ಈವರೆಗೂ ಕೇಳಿಯೇ ಇರದ ಇಂಗ್ಲಿಷ್ ಪದಗಳನ್ನು ಹೇಳಿದ 10 ನೇ ತರಗತಿ ಬಾಲಕಿ: ಶಶಿ ತರೂರ್ ನಿಬ್ಬೆರಗು!
ಶಶಿ ತರೂರ್ ಇಂಗ್ಲೀಷ್ ಮಾತನಾಡುತ್ತಿದ್ದಾರೆ ಎಂದರೆ ಪಕ್ಕದಲ್ಲಿ ಆಂಗ್ಲ ನಿಘಂಟು ಇಟ್ಟುಕೊಂಡು ಅರ್ಥ ಮಾಡಿಕೊಳ್ಳಬೇಕೆಂಬುದು ಜನಜನಿತ, ಆದರೆ ಅಂತಹ ಶಶಿ ತರೂರ್ ಅವರೂ ಇಂಗ್ಲಿಷ್ ನಿಘಂಟು ಪಕ್ಕದಲ್ಲಿಟ್ಟುಕೊಂಡು ಅರ್ಥ ಮಾಡಿಕೊಳ್ಳುವಂತಾದರೆ?

ತಿರುವನಂತಪುರಂ: ಶಶಿ ತರೂರ್ ಇಂಗ್ಲೀಷ್ ಮಾತನಾಡುತ್ತಿದ್ದಾರೆ ಎಂದರೆ ಪಕ್ಕದಲ್ಲಿ ಆಂಗ್ಲ ನಿಘಂಟು ಇಟ್ಟುಕೊಂಡು ಅರ್ಥ ಮಾಡಿಕೊಳ್ಳಬೇಕೆಂಬುದು ಜನಜನಿತ, ಆದರೆ ಅಂತಹ ಶಶಿ ತರೂರ್ ಅವರೂ ಇಂಗ್ಲಿಷ್ ನಿಘಂಟು ಪಕ್ಕದಲ್ಲಿಟ್ಟುಕೊಂಡು ಅರ್ಥ ಮಾಡಿಕೊಳ್ಳುವಂತಾದರೆ?
ಹೀಗೆ ಮಾಡಿದ್ದು ಯಾರು ಅಂತೀರಾ? ಕೇರಳದ 10 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಶಶಿ ತರೂರ್ ಗೆ ಕೇಳರಿಯದ ಇಂಗ್ಲಿಷ್ ಶಬ್ದಗಳನ್ನು ಪರಿಚಯಿಸಿದ್ದಾಳೆ.
ಇಡುಕ್ಕಿಯ 10 ನೇ ತರಗತಿಯ ದಿಯಾ ಶಶಿ ತರೂರ್ ಗೆ ಅಪರೂಪದ ಇಂಗ್ಲೀಷ್ ಪದಗಳನ್ನು ಪರಿಚಯಿಸಿದ್ದಾರೆ. ಇದನ್ನು ಕಂಡ ಶಶಿ ತರೂರ್ ನಿಬ್ಬೆರಗಾಗಿದ್ದಾರೆ.
ಕ್ಲಬ್ ಎಫ್ಎಂ ಶೋ ನಲ್ಲಿ ಆರ್ ಜೆ ರಫಿ ಅವರ ಕಾರ್ಯಕ್ರಮದಲ್ಲಿ ದಿಯಾ ಮಾತನಾಡುತ್ತಿದ್ದರು. ಈ ವೇಳೆ ಶಶಿ ತರೂರ್ ಅಚ್ಚರಿಯ ಎಂಟ್ರಿ ನೀಡಿದ್ದಾರೆ. ಈ ಹಿಂದೆ ಶಶಿ ತರೂರ್ ಗೆ ಮೆಸೇಜ್ ಮಾಡಿದ್ದ ದಿಯಾ, ಸೂಪರ್ ಲಾಂಗ್ ಶಬ್ದವನ್ನು ಉಚ್ಚರಿಸುವಂತೆ ಹೇಳಿದ್ದರು.
ತಮಗೆ ಹೊಸ ಇಂಗ್ಲೀಷ್ ಶಬ್ದಗಳನ್ನು ಪರಿಚಯಿಸಿದ ದಿಯಾ ಬಗ್ಗೆ ಟ್ವೀಟರ್ ನಲ್ಲಿ ಶಶಿ ತರೂರ್ ಹಂಚಿಕೊಂಡಿದ್ದು, ನಾನು ಈ ಹಿಂದೆಂದೂ ಕೇಳರಿಯದ ಶಬ್ದಗಳನ್ನು 10 ನೇ ತರಗತಿಯ ದಿನಾ ಪರಿಚಯಿಸಿದ್ದಾರೆ. ಅವರಿಗೆ ಶುಭ ಹಾರೈಕೆಗಳು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


