ಯೆಸ್ ಬ್ಯಾಂಕ್ ಪ್ರಕರಣ: ಉದ್ಯಮಿಗಳಾದ ವಾಧವನ್ ಸಹೋದರರು ಮೇ 10ರ ವರೆಗೆ ಸಿಬಿಐ ವಶಕ್ಕೆ
ಲಾಕ್ಡೌನ್ ಸಮಯದಲ್ಲಿ ಕುಟುಂಬ ಸಮೇತ ಪಾರ್ಟಿ ಮಾಡಲು ತೆರಳಿ ಬಂಧನಕ್ಕೀಡಾಗಿದ್ದ ಡಿಹೆಚ್ಎಫ್ಎಲ್ ಮುಖ್ಯಸ್ಥರಾದ ಕಪಿಲ್ ಹಾಗೂ ಧೀರಜ್ ವಾಧವನ್ ಅವರನ್ನು ಯೆಸ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಮೇ 10ರವರೆಗೆ ಸಿಬಿಐ ವಶಕ್ಕೆ ನೀಡಿದೆ.

ನವದೆಹಲಿ: ಲಾಕ್ಡೌನ್ ಸಮಯದಲ್ಲಿ ಕುಟುಂಬ ಸಮೇತ ಪಾರ್ಟಿ ಮಾಡಲು ತೆರಳಿ ಬಂಧನಕ್ಕೀಡಾಗಿದ್ದ ಡಿಹೆಚ್ಎಫ್ಎಲ್ ಮುಖ್ಯಸ್ಥರಾದ ಕಪಿಲ್ ಹಾಗೂ ಧೀರಜ್ ವಾಧವನ್ ಅವರನ್ನು ಯೆಸ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಮೇ 10ರವರೆಗೆ ಸಿಬಿಐ ವಶಕ್ಕೆ ನೀಡಿದೆ.
ಲಾಕ್ಡೌನ್ ಉಲ್ಲಂಘಿಸಿ ಪಾರ್ಟಿ ಮಾಡಲು ಮುಂಬೈನಿಂದ ಮಹಾಬಲೇಶ್ವರ್ದಲ್ಲಿರುವ ತಮ್ಮ ಫಾರ್ಮ್ಹೌಸ್ಗೆ ಬಂದಿದ್ದ ವಾಧವನ್ ಸಹೋದರರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ವಿಚಾರಣೆ ಮುಗಿದಿದ್ದರಿಂದ ಸಿಬಿಐ ಅಧಿಕಾರಿಗಳು ವಾಧವನ್ ಸಹೋದರರನ್ನು ವಶಕ್ಕೆ ಪಡೆದು ಮಹಾಬಲೇಶ್ವರ್ದಿಂದ ಮುಂಬೈಗೆ ಕರೆತಂದಿದ್ದರು.
ಇದೀಗ ಇಬ್ಬರೂ ಸಹೋದರರನ್ನು ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ ಮೇ 10ರವರೆಗೆ ಇಬ್ಬರೂ ಸಹೋದರರನ್ನು ಸಿಬಿಐ ಅಧಿಕಾರಿಗಳ ವಶಕ್ಕೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


