ದೇಶ

ಗಡಿಯಲ್ಲಿ ದೀಪಾವಳಿ ಹಬ್ಬ ಆಚರಿಸಿದ ವೀರ ಯೋಧರು

ಗಡಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೇಶದ ವೀರ ಯೋಧರು ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಣೆ ಮಾಡಿದ್ದಾರೆ.

ಗಡಿಯಲ್ಲಿ ದೀಪಾವಳಿ ಹಬ್ಬ ಆಚರಿಸಿದ ವೀರ ಯೋಧರು
ಪಟಾಕಿ ಸಿಡಿಸಿ ದೀಪಾವಳಿ ಆಚರಿಸಿದ ಭಾರತೀಯ ಸೇನಾಪಡೆ
Published On :

ಜಮ್ಮು: ಗಡಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೇಶದ ವೀರ ಯೋಧರು ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಣೆ ಮಾಡಿದ್ದಾರೆ. 

ಕುಟುಂಬದಿಂದ ದೂರ ಉಳಿದು ದೇಶಕ್ಕಾಗಿ ಹಗಲಿರುಳು ಭಾರತೀಯ ಸೇನಾಪಡೆಯ ಯೋಧರು ಸೇವೆ ಸಲ್ಲಿಸುತ್ತಿದ್ದಾರೆ.  ಜಮ್ಮುವಿನ ಆರ್'ಎಸ್.ಪುರದ ಗಡಿಯಲ್ಲಿ ಮುಂಬತ್ತಿಗಳನ್ನು ಹಚ್ಚಿದ ಯೋಧರು, ಪಟಾಕಿಗಳನ್ನು ಸಿಡಿಸಿ ಯೋಧರು ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. 

ನಮಗೆ ಎರಡು ಕುಟುಂಬಗಳಿವೆ. ಅದರಲ್ಲಿ ಒಂದು ಭಾರತೀಯ ಸೇನೆ. ನಾವು ಇಂದು ನಮ್ಮ ಮನೆಯಲ್ಲಿಯೇ ದೀಪಾವಳಿಯನ್ನು ಆಚರಿಸುತ್ತಿದ್ದೇವೆ. ದೇಶದ ಜನತೆ ನಿರ್ಭೀತಿಯಿಂದ, ಸಂಭ್ರಮ, ಸಂತೋಷದಿಂದ ಆಚರಣೆ ಮಾಡುವಂತೆ ನಾವು ನೋಡಿಕೊಳ್ಲುತ್ತೇವೆಂದು ಯೋಧರು ತಿಳಿಸಿದ್ದಾರೆ. 

ತ್ರಿಪುರದಲ್ಲಿ ದೀಪಾವಳಿಯ ಮುನ್ನಾದಿನದಂದು ಅಖೌರಾ-ಅಗರ್ತಲಾ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ ಬಳಿ ಬಿಎಸ್‌ಎಫ್ ಯೋಧರು ಮತ್ತು ಬಾಂಗ್ಲಾದೇಶ ಗಡಿ ಸಿಬ್ಬಂದಿಗಳು (ಬಿಜಿಬಿ) ಮೇಣದಬತ್ತಿಗಳನ್ನು ಬೆಳಗಿಸಿದರು. ಈ ಸಂದರ್ಭದಲ್ಲಿ ಬಿಎಸ್‌ಎಫ್ ಯೋಧರು ಬಾಂಗ್ಲಾದೇಶದ ಪಡೆಗಳಿಗೆ ಸಿಹಿತಿಂಡಿ ಹಾಗೂ ಉಡುಗೊರೆಯಾಗಿ ನೀಡಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.