ತನ್ನ ಅಧೀನ ಕಚೇರಿಗಳಿಗೆ ಭೇಟಿ ನೀಡದಂತೆ ಜನರಿಗೆ ನೌಕರರ ಭವಿಷ್ಯನಿಧಿ ಸಂಸ್ಥೆ ಮನವಿ
ಕೊರೋನಾ ವೈರಸ್‌ನ ಹರಡುವಿಕೆ ತಡೆಯುವ ದೃಷ್ಟಿಯಿಂದ ತನ್ನ ಅಧೀನದ ಕಚೇರಿಗಳಿಗೆ ಭೇಟಿ ನೀಡದಂತೆ ಜನರಿಗೆ ಮನವಿ ಮಾಡಿರುವ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ), ಪರ್ಯಾಯ ಡಿಜಿಟಲ್ ವ್ಯವಸ್ಥೆಗಳನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದೆ.

ನವದೆಹಲಿ: ಕೊರೋನಾ ವೈರಸ್‌ನ ಹರಡುವಿಕೆ ತಡೆಯುವ ದೃಷ್ಟಿಯಿಂದ ತನ್ನ ಅಧೀನದ ಕಚೇರಿಗಳಿಗೆ ಭೇಟಿ ನೀಡದಂತೆ ಜನರಿಗೆ ಮನವಿ ಮಾಡಿರುವ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ), ಪರ್ಯಾಯ ಡಿಜಿಟಲ್ ವ್ಯವಸ್ಥೆಗಳನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದೆ.
ಜನರು ದೂರವಾಣಿ ಸಂಖ್ಯೆ 011-27371136 ಮೂಲಕ ವಿಚಾರಣೆ ನಡೆಸಬಹುದಾಗಿದೆ. ಅಲ್ಲದೆ, ಕುಂದುಕೊರತೆಗಳ ಪರಿಹಾರಕ್ಕೆ ಇ-ಮೇಲ್ ವಿಳಾಸ ro.delhicentral@epfindia gov.in ಅನ್ನೂ ಸಂಪರ್ಕಿಸಬಹುದು ಎಂದು ದೆಹಲಿ ಇಪಿಎಫ್‌ಒ (ಕೇಂದ್ರ) ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಅಲೋಕ್ ಯಾದವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಧೀನದಲ್ಲಿರುವ ಇಪಿಎಫ್‌ಒ, ವಾಟ್ಸಪ್ ಸಂದೇಶಗಳಿಗಾಗಿ 8595520478 ಸಂಖ್ಯೆಯನ್ನು ಸಹ ಒದಗಿಸಿದೆ.
ಎಲ್ಲಾ ಇಪಿಎಫ್‌ಒ ಕಚೇರಿಗಳಲ್ಲಿ ಸ್ಯಾನಿಟೈಸರ್ ಮತ್ತು ಮುಖಗವಸುಗಳು ಲಭ್ಯವಿವೆ ಎಂದು ಹೇಳಿಕೆ ತಿಳಿಸಿದೆ.
ಕೊರೋನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾರಣಾಂತಿಕ ರೋಗ ತಡೆಗೆ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


