ನೌಕರಿ ಕಳೆದುಕೊಂಡ ಶಿಕ್ಷಕನನಿಗೆ ವಿದ್ಯಾರ್ಥಿಗಳಿಂದ ನೆರವಿನ ಗಿಫ್ಟ್!
ಸಂಕಷ್ಟಕ್ಕೆ ಸಿಲುಕಿದ ಶಿಕ್ಷಕರ ನೆರವಿಗೆ ಹಳೆಯ ವಿದ್ಯಾರ್ಥಿಗಳು ಧಾವಿಸಿ, ಕೊರೋನಾ ಕಾಲದಲ್ಲಿ ಜೀವನ ನಿರ್ವಹಣೆಗೆ ಸಹಾಯ ಹಸ್ತ ಚಾಚಿದ್ದಾರೆ.

ಹೈದರಾಬಾದ್: ಸಂಕಷ್ಟಕ್ಕೆ ಸಿಲುಕಿದ ಶಿಕ್ಷಕರ ನೆರವಿಗೆ ಹಳೆಯ ವಿದ್ಯಾರ್ಥಿಗಳು ಧಾವಿಸಿ, ಕೊರೋನಾ ಕಾಲದಲ್ಲಿ ಜೀವನ ನಿರ್ವಹಣೆಗೆ ಸಹಾಯ ಹಸ್ತ ಚಾಚಿದ್ದಾರೆ.
ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ಕೋರುಟ್ಲಾದ ಹನುಮಂತುಲ ರಘು (52) ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಕೊರೋನಾದಿಂದ ಅವರ ಕೆಲಸಕ್ಕೇ ಸಂಚಕಾರ ಬಂದು ನೌಕರಿ ಕಳೆದುಕೊಂಡರು. ಈ ಹಂತದಲ್ಲಿ ಜೀವನ ಸಾಗಿಸಲು ದಿಕ್ಕು ತೋಚದಂತಾದ ಅವರಿಗೆ 1997-98 ರ ಬ್ಯಾಚ್ ನ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ತಂಡವೊಂದು ವಾಟ್ಸ್ ಆಪ್ ಮೂಲಕ ಜೊತೆಗೂಡಿ ಉಪಹಾರ ಕೇಂದ್ರ ತೆರೆಯುವುದಕೆಕ್ ಶೆಡ್ ನಿರ್ಮಿಸಿಕೊಟ್ಟು ಸಹಕರಿಸಿದ್ದಾರೆ.
ವಿದ್ಯಾರ್ಥಿಗಳ ನೆರವಿನಿಂದ ನಿರ್ಮಾಣಗೊಂಡ ಉಪಹಾರ ಕೇಂದ್ರಕ್ಕೆ ಶಿಕ್ಷಕ ರಘು ಅವರು ಗುರುದಕ್ಷಿಣ ಎಂಬ ಹೆಸರನ್ನಿಟ್ಟಿದ್ದಾರೆ.
ರಘು ಅವರ ಮಗ ಸಹ ಬಿ.ಇಡ್ ಪದವೀಧರರಾಗಿದ್ದು, ನೌಕರಿ ಇಲ್ಲದ ಪರಿಸ್ಥಿತಿ ಎದುರಿಸುತ್ತಿದ್ದಾರೆ. "ನನಗೆ ಸಹಾಯ ಮಾಡಿದ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸುವುದಕ್ಕೆ ಪದಗಳು ಇಲ್ಲದಂತಾಗಿದೆ" ಎನ್ನುತ್ತಾರೆ ರಘು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


