ಟಿ ಪಾದಚಾರಿ ರಸ್ತೆಯನ್ನು ಮರುನಿರ್ಮಾಣ ಮಾಡಲು ಅರಣ್ಯ ಭೂಮಿ ಹಸ್ತಾಂತರಕ್ಕೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಅಂತಿಮ ಅನುಮೋದನೆ ನೀಡಿದೆ.

ಕೇದಾರನಾಥ ದೇಗುಲದಲ್ಲಿ ಮೊಬೈಲ್ ಬಳಕೆ, ಛಾಯಾಗ್ರಹಣ, ವಿಡಿಯೋಗ್ರಫಿಗೆ ನಿಷೇಧ
ಕೇದಾರನಾಥ ದೇಗುಲದ ಆವರಣದಲ್ಲಿ ಭಕ್ತರು ಛಾಯಾಚಿತ್ರ ತೆಗೆಯುವುದು ಮತ್ತು ವಿಡಿಯೋ ಮಾಡುವುದನ್ನು ನಿಷೇಧಿಸಲಾಗಿದೆ. ಇತ್ತೀಚೆಗೆ ಮಹಿಳಾ ಬ್ಲಾಗರ್ ಒಬ್ಬರು ದೇವಸ್ಥಾನದ ಮುಂದೆ ತನ್ನ ಗೆಳೆಯನಿಗೆ ಪ್ರಪೋಸ್ ಮಾಡಿದ ವಿಡಿಯೋ ವೈರಲ್ ಆದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಕೇದಾರನಾಥ್ ಗೆ ಹೆಲಿಕಾಪ್ಟರ್ ಸೇವೆ ಪುನರ್ ಆರಂಭ
ಹೆಲಿಕಾಪ್ಟರ್ ದುರಂತ ಸಂಭವಿಸಿದ ಎರಡು ದಿನಗಳ ಬಳಿಕ ಉತ್ತರಾಖಂಡ್ ನ ಪ್ರಸಿದ್ಧ ಯಾತ್ರಾ ಸ್ಥಳ ಕೇದಾರನಾಥ್ ದೇವಾಲಯಕ್ಕೆ ಹೆಲಿಕಾಪ್ಟರ್ ಸೇವೆ ಪುನರ್ ಆರಂಭವಾಗಿದೆ. ಮಂಗಳವಾರ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಪೈಲಟ್ ಹಾಗೂ ಆರು ಮಂದಿ ಭಕ್ತರು ಸಾವನ್ನಪ್ಪಿದ್ದರು.

ಕೇದಾರನಾಥ ದೇವಸ್ಥಾನ ಗರ್ಭಗುಡಿಯಲ್ಲಿ ಪ್ರಧಾನಿ ಮೋದಿ ಪೂಜೆ-ಪ್ರಾರ್ಥನೆಯ ನೇರ ಪ್ರಸಾರ: ವಿರೋಧ ಪಕ್ಷಗಳ ನಾಯಕರ ಅಪಸ್ವರ
ಕೇದಾರನಾಥ ದೇವಸ್ಥಾನದ ಗರ್ಭಗುಡಿಯಲ್ಲಿ ಪೂಜೆ ಸಂಪ್ರದಾಯಗಳನ್ನು ನೆರವೇರಿಸುವಾಗ ಅದನ್ನು ನೇರಪ್ರಸಾರ ಮಾಡುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಂಪ್ರದಾಯವನ್ನು ಮುರಿದಿದ್ದಾರೆ ಎಂದು ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ಟೀಕೆ ಮಾಡಿವೆ.

ಕೇದಾರನಾಥ ಧಾಮದ ಬಾಗಿಲು ಚಳಿಗಾಲದವರೆಗೂ ಬಂದ್
ಚಾರ್ ಧಾಮ್ಗಳಲ್ಲಿ ಒಂದಾದ ಪ್ರಸಿದ್ಧ 11 ನೇ ಜ್ಯೋತಿರ್ಲಿಂಗ ಭಗವಾನ್ ಕೇದಾರನಾಥ ದೇವಾಲಯದ ಬಾಗಿಲುಗಳನ್ನು ಶನಿವಾರದಂದು ಇಡೀ ಚಳಿಗಾಲದವರೆಗೆ ಸೇನೆಯ ಬ್ಯಾಂಡ್ವ್ಯಾಗನ್ನ ಭಕ್ತಿ ರಾಗಗಳ ನಡುವೆ ಮುಚ್ಚಲಾಯಿತು.

ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬಾಗಿಲು ತೆರೆದ ಕೇದಾರನಾಥ ದೇವಾಲಯ: ಕೋವಿಡ್ ನಿಂದ ಯಾತ್ರಿಕರ ಭೇಟಿ ರದ್ದು
ಹಿಂದೂ ಧರ್ಮೀಯರ ಪವಿತ್ರ ಯಾತ್ರಾ ಸ್ಥಳ ಉತ್ತರಾಖಂಡದ ಕೇದಾರನಾಥ ದೇವಾಲಯ ಸೋಮವಾರ ತೆರೆದಿದೆ, ಸಂಪ್ರದಾಯಬದ್ಧವಾಗಿ ಧಾರ್ಮಿಕ ವಿಧಿವಿಧಾನಗಳನ್ನು ಕೋವಿಡ್-19 ಶಿಷ್ಟಾಚಾರಗಳ ಮಧ್ಯೆ ನಡೆಸಲಾಯಿತು.

ಚಳಿಗಾಲ ಹಿನ್ನೆಲೆ: ಬಾಗಿಲು ಮುಚ್ಚಿದ ಕೇದಾರನಾಥ ದೇವಾಲಯ
ಚಳಿಗಾಲ ಹಿನ್ನೆಲೆಯಲ್ಲಿ ಹಿಮಪಾತದ ಕಾರಣ ಹಿಮಾಲಯ ತಪ್ಪಲಿನಲ್ಲಿರುವ ಪವಿತ್ರ ಕೇದಾರನಾಥ ದೇವಾಲಯದ ಬಾಗಿಲು ಮುಚ್ಚಲಾಗಿದೆ.

