ಮಹಾರಾಷ್ಟ್ರದಲ್ಲಿ ಕರ್ನಾಟಕ ಮೂಲದ ಸ್ವಾಮೀಜಿ ಬರ್ಬರ ಹತ್ಯೆ!
ಕರ್ನಾಟಕ ಮೂಲದ ಸ್ವಾಮೀಜಿಯೊಬ್ಬರು ಮಹಾರಾಷ್ಟ್ರದಲ್ಲಿ ಕಳ್ಳರಿಂದ ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ.

ನಾಂದೇಡ್: ಕರ್ನಾಟಕ ಮೂಲದ ಸ್ವಾಮೀಜಿಯೊಬ್ಬರು ಮಹಾರಾಷ್ಟ್ರದಲ್ಲಿ ಕಳ್ಳರಿಂದ ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ.
ಮಠದಲ್ಲಿ ಕಳ್ಳತನಕ್ಕೆ ಬಂದ ಕಳ್ಳರು ಪೀಠಾಧಿಪತಿಯ ಹತ್ಯೆಮಾಡಿ ನಂತರ ಮಠದಲ್ಲಿ ಕೆಲಸಮಾಡುತ್ತಿದ್ದ ಮತ್ತೋರ್ವ 50 ವ್ಯಕ್ತಿಯನ್ನ ಸಹ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಹತ್ತೆಯಾದ ಶ್ರೀಗಳು ಗಣಿನಾಡು ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ನಂದೀಪುರ ಗ್ರಾಮದ ದೊಡ್ಡಬಸವೇಶ್ವರ ಮಠದ ಚರಂತಪ್ಪಜ್ಜನವರ ಮಗ ರುದ್ರಪಶುಪತಿ ಶಿವಾಚಾರ್ಯ ಶ್ರೀಗಳೇ ಹತ್ಯೆಗೀಡಾದ ಸ್ವಾಮೀಜಿಗಳು.
ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ಉಮರಿ ತಾಲೂಕಿನ ನಾಗಠಾಣದ ನಿರ್ವಾಣಿ ಮಠದ ಪೀಠಾಧಿಯಾಗಿದ್ದ ಶ್ರೀಗಳು ಹಲವು ವರ್ಷಗಳಿಂದ ಅಲ್ಲೇ ವಾಸವಾಗಿದ್ರು, ನಾಗಠಾಣದ ನಿರ್ವಾಣಿ ಮಠ ಉಜ್ಜಯಿನಿ ಪೀಠದ ಶಾಖಾ ಮಠವಾಗಿದ್ದರಿಂದ ಮಹಾರಾಷ್ಟ್ರದಲ್ಲಿ ದೊಡ್ಡ ಭಕ್ತ ಸಮೂಹವನ್ನ ಹೊಂದಿದ್ರು ಶ್ರೀಗಳು, ನಿನ್ನೆ ತಡರಾತ್ರಿ ಬಂದ ಕಳ್ಳರ ಗುಂಪು ಶ್ರೀಗಳನ್ನ ಹತ್ಯೆಮಾಡಿ ನಂತರ ಮಠದಲ್ಲಿಕೆಲಸಮಾಡುತಿದ್ದ ಕೆಲಸಗಾರನನ್ನ ಸಹ ಕೊಲೆಮಾಡಿ ಪರಾರಿಯಾಗಿದ್ದಾರೆ.
ಇಂದು ಬೆಳಗ್ಗೆ ವಿಷಯ ಬಹಿರಂಗವಾಗಿದ್ದು ರುದ್ರಪಶುಪತಿ ಶ್ರೀಗಳ ಸಹೋದರರಾದ ನಂದಿಪುರ ಮಠದ ಮಹೇಶ್ವರ ಮಹಾಸ್ವಾಮಿಗಳು ಇಂದು ಮಹಾರಾಷ್ಟ್ರಕ್ಕೆ ತೆರಳಿದ್ದಾರೆ. ಸದ್ಯಕ್ಕೆ ಶ್ರೀಗಳ ಕೊಲೆ ಹಲವು ಹನುಮಾನ್ನ ಮೂಡಿಸಿದ್ದು ತನಿಖೆಯ ನಂತರ ಎಲ್ಲವೂ ಬಯಲಾಗಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


