ಎಂಪಿ ಕೋಟಾದಲ್ಲಿ 33 ವಲಸಿಗರಿಗೆ ಊರು ತಲುಪಲು ವಿಮಾನ ಟಿಕೆಟ್ ವ್ಯವಸ್ಥೆ ಮಾಡಿದ ಆಮ್ ಆದ್ಮಿಯ ಸಂಜಯ್ ಸಿಂಗ್
ಸಂಸದರ ಕೋಟಾದ ಅಡಿ 34 ವಿಮಾನ ಟಿಕೆಟ್ ಗಳನ್ನು ವಲಸಿಗ ಕಾರ್ಮಿಕರಿಗೆ ಊರು ತಲುಪಲು ಕಾಯ್ದಿರಿಸುವ ವ್ಯವಸ್ಥೆಯನ್ನು ಮಾಡಲು ಆಮ್ ಆದ್ಮಿಯ ಸಂಸದ ಸಂಜಯ್ ಸಿಂಗ್ ಮುಂದಾಗಿದ್ದಾರೆ.

ನವದೆಹಲಿ: ಸಂಸದರ ಕೋಟಾದ ಅಡಿ 34 ವಿಮಾನ ಟಿಕೆಟ್ ಗಳನ್ನು ವಲಸಿಗ ಕಾರ್ಮಿಕರಿಗೆ ಊರು ತಲುಪಲು ಕಾಯ್ದಿರಿಸುವ ವ್ಯವಸ್ಥೆಯನ್ನು ಮಾಡಲು ಆಮ್ ಆದ್ಮಿಯ ಸಂಸದ ಸಂಜಯ್ ಸಿಂಗ್ ಮುಂದಾಗಿದ್ದಾರೆ.
ದೆಹಲಿಯಿಂದ ಪಾಟ್ನಾಗೆ 34 ವಿಮಾನ ಟಿಕೆಟ್ ಗಳನ್ನು ಬುಕ್ ಮಾಡಲು ಸಂಜಯ್ ಸಿಂಗ್ ನಿರ್ಧರಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. 33 ವಲಸಿಗ ಕಾರ್ಮಿಕರನ್ನು ಕರೆದುಕೊಂಡು ತಾವೂ ಸಹ ಪಾಟ್ನಾಗೆ ತೆರಳಲಿದ್ದಾರೆ ಸಂಜಯ್ ಸಿಂಗ್.
ಓರ್ವ ಸಂಸದನಿಗೆ ದೇಶಿಯ ವಿಮಾನಗಳಲ್ಲಿ ಸಂಚರಿಸಲು ವಾರ್ಷಿಕ 34 ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಗಳನ್ನು ಬಳಕೆ ಮಾಡಲು ಅವಕಾಶವಿದೆ. ಸಂಜಯ್ ಸಿಂಗ್ ಅವರ ಈ ನಿರ್ಧಾರವನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸ್ವಾಗತಿಸಿದ್ದಾರೆ. ಸಂಜಯ್ ಸಿಂಗ್ ಅವರ ಈ ನಿರ್ಧಾರ ಎಲ್ಲರಿಗೂ ಪ್ರೇರಕವಾದದ್ದು, ದೇವರು ಅನುಕೂಲ ನೀಡಿದ್ದಾನೆ ಎಂದರೆ ಅದನ್ನು ಅಗತ್ಯವಿರುವವರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಅವರ ಜವಾಬ್ದಾರಿಯಾಗಿರುತ್ತದೆ. ಸಂಜಯ್ ಸಿಂಗ್ ಅಭಿನಂದನೆಗೆ ಅರ್ಹರು ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


