ಸಾಂಕ್ರಾಮಿಕ ರೋಗಕ್ಕೆ ತುತ್ತಾದವರನ್ನು ಸ್ಥಳಾಂತರಿಸಲು ಸ್ವದೇಶಿ ನಿರ್ಮಿತ ಪಾಡ್ ಏರ್ಪಿಟ್ ಐಎಎಫ್ ಗೆ ಸೇರ್ಪಡೆ
ಭಾರತೀಯ ವಾಯುಪಡೆಯು ಸ್ಥಳೀಯ ವಿನ್ಯಾಸದಲ್ಲಿ ತಯಾರಿಸಿದ ಪಾಡ್ ಏರ್ಪಿಟ್ ಅನ್ನು ಅಭಿವೃದ್ದಿಪಡಿಸಿದ್ದು ಈ ವಾಹನ ಮೂಲಕ ಕೋವಿಡ್ ನಂತಹಾ ಸಾಂಕ್ರಾಮಿಕಕ್ಕೆ ತುತ್ತಾದ ರೋಗಿಗಳನ್ನು ದೂರದ ಸ್ಥಳಗಳಿಗೆ ಸ್ಥಳಾಂತರಿಸಲು ಬಳಸಲಾಗುತ್ತದೆ.

ನವದೆಹಲಿ: ಭಾರತೀಯ ವಾಯುಪಡೆಯು ಸ್ಥಳೀಯ ವಿನ್ಯಾಸದಲ್ಲಿ ತಯಾರಿಸಿದ ಪಾಡ್ ಏರ್ಪಿಟ್ ಅನ್ನು ಅಭಿವೃದ್ದಿಪಡಿಸಿದ್ದು ಈ ವಾಹನ ಮೂಲಕ ಕೋವಿಡ್ ನಂತಹಾ ಸಾಂಕ್ರಾಮಿಕಕ್ಕೆ ತುತ್ತಾದ ರೋಗಿಗಳನ್ನು ದೂರದ ಸ್ಥಳಗಳಿಗೆ ಸ್ಥಳಾಂತರಿಸಲು ಬಳಸಲಾಗುತ್ತದೆ.
"ಐಎಎಫ್ ಪ್ರತ್ಯೇಕ ಸಾರಿಗೆಗಾಗಿ (ಏರ್ಪಿಟ್)ವಾಯುಗಾಮಿ ಪಾರುಗಾಣಿಕಾ ವಾಹನ- ಪಾಡ್ಅನ್ನು ವಿನ್ಯಾಸ, ಅಭಿವೃದ್ಧಿಪಡಿಸಿ ಎಂದು ಐಎಎಫ್ ಹೇಳಿಕೆಯಲ್ಲಿ ತಿಳಿಸಿದೆ.ಕೋವಿಡ್ -19 ಏಕಾಏಕಿ ಸಾಂಕ್ರಾಮಿಕ ರೋಗವೆಂದು ಘೋಷಿಸಿದಾಗ, ರೋಗಿಯಿಂದ ಇನ್ನೊಬ್ಬ ವ್ಯಕ್ತಿಗೆ ರೋಗ ಹರಡುವುದನ್ನು ತಡೆಯಲು ಸ್ಥಳಾಂತರಿಸುವ ವ್ಯವಸ್ಥೆಯ ಅವಶ್ಯಕತೆಯಿದೆ ಎಂದು ಅದು ಹೇಳಿದೆ.
ದೇಶೀಯವಾಗಿ ವಿನ್ಯಾಸಗೊಳಿಸಲಾದ ಈ ಪಾಡ್ 60,000 ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ, ಇದು ಆಮದು ಮಾಡಿಕೊಂಡಿರುವ ವ್ಯವಸ್ಥೆಗಳಿಗೆ ಹೋಲಿಸಿದರೆ ತೀರಾ ಕಡಿಮೆ ವೆಚ್ಚದ್ದಾಗಿದೆ.
ಪ್ರತ್ಯೇಕ ವ್ಯವಸ್ಥೆಯು ಸೂಕ್ತ ಸಂಖ್ಯೆಯಏರ್ ಎಕ್ಸ್ ಚೇಂಜ್ ವ್ಯವಸ್ಥೆ, , ವೈದ್ಯಕೀಯ ಮೇಲ್ವಿಚಾರಣಾ ಸಾಧನಗಳ ಒಟ್ಟುಗೂಡಿಸುವಿಕೆ ತೀವ್ರನಿಗಾ ರೋಗಿಗಳಿಗೆ ವೆಂಟಿಲೇಟರ್ ಸಹ ಒಳಗೊಡಿರುವುದಾಗಿ ಐಎಎಫ್ ತಿಳಿಸಿದೆ. ಇದಲ್ಲದೆ, ಚಾಲನಾ ಸಿಬ್ಬಂದಿ ಹಾಗೂ ಫ್ಲೋರ್ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸೋಂಕಿನ ಅಪಾಯವನ್ನು ತಡೆಗಟ್ಟಲು ಪಾಡ್ ಪ್ರತ್ಯೇಕ ಕೋಣೆಯಲ್ಲಿ ಹೆಚ್ಚಿನ ಸ್ಥಿರಋಣಾತ್ಮಕ ಒತ್ತಡವಿರುವಂತೆ ವಿನ್ಯಾಸಗೊಳಿಸಲಾಗಿದೆ."ಎತ್ತರದ ಪ್ರದೇಶ, ಪ್ರತ್ಯೇಕ ಮತ್ತು ದೂರದ ಸ್ಥಳಗಳಿಂದ ಕೋವಿಡ್ ರೀತಿಯಂತಹಾ ಸಾಂಕ್ರಾಮಿಕ ಕಾಯಿಲೆಗಳನ್ನು ಹೊಂದಿರುವ ನಿರ್ಣಾಯಕ ರೋಗಿಗಳನ್ನು ಸ್ಥಳಾಂತರಿಸಲು ಈ ಪಾಡ್ ಅನ್ನು ಬಳಸಲಾಗುತ್ತದೆ" ಎಂದು ಅದು ಹೇಳಿದೆ
ಭಾರತದಲ್ಲಿ ಈವರೆಗೆ 2.56 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ ಮತ್ತು ಸುಮಾರು 7,100 ಜನರು ವೈರಸ್‌ನಿಂದ ಸಾವನ್ನಪ್ಪಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


