ದೇಶ

ಮಧ್ಯ ಪ್ರದೇಶ: ಬಿಸಿ ಚಪಾತಿ ಕೊಡಲಿಲ್ಲವೆಂದು ಅತ್ತೆಯನ್ನು ಹೊಡೆದು ಸಾಯಿಸಿದ ಅಳಿಯ!

ಬಿಸಿ ಚಪಾತಿ ನೀಡಲಿಲ್ಲವೆಂದು ಅತ್ತೆಯನ್ನು ಅಳಿಯ ಹೊಡೆದು ಸಾಯಿಸಿರುವ ಘಟನೆ ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ.

ಮಧ್ಯ ಪ್ರದೇಶ: ಬಿಸಿ ಚಪಾತಿ ಕೊಡಲಿಲ್ಲವೆಂದು ಅತ್ತೆಯನ್ನು ಹೊಡೆದು ಸಾಯಿಸಿದ ಅಳಿಯ!
ಮಧ್ಯಪ್ರದೇಶ: ಬಿಸಿ ಚಪಾತಿ ನೀಡಲಿಲ್ಲವೆಂದು ಅತ್ತೆಯನ್ನು ಹೊಡೆದು ಸಾಯಿಸಿದ ಅಳಿಯ!
Published On :

ಖಂದ್ವ: ಬಿಸಿ ಚಪಾತಿ ನೀಡಲಿಲ್ಲವೆಂದು ಅತ್ತೆಯನ್ನು ಅಳಿಯ ಹೊಡೆದು ಸಾಯಿಸಿರುವ ಘಟನೆ ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ. 

35 ವರ್ಷದ ವ್ಯಕ್ತಿ ಘಟನೆಯ ನಂತರ ಸ್ಥಳದಿಂದ ಪರಾರಿಯಾಗಿದ್ದ. ಆರೋಪಿ ಸುರೇಶ್, ಖಂದ್ವ ಜಿಲ್ಲೆಯ ಬಿಲ್ಲೋರ ಗ್ರಾಮದಲ್ಲಿ ಅತ್ತೆ ಮಾವನೊಂದಿಗೆ ವಾಸಿಸುತ್ತಿದ್ದ ಎಂದು ಪೊಲೀಸ್ ಠಾಣಾಧಿಕಾರಿ ಜಗದೀಶ್ ಪಾಟೀದಾರ್ ಹೇಳಿದ್ದಾರೆ. ಮಧ್ಯರಾತ್ರಿ ವೇಳೆ ಮನೆಗೆ ಆಗಮಿಸಿದ್ದ ಆರೋಪಿಗೆ ಆತನ ಅತ್ತೆ ಗುಜರ್ ಬಾಯಿ (55) ಊಟ ಬಡಿಸಿದ್ದರು.

ಆದರೆ ಆರೋಪಿ ಬಿಸಿ ಚಪಾತಿ ಕೇಳಿದ್ದ, ಇದಕ್ಕೆ ಒಪ್ಪದ ಅತ್ತೆಯ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಆಕೆ ಸಾವನ್ನಪ್ಪಿದ್ದಾರೆ.  ಉಳಿದ ಕುಟುಂಬ ಸದಸ್ಯರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಆರೋಪಿಯ ಮಾವ ಪೊಲೀಸರಿಗೆ ದೂರು ನೀಡಿದ್ದಾರೆ. ಮಂಗಳವಾರ ರಾತ್ರಿ ಆರೋಪಿ ಸುರೇಶ್ ನ್ನು ಪೊಲೀಸರು ಬಂಧಿಸಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.